LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬಾನಿ ಮನೆ ಗಣೇಶೋತ್ಸವದಲ್ಲಿ ತಾರೆಯರ ಸಮ್ಮಿಲನ: ನವ ಜೋಡಿಗಳ ಸಾಂಪ್ರದಾಯಿಕ ವೈಭವ!

ಉದ್ಯಮಿ ಮುಕೇಶ್ ಅಂಬಾನಿ ನಿವಾಸ ‘ಅಂಟಿಲಿಯಾ’ದಲ್ಲಿ ನಡೆದ ಗಣೇಶ ಚತುರ್ಥಿ ಸಂಭ್ರಮದಲ್ಲಿ ಬಾಲಿವುಡ್‌ನ ಖ್ಯಾತ ತಾರಾ ಜೋಡಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸೆಪ್ಟೆಂಬರ್ 14ರಂದು ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ರಣ್‌ಬೀರ್ ಕಪೂರ್, ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಸೇರಿದಂತೆ ಹಲವು ನಟ-ನಟಿಯರು ಭಾರತೀಯ ಶೈಲಿಯ ಉಡುಪುಗಳಲ್ಲಿ ಮಿಂಚಿದರು.

ನಟಿ ಆಲಿಯಾ ಭಟ್ ಐಸ್ ಬ್ಲೂ ಬಣ್ಣದ ಸೀರೆಯಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರೆ, ಅವರಿಗೆ ಜೋಡಿಯಾಗಿ ರಣ್‌ಬೀರ್ ಕಪೂರ್ ನೇವಿ ಬ್ಲೂ ಕುರ್ತಾ ಹಾಗೂ ನೆಹರೂ ಜಾಕೆಟ್ ಧರಿಸಿ ಸರಳ ಹಾಗೂ ಗಂಭೀರ ನೋಟದಲ್ಲಿ ಕಾಣಿಸಿಕೊಂಡರು. ಅದೇ ರೀತಿ ಕಿಯಾರಾ ಅಡ್ವಾಣಿ ತಿಳಿ ಗುಲಾಬಿ ಬಣ್ಣದ ಚಂದೇರಿ ಸೀರೆಯಲ್ಲಿ ಕಂಗೊಳಿಸಿದರೆ, ಸಿದ್ಧಾರ್ಥ್ ಮಲ್ಹೋತ್ರಾ ಬಿಳಿ ಬಣ್ಣದ ಕುರ್ತಾದಲ್ಲಿ ಗಮನ ಸೆಳೆದರು.

ಇನ್ನು ಹಿರಿಯ ನಟಿ ಕರೀನಾ ಕಪೂರ್ ಹಳದಿ ಬಣ್ಣದ ಅನಾರ್ಕಲಿ ಡ್ರೆಸ್‌ನಲ್ಲಿ ಮಿಂಚಿದರೆ, ಸೈಫ್ ಅಲಿ ಖಾನ್ ಕೆಂಪು ಕುರ್ತಾ ಮತ್ತು ಬಿಳಿ ಧೋತಿ ಧರಿಸಿ ದೇಶಿ ಶೈಲಿಯಲ್ಲಿ ಆಗಮಿಸಿದ್ದರು. ಕತ್ರಿನಾ ಕೈಫ್ ಆಲೀವ್ ಗ್ರೀನ್ ಅನಾರ್ಕಲಿಯಲ್ಲಿ ಸುಂದರವಾಗಿ ಕಾಣಿಸಿಕೊಂಡರೆ, ಅವರಿಗೆ ಸಾಥ್ ನೀಡಿದ ವಿಕಿ ಕೌಶಲ್ ಬಿಳಿ ಮತ್ತು ಗೋಲ್ಡನ್ ಬಣ್ಣದ ಚಿಕ್ಕನ್‌ಕಾರಿ ಕುರ್ತಾದಲ್ಲಿ ಮಿಂಚಿದರು. ಜತೆಗೆ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ಜೋಡಿ ಕೂಡ ವರ್ಣರಂಜಿತ ಸಾಂಪ್ರದಾಯಿಕ ಉಡುಪಿನಲ್ಲಿ ಕಾರ್ಯಕ್ರಮದ ರಂಗು ಹೆಚ್ಚಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಫ್ಘಾನಿಸ್ತಾನದಲ್ಲಿ ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾಗೆ ತಡೆಎಣ್ಣೆ ಪ್ರಿಯರ ಗಮನಕ್ಕೆ: ನಾಳೆಯಿಂದ ಬೆಂಗಳೂರಿನ ಈ ಏರಿಯಾಗಳಲ್ಲಿ 'ಮಧ್ಯ' ಸಿಗಲ್ಲ80% ಡಿಸ್ಕೌಂಟ್ ಕೊಟ್ಟರೂ Amazon, Flipkartಗೆ ಲಾಭ ಹೇಗೆ? ಅಸಲಿ ಲೆಕ್ಕಾಚಾರ ಇಲ್ಲಿದೆ!ವಕೀಲರ ಕಲ್ಯಾಣಕ್ಕೆ ಭರ್ಜರಿ ಕೊಡುಗೆ: 5 ಲಕ್ಷ ರೂ. ವಿಮೆ, ಟ್ಯಾಬ್ಲೆಟ್ ಘೋಷಿಸಿದ ಸಿಎಂ ಯೋಗಿಖರ್ಗೆ ಭೇಟಿಯಾದ ಕ್ರೈಸ್ತ ನಿಯೋಗ: ಮತಾಂತರ ಕಾಯ್ದೆ ರದ್ದತಿ, ಶೇ.1ರಷ್ಟು ಮೀಸಲಾತಿ ಸೇರಿದಂತೆ ಹಲವು ಬೇಡಿಕೆಶಿವಮೊಗ್ಗದಲ್ಲಿ ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ನೈರ್ಮಲ್ಯ ಕೊರತೆ ಹಿನ್ನೆಲೆ 'ತನು ಜ್ಯೂಸ್ ಸೆಂಟರ್' ಸೀಜ್ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ, ಅವರದ್ದು ಕೇವಲ ರಾಜಕೀಯ ಮನಸ್ಥಿತಿ : ಸಿಎಂ ವಾಗ್ದಾಳಿBIG NEWS : ಸ್ಥಳೀಯ ಯೂಟ್ಯೂಬರ್ ಗಳಿಗೆ ಧಮ್ಕಿ ಹಾಕಿ ವಿಡಿಯೋ ಡಿಲೀಟ್ ಮಾಡಿಸಿದ ಪಿಐ ಧನಂಜಯ!BREAKING: ಇಂದು ಮಧ್ಯರಾತ್ರಿಯಿಂದ ಸೆ.17ರವರೆಗೆ 'ಬೆಸ್ಕಾಂ ಆನ್ ಲೈನ್ ಸೇವೆ' ಅಲಭ್ಯಪ್ರಜ್ವಲ್ ರೇವಣ್ಣ ಪ್ರಕರಣ ಮುಂದಿಟ್ಟು ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಕೇಂದ್ರ ಸಚಿವ HDK ಗುಡುಗು