LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ, ಅವರದ್ದು ಕೇವಲ ರಾಜಕೀಯ ಮನಸ್ಥಿತಿ : ಸಿಎಂ ವಾಗ್ದಾಳಿ

ಬೆಂಗಳೂರು: ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವುದೇ ಅಂಶವೂ ಕಾಣಿಸುವುದಿಲ್ಲ, ಅವರದ್ದು ಕೇವಲ ರಾಜಕೀಯ ಮಾಡುವ ಮನಸ್ಥಿತಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕೆ.ಆರ್. ವೃತ್ತದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಈ ರೀತಿಯ ಪ್ರವೃತ್ತಿಯನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದರು.

ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದು ವಿಚಾರದಲ್ಲೂ ತಪ್ಪು ಹುಡುಕುವುದೇ ಬಿಜೆಪಿ ನಾಯಕರ ಕೆಲಸವಾಗಿದೆ ಎಂದರು. ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಇದರಲ್ಲಿ ಆ ಅಧಿಕಾರಿ ಏನು ತಪ್ಪು ಮಾತನಾಡಿದ್ದಾರೆ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ಅನಗತ್ಯವಾಗಿ ಬಿಜೆಪಿಯವರು ಈ ವಿಚಾರವನ್ನು ಹಿರಿದು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರು ಅತ್ಯಂತ ಸಣ್ಣ ವಿಚಾರಗಳಿಗೂ ಬೀದಿಗೆ ಇಳಿದು ರಾಜಕೀಯ ಮಾಡುತ್ತಿರುವುದಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕರು ಪಂಚಾಯಿತಿ ಮಟ್ಟದ ವಿಚಾರಗಳಿಗೆ ಹೋಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದ ಅವರು, ಅವರಿಂದ ಇನ್ನಷ್ಟು ಜವಾಬ್ದಾರಿಯುತ ಹಾಗೂ ಉನ್ನತ ಮಟ್ಟದ ನಡವಳಿಕೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದರು. ಅಲ್ಲದೆ, ಯಾರೋ ಒಬ್ಬರು ಹೇಳಿದರು ಎಂಬ ಕಾರಣಕ್ಕೆ ಪ್ರಹ್ಲಾದ್ ಜೋಶಿ ಸೇರಿದಂತೆ ಪ್ರತಿಯೊಬ್ಬರೂ ಟ್ವೀಟ್ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ ಎಂದ ಡಿಸಿಎಂ, ಬಿಜೆಪಿಯವರು ಜನರನ್ನು ಪ್ರಚೋದಿಸುವ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕದ ಮೂಲಕವೇ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಗುತ್ತಿದ್ದು, ಇಲ್ಲಿ ಅಶಾಂತಿ ನಿರ್ಮಾಣವಾದರೆ ಇಡೀ ದೇಶಕ್ಕೇ ಕೆಟ್ಟ ಹೆಸರು ಬರಲಿದೆ. ಪ್ರಧಾನಮಂತ್ರಿಯವರು ದೇಶದ ಅಭಿವೃದ್ಧಿಯ ಬಗ್ಗೆ ಕಾಣುತ್ತಿರುವ ಕನಸಿಗೆ ಇಲ್ಲಿನ ಬಿಜೆಪಿ ನಾಯಕರೇ ಧಕ್ಕೆ ತರುತ್ತಿದ್ದಾರೆ. ರಾಜಕೀಯ ಅಥವಾ ಹೋರಾಟಗಳನ್ನು ಮಾಡಿ, ಆದರೆ ರಾಜ್ಯದಲ್ಲಿ ಅಶಾಂತಿ ಮೂಡಿಸಿ ಕರ್ನಾಟಕಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಅವರು ಆಗ್ರಹಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್‌ಸ್ಪೆಕ್ಟರ್ ಮಾಡಬಾರದ್ದು ಏನು ಮಾಡಿಲ್ಲ; ಧನಂಜಯ್ ಪರ ಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್ರೈತರ ಹಿತಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪಅಫ್ಘಾನಿಸ್ತಾನದಲ್ಲಿ ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾಗೆ ತಡೆಎಣ್ಣೆ ಪ್ರಿಯರ ಗಮನಕ್ಕೆ: ನಾಳೆಯಿಂದ ಬೆಂಗಳೂರಿನ ಈ ಏರಿಯಾಗಳಲ್ಲಿ 'ಮಧ್ಯ' ಸಿಗಲ್ಲ80% ಡಿಸ್ಕೌಂಟ್ ಕೊಟ್ಟರೂ Amazon, Flipkartಗೆ ಲಾಭ ಹೇಗೆ? ಅಸಲಿ ಲೆಕ್ಕಾಚಾರ ಇಲ್ಲಿದೆ!ವಕೀಲರ ಕಲ್ಯಾಣಕ್ಕೆ ಭರ್ಜರಿ ಕೊಡುಗೆ: 5 ಲಕ್ಷ ರೂ. ವಿಮೆ, ಟ್ಯಾಬ್ಲೆಟ್ ಘೋಷಿಸಿದ ಸಿಎಂ ಯೋಗಿಖರ್ಗೆ ಭೇಟಿಯಾದ ಕ್ರೈಸ್ತ ನಿಯೋಗ: ಮತಾಂತರ ಕಾಯ್ದೆ ರದ್ದತಿ, ಶೇ.1ರಷ್ಟು ಮೀಸಲಾತಿ ಸೇರಿದಂತೆ ಹಲವು ಬೇಡಿಕೆಶಿವಮೊಗ್ಗದಲ್ಲಿ ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ನೈರ್ಮಲ್ಯ ಕೊರತೆ ಹಿನ್ನೆಲೆ 'ತನು ಜ್ಯೂಸ್ ಸೆಂಟರ್' ಸೀಜ್ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ, ಅವರದ್ದು ಕೇವಲ ರಾಜಕೀಯ ಮನಸ್ಥಿತಿ : ಸಿಎಂ ವಾಗ್ದಾಳಿBIG NEWS : ಸ್ಥಳೀಯ ಯೂಟ್ಯೂಬರ್ ಗಳಿಗೆ ಧಮ್ಕಿ ಹಾಕಿ ವಿಡಿಯೋ ಡಿಲೀಟ್ ಮಾಡಿಸಿದ ಪಿಐ ಧನಂಜಯ!