LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ಕಸ್ತೂರಿ ರಂಗನ್ ವರದಿ ವಿರೋಧಿಸಿ 'ಶೃಂಗೇರಿ ಬಂದ್'ಗೆ ಕರೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಮುಂದಾಗಿರುವುದನ್ನು ಖಂಡಿಸಿ ಮಲೆನಾಡು ಭಾಗದಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಸರ್ಕಾರದ ಭರವಸೆಗಳ ಹೊರತಾಗಿಯೂ, ವರದಿಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಆಗ್ರಹಿಸಿ ನಾಳೆ (ಸೋಮವಾರ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

ಸ್ವಯಂಪ್ರೇರಿತ ಬಂದ್ ಹಾಗೂ ಪ್ರತಿಭಟನೆ

'ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ' ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿಯೂ ನಡೆಯಲಿದೆ.

ಬದುಕಿನ ಹಕ್ಕಿಗಾಗಿ ಆತಂಕದ ಕೂಗು

ಈ ವರದಿ ಅನುಷ್ಠಾನಗೊಂಡರೆ ಪರಿಸರ ಸೂಕ್ಷ್ಮ ವಲಯದ ನಿಯಮಗಳಿಂದಾಗಿ ಕೃಷಿ, ತೋಟಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ತೀವ್ರ ಹೊಡೆತ ಬೀಳಲಿದೆ. ತಮ್ಮದೇ ನೆಲದಲ್ಲಿ ಜನಸಾಮಾನ್ಯರು ನಿರ್ಬಂಧಗಳ ನಡುವೆ 'ಜೀವಂತ ಶವಗಳಂತೆ' ಬದುಕಬೇಕಾದ ದುಃಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಭರವಸೆಗಳಿಗೆ ಕ್ಯಾರೆ ಎನ್ನದ ಸ್ಥಳೀಯರು, ಶಾಶ್ವತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG BREAKING: ಕಾರ್ಕಳ ಬಳಿ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲುಇದು ಈ ವಾರದ 'ವೃಷಭ ರಾಶಿ'ಯವರ ಭವಿಷ್ಯ: ಹೇಗಿದೆ ಓದಿ!GOOD NEWS: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 'OPS ಭಾಗ್ಯ': ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶಹೀಗಿದೆ 'ಮೇಷ ರಾಶಿ'ಯ ವಾರದ ಭವಿಷ್ಯ ಓದಿ!BIG NEWS: ಸೂರಜ್ ರೇವಣ್ಣ ಪ್ರಕರಣದಲ್ಲಿ ಮರು ತನಿಖೆಯಲ್ಲೂ ಸಿಗಲ್ಲಿ ಸಾಕ್ಷಿ: 2ನೇ ಬಾರಿಯೂ ‘ಬಿ’ ರಿಪೋರ್ಟ್ ಸಲ್ಲಿಸಿದ CIDನಾಳೆ ಕಸ್ತೂರಿ ರಂಗನ್ ವರದಿ ವಿರೋಧಿಸಿ 'ಶೃಂಗೇರಿ ಬಂದ್'ಗೆ ಕರೆಮುಪ್ಪಾನೆಯಲ್ಲಿ ಪ್ರವಾಸಿಗರ ಅಕ್ರಮ ಚಟುವಟಿಕೆ: ಈ ಖಡಕ್ ಎಚ್ಚರಿಕೆ ಕೊಟ್ಟ ಕಾರ್ಗಲ್ ವೈಲ್ಟ್ ಲೈಫ್ RFO ನವೀನ್ ಕುಮಾರ್BREAKING : ಡಿಜೆ ಸದ್ದಿಗೆ ಮಗು ಅಸ್ವಸ್ಥ : ರಾಯಚೂರು ಡಿಸಿ ನಿವಾಸದ ಮುಂದೆ ತಂದೆಯಿಂದ ಪ್ರತಿಭಟನೆ!Rain in Karnataka : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಅರೆಸ್ಟ್ : ವಿಜಯಪುರ ಪೋಲೀಸರ ಆಂಟಿ ರೌಡಿ ಸ್ಕ್ವಾಡ್ ಕಾರ್ಯಾಚರಣೆ ಯಶಸ್ವಿ