LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣಪತಿ ಟಿ. ನಾಯ್ಕ ಟ್ರಸ್ಟ್‌ನಿಂದ ಮಹತ್ವದ ಕಾರ್ಯ: ಸಚಿವ ಮಧು ಬಂಗಾರಪ್ಪ

ಶಿರಸಿ ; ತಂದೆ-ತಾಯಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಶಾಸಕ ಭೀಮಣ್ಣ ಟಿ. ನಾಯ್ಕ ಅವರು ತಮ್ಮ ಸಹೋದರ ದಿವಂಗತ ಗಣಪತಿ ಟಿ. ನಾಯ್ಕ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿರುವುದು ವಿಶೇಷ. ಈ ಟ್ರಸ್ಟ್ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆದ ದಿವಂಗತ ಗಣಪತಿ ಟಿ. ನಾಯ್ಕ, ಮಳಗಾಂವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೀಮಣ್ಣ ಟಿ. ನಾಯ್ಕ ಹಾಗೂ ದಿವಂಗತ ಗಣಪತಿ ಟಿ. ನಾಯ್ಕ ಅವರೊಂದಿಗಿನ ತಮ್ಮ ಕುಟುಂಬದ ಆತ್ಮೀಯ ಸಂಬಂಧವನ್ನು ಸ್ಮರಿಸಿದರು.

ಭೀಮಣ್ಣ ಹಾಗೂ ಗಣಪತಿ ಅವರು ತಮ್ಮ ತಾಯಿಯ ಸಹೋದರರಾಗಿದ್ದು, ಇಬ್ಬರೂ ತಮ್ಮ ಪಾಲಿಗೆ ಮಾವಂದಿರು. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಪತಿ ಅವರು ತಮ್ಮ ಮನೆಯಲ್ಲಿಯೇ ಇದ್ದರು. ಬಂಗಾರಪ್ಪ ಅವರೊಂದಿಗೆ ಗಣಪತಿ ಅವರು ಹೊಂದಿದ್ದ ಆತ್ಮೀಯ ಸಂಬಂಧವನ್ನು ತಾವು ಬಾಲ್ಯದಿಂದಲೇ ಕಣ್ಣಾರೆ ಕಂಡಿರುವುದಾಗಿ ಸಚಿವರು ಹೇಳಿದರು.

“ಗಣಪತಿ ಅವರು ಇಂದು ಬದುಕಿದ್ದರೆ ಸಮಾಜದಲ್ಲಿ ಬಹಳ ಎತ್ತರದ ಸ್ಥಾನದಲ್ಲಿರುತ್ತಿದ್ದರು. ಜನರಿಗೆ ಸಹಾಯ ಮಾಡಬೇಕು, ಜನಪರವಾಗಿ ಕೆಲಸ ಮಾಡಬೇಕು ಎಂಬ ತುಡಿತ ಅವರಲ್ಲಿತ್ತು. ನಮ್ಮ ತಂದೆಯವರು ಅಷ್ಟು ಸುಲಭವಾಗಿ ಕಣ್ಣೀರು ಹಾಕುವವರಲ್ಲ. ಆದರೆ ಗಣಪತಿ ಅವರು ಅಕಾಲಿಕ ಅಪಘಾತದಲ್ಲಿ ಮೃತಪಟ್ಟಾಗ ನಮ್ಮ ತಂದೆಯವರು ಕಣ್ಣೀರು ಹಾಕಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ” ಎಂದು ಅವರು ಭಾವುಕರಾಗಿ ಸ್ಮರಿಸಿದರು.

ಬಂಗಾರಪ್ಪ ಅವರೊಂದಿಗೆ ಇದ್ದ ಸಂದರ್ಭದಲ್ಲಿ ಗಣಪತಿ ಅವರು ಸ್ವಂತ ಮಗನಿಗಿಂತಲೂ ಹೆಚ್ಚು ಆತ್ಮೀಯರಾಗಿದ್ದರು. ಗಣಪತಿ ಅವರು ಕಲ್ಯಾಣ ಮಂಟಪ ನಿರ್ಮಿಸಬೇಕು ಎಂಬ ಉದ್ದೇಶದಿಂದ ಓಡಾಡುತ್ತಿದ್ದರು. ಆದರೆ ವಿಧಿಯ ಹಣೆಬರಹ ಬೇರೆಯಾಗಿತ್ತು. ಅವರು ನಿರ್ಮಿಸಲು ಉದ್ದೇಶಿಸಿದ್ದ ಕಲ್ಯಾಣ ಮಂಟಪಕ್ಕೆ ಕೊನೆಗೆ ಅವರ ಹೆಸರನ್ನೇ ಇಡುವಂತಾಯಿತು ಎಂದು ಮಧು ಬಂಗಾರಪ್ಪ ಹೇಳಿದರು.

“ನಾವು ನಮ್ಮ ತಂದೆಯವರ ಹೊಟ್ಟೆಯಲ್ಲಿ ಹುಟ್ಟಿ ಪುಣ್ಯ ಮಾಡಿದ್ದೇವೆ. ಆದರೆ ಬಂಗಾರಪ್ಪ ಅವರ ಹೊಟ್ಟೆಯಲ್ಲಿ ಹುಟ್ಟದೇ ಗಣಪತಿ ಅವರು ಪುಣ್ಯ ಮಾಡಿದ್ದಾರೆ. ಇಂದು ಅವರ ಸಹೋದರ ಭೀಮಣ್ಣ ಅವರು ಉತ್ತಮ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿದ ಶಿರಸಿ-ಸಿದ್ದಾಪುರ ಕ್ಷೇತ್ರದ ಜನ ದೊಡ್ಡವರು. ಮುಂದೆ ಭೀಮಣ್ಣ ಅವರು ಸಚಿವರಾಗಲಿ ಎಂಬುದು ನನ್ನ ಆಶಯ” ಎಂದು ಸಚಿವರು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬಣ್ಣದ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ವಹಿಸಿದ್ದರು. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಗಣಪತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನದ ಮಾಜಿ ಅಧ್ಯಕ್ಷ ರವಿ ಬೆಳ್ಳಿಮನೆ, ಸ್ವಾದಿ ಚಾರಿಟೇಬಲ್ ಟ್ರಸ್ಟ್‌ನ ಉದಯ ಸ್ವಾದಿ, ಶಿರಸಿ ಅರ್ಬನ್ ಬ್ಯಾಂಕ್‌ನ ಜಯದೇವ ನಿಲೇಕಣಿ, ಖ್ಯಾತ ನೇತ್ರ ತಜ್ಞ ಡಾ. ಶಿವರಾಮ ಕೆ.ವಿ., ಸಹಕಾರಿ ಧುರೀಣರಾದ ಆರ್.ಎಂ. ಹೆಗಡೆ, ಎಸ್.ಕೆ. ಭಾಗ್ವತ್, ಗೀತಾ ಭೀಮಣ್ಣ ನಾಯ್ಕ, ಅಶ್ವೀನ್ ಭೀಮಣ್ಣ ನಾಯ್ಕ, ಡಾ. ಪ್ರಿಯಾಂಕ ಅಶ್ವೀನ್ ನಾಯ್ಕ, ಸುನೀಲ ಬಿ. ನಾಯ್ಕ, ಅಕ್ಷಯ ಡಿ. ನಾಯ್ಕ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಲಿಸುತ್ತಿದ್ದ ಬಸ್‌ನಲ್ಲೇ ಗ್ಯಾಂಗ್‌ರೇಪ್; ನಿರ್ಭಯಾ ಪ್ರಕರಣ ಉಲ್ಲೇಖಿಸಿ ಸುಪ್ರೀಂಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆಸಚಿನ್‌ರ 100 ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೆಷ್ಟು ಶತಕ ಬೇಕು? ಲೆಕ್ಕಾಚಾರ ಹೀಗಿದೆಚಿಕನ್, ಮಟನ್‌ಗಿಂತಲೂ ಹೆಚ್ಚು ಪ್ರೋಟೀನ್.. ಕಸರತ್ತು ಮಾಡುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ!Chanakya Neeti : ಶತ್ರುವನ್ನು ಎದುರಿಸಬೇಕಾದರೆ ಆವೇಶವಲ್ಲ..ಈ 7 ತಂತ್ರಗಳನ್ನು ತಿಳಿದುಕೊಳ್ಳಿ!ಪ್ರೇಮಾನಂದ ಮಹಾರಾಜ್ ಶಿಷ್ಯನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಖಾಸಗಿ ಅಂಗಕ್ಕೆ ಗಾಯ, ರಕ್ತದ ಕಲೆಗಳಿದ್ದ ಗ್ರೈಂಡರ್ ಪತ್ತೆ!ಸಾಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸುವುದೇ ನನ್ನ ಸಂಕಲ್ಪ: ಶಾಸಕ ಬೇಳೂರು ಗೋಪಾಲಕೃಷ್ಣರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೆಮು ರೈಲುಗಳ ಸಂಚಾರ ರದ್ದುಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ನೀಡಲು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿಬ್ಯಾಂಕ್ ಖಾತೆದಾರರು ಮೃತಪಟ್ಟರೆ ಹಣ ಯಾರಿಗೆ ಸಿಗುತ್ತೆ? RBI ನಿಯಮ ತಿಳಿಯಿರಿಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್.. ಟ್ಯಾಕ್ಸ್ ಆಡಿಟ್, ITR ಸಲ್ಲಿಕೆ ಗಡುವು ವಿಸ್ತರಣೆ; ಹೊಸ ದಿನಾಂಕಗಳಿವು