LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

"ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ, ತಿಳಿದು ಬದುಕುವುದೇ ನಿಜವಾದ ಧರ್ಮ" : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ

ಮೈಸೂರು : ಮೈಸೂರು ದಸರಾ 2026 ಮಹೋತ್ಸವಕ್ಕೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು, ಧರ್ಮದ ಕುರಿತು ಆಳವಾದ ಹಾಗೂ ಅರ್ಥಪೂರ್ಣ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಮನುಷ್ಯನನ್ನು ಕೇವಲ ಸ್ವರ್ಗಕ್ಕೆ ಕರೆದುಕೊಂಡು ಹೋಗುವುದೇ ಧರ್ಮವಲ್ಲ, ಬದಲಾಗಿ ಮನುಷ್ಯನಿರುವ ಈ ಭೂಮಿಯನ್ನೇ ಸ್ವರ್ಗದ ದೃಶ್ಯವನ್ನಾಗಿ ಪರಿವರ್ತಿಸುವುದೇ ನಿಜವಾದ ಧರ್ಮದ ಅಂತಿಮ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮದ ವ್ಯಾಖ್ಯಾನವನ್ನು ಸರಳವಾಗಿ ವಿವರಿಸಿದ ಶ್ರೀಗಳು, ಮಹಾನ್ ಕವಿ ಸರ್ವಜ್ಞನ ವಚನಗಳನ್ನು ಉದಾಹರಿಸಿದರು. ಬಾಯಾರಿದವರಿಗೆ ನೀರು ನೀಡುವುದು, ಹಸಿದವರಿಗೆ ಅನ್ನ ದಾಸೋಹ ಮಾಡುವುದು ಮತ್ತು ದುಃಖದಿಂದ ಅಳುತ್ತಾ ಬರುವವರ ಕಣ್ಣೀರು ಒರೆಸಿ ಎರಡು ಪ್ರೀತಿಯ ಮಾತುಗಳನ್ನು ಆಡುವುದೇ ನಿಜವಾದ ಧರ್ಮ ಎಂದು ತಿಳಿಸಿದರು. ಧರ್ಮ ಎಂದರೆ ಇತರೆ ವ್ಯಕ್ತಿಗಳನ್ನು ತುಳಿದು ಮುಂದೆ ಬರುವುದಲ್ಲ, ಬದಲಾಗಿ ಪರಸ್ಪರ ಅರಿತು, ಜೊತೆಯಾಗಿ ಬಾಳುವುದೇ ನಿಜವಾದ ಧರ್ಮ ಎಂದು ಶ್ರೀಗಳು ಸಾರಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ಧಾಳಿಸಾಗರದ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅದ್ಧೂರಿ ಚಾಲನೆಚುನಾವಣಾ ಆಯೋಗದ ಬೆಂಬಲಕ್ಕೆ 124 ನಿವೃತ್ತ IAS ಅಧಿಕಾರಿಗಳು: ವೋಟ್ ರಿಗ್ಗಿಂಗ್ ಆರೋಪ ತಳ್ಳಿಹಾಕಿ ಪತ್ರ!"ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ, ತಿಳಿದು ಬದುಕುವುದೇ ನಿಜವಾದ ಧರ್ಮ" : ಗವಿ ಸಿದ್ದೇಶ್ವರ ಶ್ರೀ ಹೇಳಿಕೆFIR ದಾಖಲಿಸುವುದನ್ನು ಮುಂದುವರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆBREAKING : ಇಂಟರ್ನೆಟ್ ಕಡಿತಗೊಳಿಸಬೇಡಿ, ಕೂಡಲೇ ಬ್ಯಾರಿಕೆಡ್ ಗಳನ್ನ ತೆಗೆದುಹಾಕಿ : ಸುಪ್ರೀಂ ಕೋರ್ಟ್ ಖಡಕ್ ಸೂಚನೆ!ಮೈಸೂರು ದಸರಾಗೆ ಚಾಲನೆ ನೀಡುತ್ತಿದ್ದಂತೆ ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಆರಂಭ!PPF Income Strategy: ಪಿಪಿಎಫ್‌ನಿಂದ ಪ್ರತಿ ತಿಂಗಳು ₹61,000 ಪಿಂಚಣಿ: ಅಸಲು ಮುಟ್ಟದೆ ಆದಾಯ ಗಳಿಸುವ ಸೀಕ್ರೆಟ್ ಇಲ್ಲಿದೆ!'ನಾನು ಸಂಬಂಧಿಕರು ಎಂದು ಸಹಾಯ ಮಾಡಿದ್ದೆ ಅಷ್ಟೆ, ಯಾವುದೇ ರೀತಿ ಹಣ ಪಡೆದಿಲ್ಲ' : ED ಮುಂದೆ ಸಾಹುಕಾರ್ ವ್ಯತಿರಿಕ್ತ ಹೇಳಿಕೆ!ಮತದಾರರ ಹೆಸರನ್ನು ಕಿತ್ತುಹಾಕುವುದು ಅಮಾನವೀಯ ಕೃತ್ಯ: ಸಿಎಂ ಡಿ ಕೆ ಶಿವಕುಮಾರ್