LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯನ್ ಪ್ಯಾರಾ ಗೇಮ್ಸ್‌: ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಮೋನಾ ಅಗರ್ವಾಲ್

ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್‌ -2026ರಲ್ಲಿ ಮೋನಾ ಅಗರ್ವಾಲ್ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

ಐಚಿ-ನಗೋಯಾದಲ್ಲಿ ನಡೆಯುತ್ತಿದ್ದ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನ 10 ಮೀಟರ್ ಏರ್ ರೈಫಲ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಮೋನಾ ಅಗರ್ವಾಲ್ ಮತ್ತು ಅವನಿ ಲೇಖರಾ ಅತ್ಯುತ್ತಮ ಪ್ರದರ್ಶನ ನೀಡಿ, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಶೂಟರ್‌ಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅಂತಿಮ ಹಂತದಲ್ಲಿ ಮೋನಾ ಅವರು ಅಂಕಟ್ಟಿಯಲ್ಲಿ 629.1 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರು. ಈ ಮೂಲಕ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚೀನಾದ ಜಾಂಗ್ ಕ್ಯೂಪಿಂಗ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಅವನಿ ಲೇಖರಾ ಅವರು 629.4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ತಮ್ಮದಾಗಿಸಿಕೊಂಡರು.

ಪುರುಷರ ವಿಭಾಗದಲ್ಲಿ ಭಾರತ ನಿರಾಶೆಯನ್ನು ಎದುರಿಸಿತು. 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಫೈನಲ್‌ನಲ್ಲಿ ಭಾರತ ಯಾವುದೇ ಪದಕ ಗೆಲ್ಲಲಿಲ್ಲ. ಮಹಾನೀರ್ ಸ್ವರೂಪ್ ಉನ್ಹಾಲ್ಕರ್ (205.9) ನಾಲ್ಕನೇ ಸ್ಥಾನ ಪಡೆದರೆ, ಚೊಚ್ಚಲ ಶೂಟರ್ ರಾಕೇಶ್ ನಿಡಗುಂಡಿ 141.5 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ, ರಾಕೇಶ್ (619.3) ಮತ್ತು ಉನ್ಹಾಲ್ಕರ್ (617.4) ಕ್ರಮವಾಗಿ ಏಳನೇ ಮತ್ತು ಎಂಟನೇ ಸ್ಥಾನ ಪಡೆದು ಫೈನಲ್ ತಲುಪಿದರು, ಆದರೆ ಆನಂದ್ ಕೃಷ್ಣನ್ 605.2 ಅಂಕಗಳೊಂದಿಗೆ 13 ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಅಪ್ರಾಪ್ತ ಸೇರಿ ಮೂವರ ಬಂಧನ

ಮುಂಬೈ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡಿನ ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನ ‘ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್’ (ATF) ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರ ಮೂಲದ ಹೃತಿಕ್ ಕುಮಾರ್, ಹರಿಯಾಣ ಮೂಲದ ಫೂಲ್ ಸಿಂಗ್ ಹಾಗೂ ಹರಿಯಾಣ ಮೂಲದ ರೆಹಾನ್ ಎಂದು ಗುರುತಿಸಲಾಗಿದೆ. ಅಪ್ರಾಪ್ತರನ್ನು ಬಳಸಿಕೊಂಡು ಗ್ಯಾಂಗ್ಸ್ಟರ್ ಗಳು ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಮುಂಬೈನಿಂದ ದೆಹಲಿಯತ್ತ ರೈಲಿನಲ್ಲಿ (ರೈಲು ಸಂಖ್ಯೆ 12939) ಪ್ರಯಾಣಿಸುತ್ತಿದ್ದ ಈ ಆರೋಪಿಗಳನ್ನ ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪಿಗಳು, ವಸಾಯಿಯಲ್ಲಿ ರೈಲು ಹತ್ತಿದ್ದರು. ರೈಲು ಕೋಟಾ ನಿಲ್ದಾಣಕ್ಕೆ ಬಂದಾಗ ಈ ಮೂವರು ಆರೋಪಿಗಳನ್ನ ತಡೆಹಿಡಿಯಲಾಗಿದೆ.

12939 ಸಂಖ್ಯೆಯ ರೈಲು ‘ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್’ ಆಗಿದ್ದು, ಪುಣೆ ಜಂಕ್ಷನ್‌ನಿಂದ ಜೈಪುರ ಜಂಕ್ಷನ್‌ ನಡುವೆ ಸಂಚರಿಸುತ್ತದೆ. ಈ ರೈಲು ಕಲ್ಯಾಣ ಜಂಕ್ಷನ್ ಮತ್ತು ವಸಾಯಿ ರಸ್ತೆಯಲ್ಲಿ ಸ್ಟಾಪ್‌ ಹೊಂದಿದ್ದು, ಗುಜರಾತ್ ಮತ್ತು ಮಧ್ಯಪ್ರದೇಶದ ಮೂಲಕ ಹಾದು ರಾಜಸ್ಥಾನವನ್ನ ಪ್ರವೇಶಿಸುತ್ತದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಟೈಗರ್ ಶ್ರಾಫ್ ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್‌ಬಾಲ್ ಮೈದಾನದಿಂದ ಹೊರಡುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ನಟ ಅಪಾಯದಿಂದ ಪಾರಾಗಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಈ ಗ್ಯಾಂಗ್‌ನ ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಪೋಸ್ಟ್ ಪ್ರಕಟವಾಗಿತ್ತು. ಆದರೆ, ಆ ಪೋಸ್ಟ್‌ನ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಹಲವು ತಂಡಗಳನ್ನ ರಚಿಸಿದ್ದಾರೆ. ಪ್ರಕರಣವನ್ನ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಟೈಗರ್ ಶ್ರಾಫ್ ಮೇಲೆ ದಾಳಿ ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1) (ಕೊಲೆ ಯತ್ನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೋರ್ ಇದೆ, ಕರೆಂಟ್ ಇದೆ, ಆದ್ರೂ ನೀರಿಲ್ಲ: ಸಾಗರದ 'ಕಲ್ಮನೆ ಗ್ರಾಮ ಪಂಚಾಯ್ತಿ' ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾರದ ನೀರು!ಪತಿ ನಿಧನದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದ ನಟಿ ಅರುಣಾ ಇರಾನಿ; ಭಾವುಕ ಸಂದೇಶ ವೈರಲ್ |WATCHಏಷ್ಯನ್ ಪ್ಯಾರಾ ಗೇಮ್ಸ್: ಪುರುಷರ ಜಾವೆಲಿನ್ ಎಸೆತದಲ್ಲಿ ರಿಂಕುಗೆ ಚಿನ್ನ, ಅಜೀತ್ ಸಿಂಗ್ ಗೆ ಬೆಳ್ಳಿಅಂಬಾನಿ ಕುಟುಂಬದ ಜೊತೆ ನವರಾತ್ರಿ ಸಂಭ್ರಮದಲ್ಲಿ ಧೋನಿ! ಪತ್ನಿ ಸಾಕ್ಷಿ ಜೊತೆಗಿನ ತುಂಟಾಟಕ್ಕೆ ಫ್ಯಾನ್ಸ್ ಫಿದಾ | VIDEOBIG NEWS: ಸ್ಟಿಂಗ್ ಆಪರೇಷನ್‌ನ ಅಸಲಿ ಪಿತಾಮಹ ಮಧು ಬಂಗಾರಪ್ಪ, ಮೊದಲು ಬಲಿ ಆಗಿದ್ದೇ ನಾನು: ಮಾಜಿ ಸಚಿವ ಹಾಲಪ್ಪಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಬಿಗ್ ಅಲರ್ಟ್! ನ.30ರೊಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ಸ್ಥಗಿತ.!ನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!ನವೆಂಬರ್ 8 ಭಾನುವಾರ NSE, BSE ದೀಪಾವಳಿ ‘ಮುಹೂರ್ತ ಟ್ರೇಡಿಂಗ್’ಆಟವಾಡುತ್ತಿದ್ದಾಗ ಅಲ್ಯೂಮಿನಿಯಂ ಪಾತ್ರೆಯೊಳಗೆ ಸಿಲುಕಿದ ಬಾಲಕನ ತಲೆ ! ಮುಂದೇನಾಯ್ತು? WATCH VIDEO‘ಪಾಕಿಸ್ತಾನದ ಕೈಗೊಂಬೆಯಾಗಬೇಡಿ’… ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ OIC ವಿರುದ್ಧ ಭಾರತ ಕಿಡಿ!