LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದ ಹೆಮ್ಮೆಯ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಯಾತ್ರೆಗೆ ಡಿಕೆಶಿ ಚಾಲನೆ: ಪ್ರವಾಸೋದ್ಯಮಕ್ಕೆ ಹೊಸ ಮೆರುಗು!

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' (Golden Chariot) ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಮ್ಮೆ ಹೊಸ ಉತ್ತೇಜನ ನೀಡಿದರು.

ಈ ಐಷಾರಾಮಿ ರೈಲು ಯಾತ್ರೆಯು ಕರ್ನಾಟಕದ ರಾಜವೈಭವ, ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ಸುವರ್ಣಾವಕಾಶವಾಗಿದೆ. ದೇಶ-ವಿದೇಶಗಳ ಪ್ರವಾಸಿಗರಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ಹತ್ತಿರದಿಂದ ಅನುಭವಿಸಲು ಈ ರೈಲು ಸೂಕ್ತ ವೇದಿಕೆಯಾಗಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ goldenchariot.com ಮುಖಾಂತರ ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.

ಪ್ರವಾಸಿಗರಿಗಾಗಿ ರೈಲ್ವೆ ಇಲಾಖೆಯು ವಿವಿಧ ಅವಧಿಗಳ ಆಕರ್ಷಕ ಮೂರು ಪ್ರಮುಖ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. 'ಪ್ರೈಡ್ ಆಫ್ ಕರ್ನಾಟಕ' (Pride of Karnataka) ಪ್ಯಾಕೇಜ್ 5 ರಾತ್ರಿ ಮತ್ತು 6 ದಿನಗಳ ಅವದ್ದದ್ದಾಗಿದ್ದು, ಇದರ ದರ ರೂ. 4,87,500 ಆಗಿದೆ. ಈ ಮಾರ್ಗದಲ್ಲಿ ಬೆಂಗಳೂರಿನಿಂದ ಹೊರಟು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು ಅರಮನೆ, ಬೇಲೂರು ಮತ್ತು ಹಳೇಬೀಡು, ಚಿಕ್ಕಮಗಳೂರು, ಹಂಪಿ, ಪಟ್ಟದಕಲ್ಲು, ಐಹೊಳೆ ಹಾಗೂ ಗೋವಾ ಮೂಲಕ ಅಂತಿಮವಾಗಿ ಬೆಂಗಳೂರಿಗೆ ವಾಪಸ್ ಆಗಲಿದೆ.

ಇದಲ್ಲದೆ, ದಕ್ಷಿಣ ಭಾರತದ ಐತಿಹಾಸಿಕ ತಾಣಗಳನ್ನು ಪರಿಚಯಿಸುವ 'ಜ್ಯುವೆಲ್ಸ್ ಆಫ್ ಸೌತ್' (Jewels of South) ಯಾತ್ರೆಯು 6 ರಾತ್ರಿ ಮತ್ತು 7 ದಿನಗಳ ಕಾಲ ನಡೆಯಲಿದ್ದು, ಇದರ ದರವೂ ಸಹ ರೂ. 4,87,500 ನಿಗದಿಪಡಿಸಲಾಗಿದೆ. ಈ ಯಾತ್ರೆಯಲ್ಲಿ ಬೆಂಗಳೂರು, ಮೈಸೂರು, ಹಂಪಿ ಜೊತೆಗೆ ತಮಿಳುನಾಡಿನ ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು ಹಾಗೂ ಕೇರಳದ ಕೊಚ್ಚಿ ಮತ್ತು ಕುಮಾರಕೋಮ್ ನೈಸರ್ಗಿಕ ತಾಣಗಳನ್ನು ವೀಕ್ಷಿಸಬಹುದು. ಇದರೊಂದಿಗೆ ಕಡಿಮೆ ಅವಧಿಯ ಪ್ರವಾಸ ಬಯಸುವವರಿಗಾಗಿ 3 ರಾತ್ರಿ ಮತ್ತು 4 ದಿನಗಳ 'ಗ್ಲಿಂಪ್ಸಸ್ ಆಫ್ ಕರ್ನಾಟಕ' (Glimpses of Karnataka) ಪ್ಯಾಕೇಜ್ ಲಭ್ಯವಿದ್ದು, ಇದರ ದರ ರೂ. 3,31,500 ಇದೆ.

https://twitter.com/i/status/2113883667202470341

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಭಾಸ್ ‘ಸ್ಪಿರಿಟ್’ ಚಿತ್ರಕ್ಕೆ ದೀಪಾವಳಿ 2027 ರಿಲೀಸ್ ಡೇಟ್ ಸಿಕ್ಕಿದ್ದೇಗೆ? ಹೊರಬಂತು ರಣಬೀರ್ ಕಪೂರ್ ನೀಡಿದ ಸೀಕ್ರೆಟ್ ಟಿಪ್ಸ್!ವಿದೇಶಗಳಲ್ಲಿ ಅಮೆರಿಕನ್ನರ ಹತ್ಯೆಗೆ ಇರಾನ್ ಸಂಚು: ಮುಂದುವರಿದ ಹಂತ ತಲುಪಿದ ಪ್ರಯತ್ನಗಳ ಬಗ್ಗೆ ಅಮೆರಿಕ ಗುಪ್ತಚರ ಎಚ್ಚರಿಕೆಭಾರತಕ್ಕೆ ಗೆಲ್ಲಲು 181 ರನ್ ಗುರಿ ನೀಡಿದ ಕಿವೀಸ್: ಹ್ಯಾಗ್ಲಿ ಓವಲ್‌ನಲ್ಲಿ ರೋಚಕ ಹಂತ ತಲುಪಿದ ಎರಡನೇ ಟಿ20 ಪಂದ್ಯ!ದೀಪಾವಳಿಗೂ ಮುನ್ನ ಚಿನ್ನ, ಬೆಳ್ಳಿ ದರ ಭಾರಿ ಕುಸಿತ! ಬೆಲೆ ಇಳಿಕೆಗೆ 4 ಪ್ರಮುಖ ಕಾರಣಗಳೇನು?ನಲ್ಲಿ ಇದೆ, ನೀರು ಬರಲ್ಲ!: 2023ರಲ್ಲೇ JJM ಹಸ್ತಾಂತರವಾದರೂ ಆನ್ ಆಗದ ಮೋಟಾರ್OTP ವಂಚಕರ ಆಟ ಇನ್ಮುಂದೆ ನಡೆಯಲ್ಲ ; ಮೆಸೇಜ್‌ನಲ್ಲಿ ಮಹತ್ವದ ಬದಲಾವಣೆ ತರಲು TRAI ಸಿದ್ದತೆದೇಶದ ಶೇ.52.5ರಷ್ಟು ಪ್ರದೇಶದಲ್ಲಿ ಬರದ ಛಾಯೆ; ಅನ್ನದಾತರಿಗೆ ಮುಂದಿನ ಬಿತ್ತನೆಯೇ ಸವಾಲು!ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ: 4.76 ಮಿಲಿಯನ್ ಹೆಸರುಗಳು ಕೈಬಿಟ್ಟರೂ ಸಲ್ಲಿಕೆಯಾಗಿದ್ದು ಕೇವಲ 2.5 ಲಕ್ಷ ಫಾರ್ಮ್ 6 ಅರ್ಜಿಗಳು!ವಿದೇಶಿ ಪ್ರತಿಭೆಗಳನ್ನು ಮರಳಿ ಕರೆತರುವ ಯೋಜನೆ ಬಗ್ಗೆ ಪಿಯೂಷ್  ಗೋಯಲ್ ಹೇಳಿಕೆ; ಅಭಿಜೀತ್ ದೀಪ್ಕೆ ಉಲ್ಲೇಖಿಸಿ ವ್ಯಂಗ್ಯಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ : ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಯುವತಿ!