LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಖಾಸಗಿ ಜೆಟ್‌ನಲ್ಲಿ ಹನಿಮೂನ್‌ಗೆ ಹಾರಿದ ನವದಂಪತಿ ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್!

ಇತ್ತೀಚೆಗಷ್ಟೇ ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿರುವ ನವದಂಪತಿ ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಇದೀಗ ಐಷಾರಾಮಿ ಹನಿಮೂನ್ ಪ್ರವಾಸಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಒಡೆತನದ ಅತ್ಯಂತ ಐಷಾರಾಮಿ ಖಾಸಗಿ ಜೆಟ್ ವಿಟಿ-ಎಸ್‌ಆರ್‌ಹೆಚ್ (VT-SRH) ಮೂಲಕ ಈ ಜೋಡಿ ಪ್ರಯಾಣ ಬೆಳೆಸಿದೆ ಎನ್ನಲಾಗಿದೆ. ಗ್ರೀಸ್‌ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದ ಬಳಿಕ ಇದೀಗ ತಮ್ಮ ಹೈ-ಪ್ರೊಫೈಲ್ ಹನಿಮೂನ್ ಪ್ರವಾಸದ ಮೂಲಕ ಮತ್ತೊಮ್ಮೆ ಈ ನವಜೋಡಿ ಸುದ್ದಿಯಲ್ಲಿದೆ.

ಭಾರತದ ಅಗ್ರಗಣ್ಯ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಅನಿರುದ್ಧ್, ದೇಶದ ಪ್ರತಿಷ್ಠಿತ ಉದ್ಯಮಿ ಕುಟುಂಬದ ಕಾವ್ಯಾ ಮಾರನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬದುಕನ್ನು ಆರಂಭಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ನವದಂಪತಿಯ ಐಷಾರಾಮಿ ಹನಿಮೂನ್ ಪ್ರವಾಸದ ಸುದ್ದಿ ಭಾರಿ ವೈರಲ್ ಆಗುತ್ತಿದ್ದು, ಭಾರಿ ಗಮನ ಸೆಳೆಯುತ್ತಿದೆ. ಆದರೆ, ಈ ಪ್ರವಾಸದ ಕುರಿತು ಕುಟುಂಬಸ್ಥರಿಂದ ಅಥವಾ ದಂಪತಿಯಿಂದ ಇನ್ನೂ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಪ್ರಮುಖ ನೀರಿನ ಬ್ರ್ಯಾಂಡ್ ಬಿಸ್ಲೇರಿ ಕಂಪನಿಗೆ FSSAI ಬಿಗ್ ಶಾಕ್: ಅಸುರಕ್ಷಿತ ನೀರು ಮಾರಾಟ ಆರೋಪದಡಿ ಕಾನೂನು ಕ್ರಮಕ್ಕೆ ಅನುಮತಿ‘ಕೌನ್ ಬನೇಗಾ ಕರೋಡ್ ಪತಿ -18’ರಲ್ಲಿ ಪಂಜಾಬ್ ಬಗ್ಗೆ ಪ್ರಶ್ನೆ ವಿವಾದ: ಅಮಿತಾಭ್ ಬಚ್ಚನ್, ಸೋನಿ ಟಿವಿಗೆ ಸಂಕಷ್ಟ…?‘ಜಾತಿವಾದಿ, ಪುರುಷ ಪ್ರಧಾನ ಮನಸ್ಥಿತಿಯವರು’: ಬಿಜೆಪಿ, RSS ವಿರುದ್ಧ ರಾಹುಲ್ ಗಾಂಧಿ ಮತ್ತೆ ತೀವ್ರ ವಾಗ್ದಾಳಿ: ಅರ್ಧನಾರೀಶ್ವರ ಚಿತ್ರ ಪೋಸ್ಟ್ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಭೇಟಿಗಾಗಿ ದೆಹಲಿಗೆ ಆಗಮಿಸಿದ ನೇಪಾಳ ಪ್ರಧಾನಿ ಬಲೇಂದ್ರ ಶಾ: ನಾಳೆ ಪ್ರಧಾನಿ ಮೋದಿ ಜತೆ ಮಾತುಕತೆಬಾಕ್ಸ್ ಆಫೀಸ್ ನಲ್ಲಿ ‘ರಾಮಾಯಣ’ ನಾಗಾಲೋಟ: 17 ದಿನಗಳಲ್ಲಿ ಜಾಗತಿಕ ಗಳಿಕೆ ₹1,616 ಕೋಟಿ; ₹1,700 ಕೋಟಿ ಕ್ಲಬ್ ನತ್ತ ಯಶ್ ಸಿನಿಮಾGold Price Crash: 14 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ, ಗರಿಷ್ಠ ದರದಿಂದ ಬರೋಬ್ಬರಿ ₹59,000 ಇಳಿಕೆಎನ್ವಿಡಿಯಾ ಎಐ ಚಿಪ್ ಗಳ ಕಳ್ಳಸಾಗಣೆ ಜಾಲ ಬಯಲು: ಸಿಂಗಾಪುರದ ಉದ್ಯಮಿ ಆಲಿಸ್ ಹುವಾಂಗ್ ವಿರುದ್ಧ ಗಂಭೀರ ಆರೋಪಡೆಟಾಲ್ ಸೋಪ್ ನಲ್ಲಿದ್ದ ಬ್ಲೇಡ್: ಸ್ನಾನ ಮಾಡುವಾಗ ಮಗುವಿನ ಕೆನ್ನೆಗೆ ಗಾಯ: ರೆಕಿಟ್ ಇಂಡಿಯಾ ಕಂಪನಿಗೆ ದಂಡ ವಿಧಿಸಿದ ಕೋರ್ಟ್ಪಿಯುಸಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಿಯಕರಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ: ಉತ್ಪಾದನಾ ವೆಚ್ಚ, ಕಚ್ಚಾ ವಸ್ತುಗಳ ದರ ಹೆಚ್ಚಳ ಹಿನ್ನೆಲೆ ಕಂಪನಿ ನಿರ್ಧಾರ