LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಿಯುಸಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಿಯಕರ

ಚೆನ್ನೈ: 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರಿಯಕರನೊಬ್ಬ ಚಾಕುವಿನಿಂದ ಇರಿದು, ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಕೊಲೆ ನಡೆಸಿದ ಬಳಿಕ ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಬಾಲಕಿಯ ಮನೆಯಲ್ಲೇ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆರೋಪಿಯನ್ನು ಸ್ಥಳೀಯ ವೆಲ್ಡಿಂಗ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ ಎಂದು ಗುರುತಿಸಲಾಗಿದೆ.

ಆರೋಪಿ ಮುತ್ತುರಾಜ ಮತ್ತು ಬಾಲಕಿ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ಅವರ ಮನೆಯಲ್ಲಿ ತಿಳಿದಾಗ ಆ ಬಾಲಕಿಯ ಓದು ಮುಗಿದ ನಂತರ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಪದೇಪದೇ ಜಗಳಗಳಾಗುತ್ತಿದ್ದು, ಸಂಬಂಧ ಹಳಸಿತ್ತು. ಬಾಲಕಿ ಫೋನ್‌ನಲ್ಲಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಮುತ್ತುರಾಜ ಅನುಮಾನಿಸುತ್ತಿದ್ದ ಮತ್ತು ಈ ವಿಚಾರವಾಗಿ ಆಗಾಗ ಆಕೆಯೊಂದಿಗೆ ಜಗಳವಾಡುತ್ತಿದ್ದ.

ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲೇ ಒಬ್ಬಳೇ ಇದ್ದಳು. ಈ ವೇಳೆ ಮನೆಗೆ ಬಂದ ಮುತ್ತುರಾಜ ಅದೇ ವಿಚಾರವಾಗಿ ಆಕೆಯನ್ನು ಪ್ರಶ್ನಿಸಿದ್ದಾನೆ. ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೋಪಗೊಂಡ ಮುತ್ತುರಾಜ ಬಾಲಕಿಗೆ ಚಾಕುವಿನಿಂದ ಇರಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಬಾಲಕಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಅದೇ ಆಯುಧದಿಂದ ತನಗೆ ತಾನೇ ಇರಿದುಕೊಂಡು ಗಂಭೀರವಾಗಿ ಗಾಯಗೊಂಡು ಮನೆಯೊಳಗೆ ಕುಸಿದು ಬಿದ್ದಿದ್ದಾನೆ.

ಮನೆಯೊಳಗೆ ಬಾಲಕಿ ಮತ್ತು ಗಾಯಗೊಂಡ ಸ್ಥಿತಿಯಲ್ಲಿದ್ದ ಯುವಕನನ್ನು ಕಂಡ ಸ್ಥಳೀಯರು ತಕ್ಷಣವೇ ಮುತ್ತುರಾಜನನ್ನು ರಕ್ಷಿಸಿ, ಚಿಕಿತ್ಸೆಗಾಗಿ ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಬತೈಯಾಪುರಂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಎಸ್ಟೇಟ್ ಮಾಲೀಕನ ಮನೆಯ ಮೇಲೆ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆದ ದುಷ್ಕರ್ಮಿಗಳು

ಚಿಕ್ಕಮಗಳೂರು: ದುಷ್ಕರ್ಮಿಗಳ ತಂಡವೊಂದು ಶಿಕಾರಿಗೆ ಬಂದವರಂತೆ ನಟಿಸಿ ಎಸ್ಟೇಟ್ ಮಾಲೀಕರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿ ಪರರೈಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

5-6 ಜನರಿದ್ದ ದುಷ್ಕರ್ಮಿಗಳ್ ತಂಡ ಮನೆ ಮೇಲೆ ಗುಂಡಿನ ದಾಳಿ ನಡೆಸಿದೆ.ದಾಳಿಯಿಂದಾಗಿ ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಿಟಕಿ, ಗೋಡೆಗಳು ಛಿದ್ರ ಛಿದ್ರವಾಗಿವೆ. ಸುಮಾರು 5 ರಿಂದ 6 ಜನರಿದ್ದ ತಂಡದಿಂದ ಮೂರು ಸುತ್ತಿ ಗುಂಡು ಹಾರಿಸಲಾಗಿದೆ.

ಚಿಕ್ಕಮಗಳುರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಮಾಲೀಕ ವಿಂದನ್ ಎಂಬುವವರ ಮನೆಯ ಮೇಲೆ ಸುಮಾರು 5 ರಿಂದ 6 ಜನರಿದ್ದ ತಂಡ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದೆ.

ಗುಂಡಿನ ರಭಸಕ್ಕೆ ಮನೆಯ ಕಿಟಕಿ ಹಾಗೂ ಗೋಡೆಗಳು ಛಿದ್ರ-ಛಿದ್ರಗೊಂಡಿವೆ. ಏಕಾಏಕಿ ಕೇಳಿಬಂದ ಗುಂಡಿನ ಸದ್ದಿನಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದುಷ್ಕರ್ಮಿಗಳು ಮನೆಯ ಬಳಿ ಬಂದೂಕು ಸಮೇತ ಬರುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಅಲರ್ಟ್ ಸಿಗ್ನಲ್ ಬಂದಿದ್ದು, ದಾಳಿಕೋರರ ಸಂಪೂರ್ಣ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದಲೇ ಈ ಫೈರಿಂಗ್ ನಡೆಸಲಾಗಿದೆ ಎಂದು ಮನೆ ಮಾಲೀಕ ವಿಂದನ್ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಪ್ರಮುಖ ನೀರಿನ ಬ್ರ್ಯಾಂಡ್ ಬಿಸ್ಲೇರಿ ಕಂಪನಿಗೆ FSSAI ಬಿಗ್ ಶಾಕ್: ಅಸುರಕ್ಷಿತ ನೀರು ಮಾರಾಟ ಆರೋಪದಡಿ ಕಾನೂನು ಕ್ರಮಕ್ಕೆ ಅನುಮತಿ‘ಕೌನ್ ಬನೇಗಾ ಕರೋಡ್ ಪತಿ -18’ರಲ್ಲಿ ಪಂಜಾಬ್ ಬಗ್ಗೆ ಪ್ರಶ್ನೆ ವಿವಾದ: ಅಮಿತಾಭ್ ಬಚ್ಚನ್, ಸೋನಿ ಟಿವಿಗೆ ಸಂಕಷ್ಟ…?‘ಜಾತಿವಾದಿ, ಪುರುಷ ಪ್ರಧಾನ ಮನಸ್ಥಿತಿಯವರು’: ಬಿಜೆಪಿ, RSS ವಿರುದ್ಧ ರಾಹುಲ್ ಗಾಂಧಿ ಮತ್ತೆ ತೀವ್ರ ವಾಗ್ದಾಳಿ: ಅರ್ಧನಾರೀಶ್ವರ ಚಿತ್ರ ಪೋಸ್ಟ್ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಭೇಟಿಗಾಗಿ ದೆಹಲಿಗೆ ಆಗಮಿಸಿದ ನೇಪಾಳ ಪ್ರಧಾನಿ ಬಲೇಂದ್ರ ಶಾ: ನಾಳೆ ಪ್ರಧಾನಿ ಮೋದಿ ಜತೆ ಮಾತುಕತೆಬಾಕ್ಸ್ ಆಫೀಸ್ ನಲ್ಲಿ ‘ರಾಮಾಯಣ’ ನಾಗಾಲೋಟ: 17 ದಿನಗಳಲ್ಲಿ ಜಾಗತಿಕ ಗಳಿಕೆ ₹1,616 ಕೋಟಿ; ₹1,700 ಕೋಟಿ ಕ್ಲಬ್ ನತ್ತ ಯಶ್ ಸಿನಿಮಾGold Price Crash: 14 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ, ಗರಿಷ್ಠ ದರದಿಂದ ಬರೋಬ್ಬರಿ ₹59,000 ಇಳಿಕೆಎನ್ವಿಡಿಯಾ ಎಐ ಚಿಪ್ ಗಳ ಕಳ್ಳಸಾಗಣೆ ಜಾಲ ಬಯಲು: ಸಿಂಗಾಪುರದ ಉದ್ಯಮಿ ಆಲಿಸ್ ಹುವಾಂಗ್ ವಿರುದ್ಧ ಗಂಭೀರ ಆರೋಪಡೆಟಾಲ್ ಸೋಪ್ ನಲ್ಲಿದ್ದ ಬ್ಲೇಡ್: ಸ್ನಾನ ಮಾಡುವಾಗ ಮಗುವಿನ ಕೆನ್ನೆಗೆ ಗಾಯ: ರೆಕಿಟ್ ಇಂಡಿಯಾ ಕಂಪನಿಗೆ ದಂಡ ವಿಧಿಸಿದ ಕೋರ್ಟ್ಪಿಯುಸಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಿಯಕರಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ: ಉತ್ಪಾದನಾ ವೆಚ್ಚ, ಕಚ್ಚಾ ವಸ್ತುಗಳ ದರ ಹೆಚ್ಚಳ ಹಿನ್ನೆಲೆ ಕಂಪನಿ ನಿರ್ಧಾರ