ಬೆಂಗಳೂರು : ಐಪಿಎಲ್ ಫೈನಲ್ ಪಂದ್ಯದ ದಿನದಂದು ಆರ್‌ಸಿಬಿ (RCB) ಅಭಿಮಾನಿಗಳಿಗೆ ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ಪಷ್ಟಪಡಿಸಿದೆ.
ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಯಾವುದೇ ಯೋಜನೆ ಅಥವಾ ಪ್ರಸ್ತಾಪಕ್ಕೆ ಬಿಎಂಆರ್‌ಸಿಎಲ್ ಅನುಮೋದನೆ ನೀಡಿಲ್ಲ. ಅಂತಹ ಯಾವುದೇ ಘೋಷಣೆಯನ್ನು ನಿಗಮ ಮಾಡಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಅಥವಾ ಎನ್‌ಸಿಎಂಸಿ (NCMC) ಕಾರ್ಡ್‌ಗಳಂತಹ ಅಧಿಕೃತ ವಿಧಾನಗಳ ಮೂಲಕ ಟಿಕೆಟ್ ಖರೀದಿಸುವುದು ಕಡ್ಡಾಯವಾಗಿದೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಅಧಿಕೃತ ಮಾಹಿತಿಗಾಗಿ ಕೇವಲ ಬಿಎಂಆರ್‌ಸಿಎಲ್‌ನ ಅಧಿಕೃತ ಚಾನೆಲ್‌ಗಳನ್ನು ಮಾತ್ರ ಗಮನಿಸಲು ಸೂಚಿಸಲಾಗಿದೆ.’ಕನ್ಫರ್ಮ್‌ಟಿಕ್ಟ್’ (ConfirmTkt) ಆಪ್‌ನಂತಹ ಖಾಸಗಿ ಪ್ಲಾಟ್‌ಫಾರ್ಮ್‌ಗಳು ಇಂತಹ ಆಫರ್‌ಗಳನ್ನು ಘೋಷಿಸಿರುವ ಬಗ್ಗೆ ವರದಿಯಾಗಿದ್ದರೂ, ಬಿಎಂಆರ್‌ಸಿಎಲ್ ಇಂತಹ ಯಾವುದೇ ಕ್ರಮಕ್ಕೆ ಅನುಮತಿ ನೀಡಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.