ಬೆಂಗಳೂರು: ವಿದ್ಯಾರ್ಥಿಗಳ ಶಿಕ್ಷಣ ಜೀವನದಲ್ಲಿ ವರ್ಗಾವಣೆ ಪ್ರಮಾಣಪತ್ರ(Transfer Certificate – TC) ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಒಂದು ಶಾಲೆ ಅಥವಾ ಕಾಲೇಜಿನಿಂದ ಮತ್ತೊಂದು ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಟಿಸಿ ಕಡ್ಡಾಯವಾಗಿರುತ್ತದೆ. ಆದರೆ ಕೆಲವೊಮ್ಮೆ ವಿದ್ಯಾರ್ಥಿಗಳು ಪಡೆದಿರುವ ಮೂಲ ಟಿಸಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಡುಪ್ಲಿಕೇಟ್ ಟಿಸಿ (ನಕಲು ವರ್ಗಾವಣೆ ಪ್ರಮಾಣಪತ್ರ) ಪಡೆಯಬಹುದು.
ಡುಪ್ಲಿಕೇಟ್ T.C ’ ಪಡೆಯಲು ಏನೆಲ್ಲಾ ದಾಖಲೆಗಳು ಬೇಕು.
ಡುಪ್ಲಿಕೇಟ್ ಟಿಸಿ ಪಡೆಯಲು ವಿದ್ಯಾರ್ಥಿಗಳು ಶಾಲೆಗೆ ಅರ್ಜಿ ಸಲ್ಲಿಸುವಾಗ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು:
- ಟಿ.ಸಿ. ನೀಡುವಂತೆ ಮನವಿ ಪತ್ರ (ಅರ್ಜಿ)
- ಟಿ.ಸಿ. ಕಳೆದುಹೋದ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಸ್ವೀಕೃತಿ ಪ್ರತಿ
- ಮೊದಲ ಟಿಸಿ ಕಳೆದುಹೋಗಿರುವ ಕುರಿತು ಹಾಗೂ ಡುಪ್ಲಿಕೇಟ್ ಟಿಸಿ ಪಡೆಯುವ ಉದ್ದೇಶವನ್ನು ವಿವರಿಸುವ ನೋಟರಿ ಅಫಿಡವಿಟ್
- ನಿಗದಿತ ಶುಲ್ಕ ಪಾವತಿಸಿದ ರಸೀದಿ
- ಸರ್ಕಾರಿ ಖಾತೆ ಸಂಖ್ಯೆ:
- ಪಾವತಿಸಬೇಕಾದ ಶುಲ್ಕ: ₹25
- ಸಂಬಂಧಿತ ಶಾಲೆಯ DISE (UDISE) ಕೋಡ್ ಸಂಖ್ಯೆ
ವಿಶೇಷ ಸೂಚನೆ
- ಹಳೆಯ ಟಿಸಿಯ ಜೆರಾಕ್ಸ್ ಪ್ರತಿಯಿದ್ದರೆ ಅದನ್ನು ಸಲ್ಲಿಸುವುದು ಉತ್ತಮ.
- ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು (ಅಂಕಪಟ್ಟಿ, ಗುರುತಿನ ಚೀಟಿ, ದಾಖಲೆ ಪುಸ್ತಕ ಇತ್ಯಾದಿ) ಇದ್ದರೆ ಜೊತೆಗೆ ಸಲ್ಲಿಸುವುದು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ವಿದ್ಯಾರ್ಥಿಗಳಿಗೆ ಸಲಹೆ
ವಿದ್ಯಾರ್ಥಿಗಳು ತಮ್ಮ ಟಿಸಿ ಸೇರಿದಂತೆ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು. ಒಂದು ವೇಳೆ ದಾಖಲೆ ಕಳೆದುಹೋದರೆ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಗತ್ಯ ದಾಖಲೆಗಳೊಂದಿಗೆ ಶಾಲೆಯನ್ನು ಸಂಪರ್ಕಿಸುವುದು
ವಿಶೇಷ ಸೂಚನೆ : ಸರ್ಕಾರಿ ಖಾತೆ ಸಂಖ್ಯೆ ಆಯಾ ಕಾಲಕ್ಕೆ ಬದಲಾಗಬಹುದು, ಈ ಕುರಿತ ಅನುಮಾನಗಳಿದ್ದರೆ ಶಾಲೆಯ ಮುಖ್ಯೋಪಾಧ್ಯಾಯರನ್ನ ಸಂಪರ್ಕಿಸಬಹುದಾಗಿದೆ.
