ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಿಇಟಿ (CET) ಕೌನ್ಸೆಲಿಂಗ್‌ಗಾಗಿ ನಡೆಸುವ ವೈದ್ಯಕೀಯ ತಪಾಸಣೆಯ ಕುರಿತು ಈ ಹಿಂದಿನ ವರ್ಷಗಳಲ್ಲಿ (ಉದಾಹರಣೆಗೆ 2023, 2024 ಮತ್ತು 2025ರಲ್ಲಿ) ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಆರಂಭದಲ್ಲಿ ಪ್ರಕಟಣೆಗಳನ್ನು ಹೊರಡಿಸುತ್ತಿತ್ತು.
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿಶೇಷ ಚೇತನರ ಕೋಟಾದಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಮೇ 26ರಿಂದ ಜೂನ್ 2ರವರೆಗೆ ವಿಕ್ಟೋರಿಯಾ ಮತ್ತು ಮಿಂಟೊ ಆಸ್ಪತ್ರೆಗಳಲ್ಲಿ ನಡೆಯಲಿದೆ.
ಅರ್ಜಿಯಲ್ಲಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಕೆಇಎ ವೆಬ್ ಸೈಟ್ ನಲ್ಲಿ ಮೇ 23ರಂದು ಬಿಡುವ ಲಿಂಕ್ ಮೂಲಕ ಮುಂಗಡವಾಗಿ ದಿನಾಂಕ ನಿಗದಿಪಡಿಸಿಕೊಂಡು ತಪಾಸಣೆಗೆ ಹೋಗಬೇಕು. ಕಣ್ಣಿಗೆ ಸಂಬಂಧಿಸಿದಂತೆ ಮಿಂಟೊ ಹಾಗೂ ಇತರ ವೈಕಲ್ಯಗಳಿಗೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಮುಂದೆ ತಪಾಸಣೆಗೆ ಹಾಜರಾಗಬೇಕಾಗುತ್ತದೆ. ಇಲ್ಲಿ ಅರ್ಹರಾದವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ.