LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಫಾ ವಿಶ್ವಕಪ್ 2026: ‘ಮೆಸ್ಸಿ ಯಾರು?’ ಎಂದವನಿಗೆ 100 ವರ್ಷದ ಅರ್ಜೆಂಟೀನಾ ಅಭಿಮಾನಿ ಕೊಟ್ಟ ಕೌಂಟರ್ ವೈರಲ್

ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಅರ್ಜೆಂಟೀನಾ ಮತ್ತು ಆಸ್ಟ್ರಿಯಾ ನಡುವೆ ನಡೆದ ಪಂದ್ಯವು ಕೇವಲ ಮೈದಾನದ ಆಟದಿಂದ ಮಾತ್ರವಲ್ಲದೆ, ಗ್ಯಾಲರಿಯಲ್ಲಿ ನಡೆದ ಅಪರೂಪದ ಘಟನೆಯೊಂದರಿಂದ ಭಾರಿ ಸುದ್ದಿಯಾಗಿದೆ. ಡಲ್ಲಾಸ್‌ನಲ್ಲಿ ನಡೆದ ಈ ಗ್ರೂಪ್ ಜೆ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ನಡುವಿನ ಸಣ್ಣ ಕಿತ್ತಾಟ ಪ್ರೇಕ್ಷಕರ ಗಮನ ಸೆಳೆದಿದೆ.

ಪಂದ್ಯದ ನೇರ ಪ್ರಸಾರದ ವೇಳೆ ಕ್ಯಾಮೆರಾಗಳು ಪ್ರೇಕ್ಷಕರತ್ತ ತಿರುಗಿದಾಗ, ಆಸ್ಟ್ರಿಯಾ ತಂಡದ ಅಭಿಮಾನಿಯೊಬ್ಬ ತನ್ನ ಬರಿ ಮೈಮೇಲೆ ‘ಮೆಸ್ಸಿ ಯಾರು?’ (MESSI WHO) ಎಂದು ಬರೆದುಕೊಂಡು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿಯನ್ನು ಕಾಲೆಳೆಯಲು ಯತ್ನಿಸಿದ್ದನು. ತನ್ನ ದೇಶದ ಕೆಂಪು ಬಣ್ಣದ ಜರ್ಸಿ ಧರಿಸಿದ ನೂರಾರು ಬೆಂಬಲಿಗರ ಮಧ್ಯೆ ನಿಂತು ಆತ ಈ ರೀತಿ ಪೋಸ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ, ಇದಕ್ಕೆ ಕೌಂಟರ್ ಕೊಡುವಂತೆ ಕ್ಯಾಮೆರಾ ಕಣ್ಣುಗಳು ಮತ್ತೋರ್ವ ಅಭಿಮಾನಿಯತ್ತ ತಿರುಗಿದಾಗ ಇಡೀ ಕ್ರೀಡಾಂಗಣವೇ ರೋಮಾಂಚನಗೊಂಡಿತು. ಅರ್ಜೆಂಟೀನಾ ತಂಡದ ಸಾಂಪ್ರದಾಯಿಕ ನೀಲಿ ಮತ್ತು ಬಿಳಿ ಬಣ್ಣದ ಜರ್ಸಿ ಧರಿಸಿದ್ದ 100 ವರ್ಷದ ಹಿರಿಯ ಅಭಿಮಾನಿಯೊಬ್ಬರು, ತಮ್ಮ ಕೈಯಲ್ಲಿ ‘100 ವರ್ಷದ ಮೆಸ್ಸಿ ಅಭಿಮಾನಿ’ ಎಂದು ಬರೆದಿದ್ದ ಬೋರ್ಡ್ ಹಿಡಿದು ಮುಗುಳ್ನಗುತ್ತಾ ನಿಂತಿದ್ದರು. ಮೆಸ್ಸಿಯನ್ನು ರೇಗಿಸಿದ ಆಸ್ಟ್ರಿಯಾ ಯುವಕನಿಗೆ ಈ ಶತಾಯುಷಿ ತಾತನ ನಿಷ್ಠೆ ಮತ್ತು ನಗುವೇ ಅತ್ಯುತ್ತಮ ಉತ್ತರ ಎಂದು ಫುಟ್‌ಬಾಲ್ ಪ್ರೇಮಿಗಳು ಕೊಂಡಾಡುತ್ತಿದ್ದಾರೆ. ಒಂದು ಕಡೆ ಮೆಸ್ಸಿಯ ಸಾಧನೆಯನ್ನು ಪ್ರಶ್ನಿಸಿದರೆ, ಮತ್ತೊಂದು ಕಡೆ ಫುಟ್‌ಬಾಲ್ ಮೇಲಿರುವ ಜೀವಮಾನದ ಪ್ರೀತಿ ಸಾಬೀತಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಕೊನೆಗೆ ಮೈದಾನದಲ್ಲೂ ಮೆಸ್ಸಿ ತಮ್ಮ ಅದ್ಭುತ ಆಟದ ಮೂಲಕ ಆಸ್ಟ್ರಿಯಾ ಅಭಿಮಾನಿಗಳಿಗೆ ತಕ್ಕ ಶಾಸ್ತಿ ಮಾಡಿದರು. ಈ ರೋಚಕ ಪಂದ್ಯದಲ್ಲಿ 38 ವರ್ಷದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಭರ್ಜರಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 2-0 ಅಂತರದ ಜಯ ತಂದುಕೊಟ್ಟರು. ಈ ಪ್ರದರ್ಶನದೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಒಟ್ಟು 18 ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಮೆಸ್ಸಿ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್ ಅರ್ಜೆಂಟೀನಾ ಈ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ