LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯಕೀಯದಲ್ಲಿ 384 ಸೀಟು ಉಳಿಕೆ, ದಂತ ವೈದ್ಯಕೀಯ ಎಲ್ಲ ಸೀಟು ಹಂಚಿಕೆ: ಯುಜಿ ನೀಟ್ 2ನೇ ಸುತ್ತಿನ ಫಲಿತಾಂಶ ಪ್ರಕಟ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಪ್ರಕಟಿಸಿದೆ.

ಎಂಸಿಸಿ ಮತ್ತು ಕೆಇಎ - ಎರಡೂ ಕೌನ್ಸೆಲಿಂಗ್ ಗಳಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಒಂದು ವೇಳೆ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಸೆ.14ರ ಸಂಜೆ 5ಗಂಟೆವರೆಗೆ ಚಾಯ್ಸ್- 4 ಆಯ್ಕೆ‌‌ ಮಾಡಿಕೊಂಡು ಕೆಇಎಯಿಂದ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಈ ರೀತಿ ಚಾಯ್ಸ್-4 ಹಾಕಿ‌ ಹೊರ ಹೋಗುವ ಅಭ್ಯರ್ಥಿಗಳಿಂದ ತೆರವಾಗುವ ಸೀಟುಗಳನ್ನು 2ನೇ ಸುತ್ತಿಗೇ ಪರಿಗಣಿಸಿ, ಮತ್ತೊಮ್ಮೆ ಸೀಟು ಹಂಚಿಕೆ (Re-Run) ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ವೈದ್ಯಕೀಯ ಕೋರ್ಸ್ ನಲ್ಲಿ ಒಟ್ಟು 12,010 ಸೀಟುಗಳ ಪೈಕಿ 11,626 ಸೀಟು ಹಂಚಿಕೆಯಾಗಿವೆ. ಮ್ಯಾನೇಜ್ಮೆಂಟ್ ಕೋಟಾದ ಇನ್ನೂ 384 ಸೀಟು ಬಾಕಿ ಉಳಿದಿವೆ. ಆದರೆ ದಂತ ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 2,689 ಸೀಟುಗಳೂ ಹಂಚಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.ಕೆ ಶಿವಕುಮಾರ್ ಜನಸಾಮಾನ್ಯರ ಸಿಎಂ; ಬಿಜೆಪಿ ಪಾದಯಾತ್ರೆ ವಿಜಯೇಂದ್ರನ ವೈಯಕ್ತಿಕ ಪ್ರಚಾರಕ್ಕಷ್ಟೇ- ಶಾಸಕ ಗೋಪಾಲಕೃಷ್ಣ ಬೇಳೂರುಕರ್ನಾಟಕ SIR : ಹಿರಿಯ ನಾಗರಿಕರು, ರೋಗಿಗಳಿಗೆ ವಿನಾಯಿತಿ; ಕುಟುಂಬಸ್ಥರ ಹಾಜರಾತಿಗೆ ಸಿಇಒ ಅನುಮತಿ!ಕಸ್ತೂರಿರಂಗನ್ ವರದಿ: ರೈತರ ಹಿತವೇ ಮೊದಲ ಆದ್ಯತೆ: ಸಿಎಂ ಡಿ‌ ಕೆ ಶಿವಕುಮಾರ್BREAKING: ವಿಧಾನಸಭೆ ವಿಶೇಷ ಅಧಿವೇಶನದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ರೈತರ ಸಮಸ್ಯೆ, ಕಸ್ತೂರಿರಂಗನ್ ವರದಿ ಕುರಿತು ಚರ್ಚೆಸರ್ಕಾರದ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡನೆಗೆ ಒತ್ತು ನೀಡಿ: ಪ್ರಾಸಿಕ್ಯೂಷನ್‌ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆಅಕ್ರಮವಾಗಿ ವಾಹನ ಜಪ್ತಿ ಮಾಡಿದ ಬ್ಯಾಂಕ್ ಗೆ 1.10 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗವೈದ್ಯಕೀಯದಲ್ಲಿ 384 ಸೀಟು ಉಳಿಕೆ, ದಂತ ವೈದ್ಯಕೀಯ ಎಲ್ಲ ಸೀಟು ಹಂಚಿಕೆ: ಯುಜಿ ನೀಟ್ 2ನೇ ಸುತ್ತಿನ ಫಲಿತಾಂಶ ಪ್ರಕಟBIG NEWS: ಮಾರ್ಚ್ ಒಳಗೆ ಜೆಜೆಎಂ ಕಾಮಗಾರಿ ಮುಗಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ಗುತ್ತಿಗೆದಾರರಿಗೆ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆBREAKING: ಐದೇ ದಿನಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಇಎಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಹ ಸ್ಥಿತಿ ಶಿಕಾರಿಪುರ ಜನತೆಯದ್ದು; ಸಚಿವ ಮಧು ಬಂಗಾರಪ್ಪ