LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

9 ಬೌಂಡರಿ, 8 ಭರ್ಜರಿ ಸಿಕ್ಸರ್; ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬುಧಾಬಿ ಟಿ10 ಲೀಗ್‌ನಲ್ಲಿ ಹೊಸ ಇತಿಹಾಸ ಬರೆದ ಶಿಮ್ರಾನ್ ಹೆಟ್ಮೆಯರ್

ಅಬುಧಾಬಿ: ಬಿಡುವಿನ ವೇಳೆಯಲ್ಲೂ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾ ಆಟದ ಸೂಕ್ಷ್ಮತೆಗಳನ್ನು ಕಲಿಯುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್, ಅಬುಧಾಬಿ ಟಿ10 ಲೀಗ್‌ನಲ್ಲಿ ಐತಿಹಾಸಿಕ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಗುರುವಾರ ರಾತ್ರಿ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯುನೈಟೆಡ್ ಟೈಗರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಮಿರೇಟ್ಸ್ ಈಗಲ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೆಯರ್, ಕೇವಲ 39 ಎಸೆತಗಳಲ್ಲಿ ಅಜೇಯ 102 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಅಂತಿಮ ಓವರ್‌ನಲ್ಲಿ ಜೀಶನ್ ನಸೀರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ 37ನೇ ಎಸೆತದಲ್ಲಿ ಶತಕ ಪೂರೈಸಿದ ಅವರು, ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದರು.

ಈ ಹಿಂದೆ 2024ರಲ್ಲಿ ಶೆರ್ಫೇನ್ ರುದರ್‌ಫೋರ್ಡ್ 40 ಎಸೆತಗಳಲ್ಲಿ ಶತಕ ಗಳಿಸಿದ್ದು ಟೂರ್ನಿಯ ಮೊದಲ ಹಾಗೂ ವೇಗದ ಶತಕವಾಗಿತ್ತು. ಇದೀಗ ಹೆಟ್ಮೆಯರ್ ಮೂರು ಎಸೆತಗಳ ಮುನ್ನವೇ ಈ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು 428 ರನ್ ಕಲೆಹಾಕಿರುವ ಹೆಟ್ಮೆಯರ್, ಕಳೆದ ವರ್ಷ ಟಿಮ್ ಡೇವಿಡ್ ನಿರ್ಮಿಸಿದ್ದ 393 ರನ್‌ಗಳ ಸಾರ್ವಕಾಲಿಕ ದಾಖಲೆಯನ್ನೂ ಮುರಿದಿದ್ದಾರೆ. ಒಂದೇ ಆವೃತ್ತಿಯಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯೂ ಇವರ ಪಾಲಾಗಿದೆ.

ಪಂದ್ಯದ ಬಳಿಕ ಮಾತನಾಡಿದ ಹೆಟ್ಮೆಯರ್, ತಾವು ಮೈದಾನದಲ್ಲಿ ಇಲ್ಲದಿದ್ದರೂ ಸದಾ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಾ ಬೌಲರ್‌ಗಳ ತಂತ್ರಗಾರಿಕೆ ಮತ್ತು ಪಿಚ್ ವರ್ತನೆಯನ್ನು ಅಭ್ಯಾಸ ಮಾಡುವುದಾಗಿ ತಿಳಿಸಿದರು. ಆರಂಭದ ಪಂದ್ಯಗಳಲ್ಲಿ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಫಲವಾಗುತ್ತಿದ್ದೆ. ಬಳಿಕ ನಾಯಕ ರೋವ್ಮನ್ ಪೊವೆಲ್ ಸಲಹೆಯಂತೆ ಆರಂಭದ ಎರಡು ಮೂರು ಎಸೆತಗಳನ್ನು ಗಮನಿಸಿ ಆಡಲು ಶುರುಮಾಡಿದ್ದು ದೊಡ್ಡ ಬದಲಾವಣೆ ತಂದಿತು ಎಂದು ಅವರು ವಿವರಿಸಿದ್ದಾರೆ.

ಹೆಟ್ಮೆಯರ್ ಅವರ ಈ ಅಮೋಘ ಬ್ಯಾಟಿಂಗ್ ನೆರವಿನಿಂದ ಎಮಿರೇಟ್ಸ್ ಈಗಲ್ಸ್ ತಂಡ 1 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಯುನೈಟೆಡ್ ಟೈಗರ್ಸ್ 107 ರನ್‌ಗಳಿಗೆ ಸೀಮಿತಗೊಂಡು 40 ರನ್‌ಗಳ ಸೋಲು ಕಂಡಿತು. ಈ ಗೆಲುವಿನೊಂದಿಗೆ ಈಗಲ್ಸ್ ತಂಡ 10 ಅಂಕಗಳನ್ನು ಸಂಪಾದಿಸಿದರೂ, ನೆಟ್ ರನ್ ರೇಟ್ ಕೊರತೆಯಿಂದಾಗಿ ಅಗ್ರ ಮೂರರ ಪಟ್ಟಿಯಿಂದ ಹೊರಗುಳಿದು ಟೂರ್ನಿಯಿಂದ ನಿರ್ಗಮಿಸಿದೆ. ವೈಯಕ್ತಿಕ ದಾಖಲೆಗಿಂತ ತಂಡ ಪ್ಲೇಆಫ್ ತಲುಪಿದ್ದರೆ ಇನ್ನಷ್ಟು ಸಂತೋಷವಾಗುತ್ತಿತ್ತು ಎಂದು ಹೆಟ್ಮೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಡ್ರೋನ್ ಹಾರಾಟ ತಾತ್ಕಾಲಿಕ ನಿಷೇಧಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತುರಾಜಕಾರಣಿಗಳು ಹೇಗಿರಬೇಕು? ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಶಾರುಖ್​ ಖಾನ್​ ಹಳೆಯ ವಿಡಿಯೋ ಮತ್ತೆ ವೈರಲ್​ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,500 ಅಂಕ ಜಿಗಿತ; ನಿಫ್ಟಿ ಬ್ಯಾಂಕ್ 64,600 ದಾಟಿ ಹೊಸ ದಾಖಲೆ‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪುಧನುಷ್ 55ನೇ ಸಿನಿಮಾ ಬಿಡುಗಡೆ ಹಬ್ಬ; ಚೆನ್ನೈನಿಂದ ಹೈದರಾಬಾದ್‌ವರೆಗೆ ಥಿಯೇಟರ್ ಮುಂದೆ ಅಭಿಮಾನಿಗಳ ಜಾತ್ರೆಸಾಮಾನ್ಯ ಸೀರೆಗಿಂತ ಭಿನ್ನವಾಗಿರುವ ಈ ಮೇಖಲಾ ಚಾದರ್ ವಿಶೇಷತೆ ಏನು? ಅಸ್ಸಾಂ ಉಡುಗೆಯಲ್ಲಿ ಗಮನ ಸೆಳೆದ ರಕುಲ್ ಪ್ರೀತ್ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು..? ಆದಾಯ ತೆರಿಗೆ ಇಲಾಖೆ ನಿಯಮಗಳೇನು..?