LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತು

‘ಸ್ವಿಂಗ್ ಕಿಂಗ್’ ಭುವನೇಶ್ವರ್ ಕುಮಾರ್ RCB ಗೆಲುವಿನ ಹಿಂದಿನ ಮನಸ್ಥಿತಿ ಮತ್ತು ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ ಬಾಸ್ಕೆಟ್ ಪ್ರೆಸೆಂಟ್ಸ್ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಭುವನೇಶ್ವರ್ ತಾವು ಆರ್‌ಸಿಬಿ ಬಳಗ ಸೇರಿದ ಆರಂಭಿಕ ದಿನಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.

ಆರ್‍‌ಸಿಬಿ Never won was never a burden. It was a challenge ಎಂಬ ಶೀರ್ಷಿಕೆಯೊಂದಿಗೆ (ಇದುವರೆಗೆ ಗೆದ್ದಿಲ್ಲ ಅನ್ನೋದು ನಮಗೆಂದೂ ಹೊರೆಯಾಗಿರಲಿಲ್ಲ, ಅದೊಂದು ಸವಾಲಾಗಿತ್ತು) ಭುವಿ ವಿಡಿಯೋನ್ನು ಹಂಚಿಕೊಳ್ಳಲಾಗಿದೆ. ಭುವಿ ಹೇಳಿದ್ದು ಏನೆಂದರೆ.. 2025ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿಗೆ ಆಯ್ಕೆ ಬೆನ್ನಲ್ಲೇ ತಂಡದ ಮ್ಯಾನೇಜ್ಮೆಂಟ್ ಭೇಟಿಯಾದೆ. ಮೋ ಬೊಬಾಟ್, ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಅವರನ್ನು ಭೇಟಿಯಾದೆ.

ಈ ವೇಳೆ ನನಗೆ ಒಂದು ಡೈಲಾಗ್ ಕೇಳಿಸಿತು. ಅದು ನನ್ನ ಕಿವಿಯಲ್ಲಿ ಇನ್ನೂ ಗುಂಯ್‌ಗುಡುತ್ತಿದೆ. ಆರ್‌ಸಿಬಿ ಇದುವರೆಗೆ ಟೈಟಲ್ ಗೆದ್ದಿಲ್ಲ ಎಂದು ಗೊತ್ತು. ಇದನ್ನು ನಾವು ಸವಾಲಾಗಿ ಸ್ವೀಕರಿಸಬಹುದು. ಹೇಗೂ ಇದುವರೆಗೆ ಗೆದ್ದಿಲ್ಲ, ಸರಿ ಇನ್ನೊಂದು ವರ್ಷ ಗೆಲ್ಲದೆ ಇದ್ದರೇನಂತೆ ಅಂತ ಒತ್ತಡವಿಲ್ಲದೇ ಆಡಬಹುದು. ಅದು ನಮ್ಮ ಕೈಯಲ್ಲೇ ಇದೆ ಎಂದಿದ್ದರು. ಆ ಮಾತು ನನ್ನ ಮನಸ್ಸಿಗೆ ನಾಟಿತು. ಕೊನೆಗೆ ಅದನ್ನು ಸವಾಲಾಗಿಯೇ ಸ್ವೀಕರಿಸಿದೆವು ಎಂದು ಭುವಿ ಹೇಳಿದ್ದಾರೆ.

ಆರ್‌ಸಿಬಿ ತಂಡದ ಭಾಗವಾಗುವುದು ಪ್ರತಿಯೊಬ್ಬ ಆಟಗಾರನಿಗೂ ಹೆಮ್ಮೆ ಮತ್ತು ಸವಾಲು. ನಾನು ಮೊದಲ ಬಾರಿ ಸೇರಿದಾಗಲೇ, ಆರ್‍‌ಸಿಬಿ ಅಭಿಮಾನಿ ಬಳಗ ಹೇಗಿದೆ? ಇದು ಎಂಥ ಶ್ರೇಷ್ಠ ತಂಡ ಅನ್ನೋದು ನನಗೆ ತಿಳಿದಿತ್ತು. ನಾನು ತಂಡದಲ್ಲಿ ಇಲ್ಲದಿದ್ದಾಗಲೂ ಆರ್‌ಸಿಬಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಹೀಗಾಗಿ ನನಗೆ ತುಂಬಾ ಖುಷಿಯಾಗಿತ್ತು ಎಂಬ ಸಂತಸವನ್ನು ಹಂಚಿಕೊಂಡಿದ್ದಾರೆ.

ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಸವಾಲಿನ ಬಗ್ಗೆ ಮಾತನಾಡಿರುವ ಅವರು.. ಚಿನ್ನಸ್ವಾಮಿಯಲ್ಲಿ ಬೌಲರ್‌ಗಳಿಗೆ ಅಷ್ಟೊಂದು ಸಹಾಯಕವಾಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಪಂದ್ಯದ ಆರಂಭದಲ್ಲಿ ಚೆಂಡು ಸ್ವಿಂಗ್ ಆಗುತ್ತದೆ ಎಂಬ ಸಣ್ಣ ಭರವಸೆ ನನಗೆ ಇತ್ತು. ಆ ಒಂದು ಭರವಸೆಯೇ ನನಗೆ ಇನ್ನಷ್ಟು ಕಷ್ಟಪಟ್ಟು ಅಭ್ಯಾಸ ಮಾಡಲು ಸ್ಫೂರ್ತಿ ನೀಡಿತು ಎಂದಿದ್ದಾರೆ.

ಆ್ಯಂಡಿ ಮತ್ತು ಡಿಕೆಯನ್ನು ಭೇಟಿಯಾದಾಗ.. ಇಡೀ ತಂಡ ಏನನ್ನು ಸಾಧಿಸಲು ಬಯಸಿದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿಯಿತು. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನನ್ನೂ ಒಳಗೊಳ್ಳುವ ದೂರದೃಷ್ಟಿಯೊಂದಿಗೆ ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಖರೀದಿಸಿದ್ದರು. ಅಂದು ತಂಡದ ಮ್ಯಾನೇಜ್‌ಮೆಂಟ್ ಮತ್ತು ಆಟಗಾರರು ತೋರಿದ ಇದೇ ಸ್ಪಷ್ಟ ಗುರಿ ಮತ್ತು ಒತ್ತಡರಹಿತ ಸವಾಲಿನ ಮನೋಭಾವವೇ, 17 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದು ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಡ್ರೋನ್ ಹಾರಾಟ ತಾತ್ಕಾಲಿಕ ನಿಷೇಧಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತುರಾಜಕಾರಣಿಗಳು ಹೇಗಿರಬೇಕು? ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಶಾರುಖ್​ ಖಾನ್​ ಹಳೆಯ ವಿಡಿಯೋ ಮತ್ತೆ ವೈರಲ್​ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,500 ಅಂಕ ಜಿಗಿತ; ನಿಫ್ಟಿ ಬ್ಯಾಂಕ್ 64,600 ದಾಟಿ ಹೊಸ ದಾಖಲೆ‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪುಧನುಷ್ 55ನೇ ಸಿನಿಮಾ ಬಿಡುಗಡೆ ಹಬ್ಬ; ಚೆನ್ನೈನಿಂದ ಹೈದರಾಬಾದ್‌ವರೆಗೆ ಥಿಯೇಟರ್ ಮುಂದೆ ಅಭಿಮಾನಿಗಳ ಜಾತ್ರೆಸಾಮಾನ್ಯ ಸೀರೆಗಿಂತ ಭಿನ್ನವಾಗಿರುವ ಈ ಮೇಖಲಾ ಚಾದರ್ ವಿಶೇಷತೆ ಏನು? ಅಸ್ಸಾಂ ಉಡುಗೆಯಲ್ಲಿ ಗಮನ ಸೆಳೆದ ರಕುಲ್ ಪ್ರೀತ್ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು..? ಆದಾಯ ತೆರಿಗೆ ಇಲಾಖೆ ನಿಯಮಗಳೇನು..?