LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಿಷಭ್ ಪಂತ್ ಜಾಗಕ್ಕೆ ಬರಲಿದ್ದಾರಾ ವಿಂಡೀಸ್ ದೈತ್ಯ? ಲಕ್ನೋ ತಂಡದ ಮುಂದಿನ ನಾಯಕನ ಹೆಸರು ಬಾಯ್ಬಿಟ್ಟ ಯುವ ಸ್ಪಿನ್ನರ್

ಮುಂಬರುವ 2027ರ ಐಪಿಎಲ್ ಆವೃತ್ತಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದ್ದು, ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ತಂಡದ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ತಂಡದ ಯುವ ಸ್ಪಿನ್ನರ್ ದಿಗ್ವೇಶ್ ರಾಠಿ ಅಭಿಮಾನಿಯೊಬ್ಬರೊಂದಿಗೆ ಮಾತನಾಡುವಾಗ ನೀಡಿರುವ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯ ವೇಳೆ ಅಭಿಮಾನಿಯೊಬ್ಬರು ಲಕ್ನೋ ತಂಡದ ಮುಂದಿನ ನಾಯಕ ಯಾರು ಎಂದು ದಿಗ್ವೇಶ್ ರಾಠಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ರಾಠಿ ತಕ್ಷಣವೇ ನಿಕೋಲಸ್ ಪೂರನ್ ಅವರ ಹೆಸರನ್ನು ಹೇಳಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡು ಲಕ್ನೋ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಪೂರನ್ ಅವರೇ ಮುಂದಿನ ಸಾರಥಿಯಾಗಲಿದ್ದಾರೆ ಎಂದು ಅಂದಾಜಿಸುತ್ತಿದ್ದಾರೆ. ಆದರೆ ಫ್ರಾಂಚೈಸಿ ಕಡೆಯಿಂದ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಈ ಹಿಂದೆ ಲಕ್ನೋ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್, ಆಟಗಾರರ ವಿನಿಮಯ ಒಪ್ಪಂದದ ಮೂಲಕ ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಪಂತ್ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಲಕ್ನೋ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಪಂತ್ ನಿರ್ಗಮನದಿಂದ ತೆರವಾಗಿರುವ ನಾಯಕನ ಸ್ಥಾನಕ್ಕೆ ಸಮರ್ಥ ಆಟಗಾರನನ್ನು ನೇಮಿಸುವ ಸವಾಲು ಲಕ್ನೋ ಆಡಳಿತ ಮಂಡಳಿಯ ಮುಂದಿದೆ.

ಸದ್ಯ ಲಕ್ನೋ ತಂಡದಲ್ಲಿ ನಾಯಕತ್ವ ನಿಭಾಯಿಸಬಲ್ಲ ಹಲವು ಅನುಭವಿ ಆಟಗಾರರಿದ್ದಾರೆ. ನಿಕೋಲಸ್ ಪೂರನ್ ಜೊತೆಗೆ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಹಾಗೂ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್ ಹೆಸರುಗಳು ಮುಂಚೂಣಿಯಲ್ಲಿವೆ. ಅಲ್ಲದೆ ವಿನಿಮಯ ಒಪ್ಪಂದದ ಮೂಲಕ ತಂಡಕ್ಕೆ ಬಂದಿರುವ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ನಾಯಕತ್ವದ ಅನುಭವ ಹೊಂದಿದ್ದು, ಅಂತಿಮವಾಗಿ ಫ್ರಾಂಚೈಸಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಡ್ರೋನ್ ಹಾರಾಟ ತಾತ್ಕಾಲಿಕ ನಿಷೇಧಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತುರಾಜಕಾರಣಿಗಳು ಹೇಗಿರಬೇಕು? ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಶಾರುಖ್​ ಖಾನ್​ ಹಳೆಯ ವಿಡಿಯೋ ಮತ್ತೆ ವೈರಲ್​ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,500 ಅಂಕ ಜಿಗಿತ; ನಿಫ್ಟಿ ಬ್ಯಾಂಕ್ 64,600 ದಾಟಿ ಹೊಸ ದಾಖಲೆ‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪುಧನುಷ್ 55ನೇ ಸಿನಿಮಾ ಬಿಡುಗಡೆ ಹಬ್ಬ; ಚೆನ್ನೈನಿಂದ ಹೈದರಾಬಾದ್‌ವರೆಗೆ ಥಿಯೇಟರ್ ಮುಂದೆ ಅಭಿಮಾನಿಗಳ ಜಾತ್ರೆಸಾಮಾನ್ಯ ಸೀರೆಗಿಂತ ಭಿನ್ನವಾಗಿರುವ ಈ ಮೇಖಲಾ ಚಾದರ್ ವಿಶೇಷತೆ ಏನು? ಅಸ್ಸಾಂ ಉಡುಗೆಯಲ್ಲಿ ಗಮನ ಸೆಳೆದ ರಕುಲ್ ಪ್ರೀತ್ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು..? ಆದಾಯ ತೆರಿಗೆ ಇಲಾಖೆ ನಿಯಮಗಳೇನು..?