LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲ

ಮುಂಬೈ: ಅನಾರೋಗ್ಯದಿಂದ ಎರಡು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಬಾಲಿವುಡ್ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿದ್ದ ಖ್ಯಾತ ನಟ ಶರದ್ ಕಪೂರ್ ಗುಣಮುಖರಾಗಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

2000ನೇ ಇಸವಿಯಲ್ಲಿ ತೆರೆಕಂಡ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅಭಿನಯದ ಸೂಪರ್ ಹಿಟ್ ಚಿತ್ರ ‘ಜೋಶ್’ ನಲ್ಲಿ ಖಳನಾಯಕನಾಗಿ ಮಿಂಚಿದ್ದ ನಟ ಶರದ್ ಕಪೂರ್, ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ಅತ್ಯಂತ ಕಠಿಣ ಹಂತವನ್ನು ದಾಟಿಕೊಂಡು ಇದೀಗ ಮತ್ತೆ ಬೆಳ್ಳಿತೆರೆಗೆ ಮರಳಲು ಸಜ್ಜಾಗಿದ್ದಾರೆ. ಬಾಲಿವುಡ್ ನ ದಿಗ್ಗಜರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಸೋನು ಸೂದ್ ಅವರ ನೆರವಿನಿಂದ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ಮುಂಬೈನ ತಮ್ಮ ನಿವಾಸದಲ್ಲಿ ಅವರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಅವರು ಚೇತರಿಸಿಕೊಂಡಿದ್ದು, ಮತ್ತೆ ಚಿತ್ರರಂಗಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಕಪೂರ್, ಖ್ಯಾತ ನಿರ್ದೇಶಕ ಅಹ್ಮದ್ ಖಾನ್ ಅವರ ಮುಂಬರುವ ಚಿತ್ರದ ಮೂಲಕ ತಾವು ಮತ್ತೆ ನಟನೆಗೆ ಮರಳುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿಯೂ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಇನ್ನೂ ಎರಡು-ಮೂರು ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿರುವುದಾಗಿ ತಿಳಿಸಿರುವ ಅವರು, ಸದ್ಯ ಅವು ಆರಂಭಿಕ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.

ಚಿತ್ರರಂಗದಲ್ಲಿ ನನಗೆ ಅವಕಾಶಗಳು ಸಿಗದೆ ದೂರ ಉಳಿದಿರಲಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ನನ್ನಲ್ಲಿ ನಟನೆಯ ಆಸಕ್ತಿ ಮತ್ತು ಉತ್ಸಾಹ ಕಡಿಮೆಯಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅದು ಸುಳ್ಳು. ಈಗ ನನ್ನ ಜೀವನದ ಈ ಘಟ್ಟವನ್ನು ಹೊಸ ತಿರುವು ಎಂದು ಭಾವಿಸಿ ಮತ್ತೆ ಕೆಲಸಕ್ಕೆ ಮರಳುತ್ತಿದ್ದೇನೆ ಎಂದು ಶರದ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಅವರು ತಮ್ಮ ಹೆಸರಿನಲ್ಲಿ ಯಾರೂ ದೇಣಿಗೆ ಸಂಗ್ರಹಿಸಬಾರದು, ತಮಗೆ ಬೇಕಿರುವುದು ಕೆಲಸವೇ ಹೊರತು ಅನುಕಂಪವಲ್ಲ ಎಂದು ಅವರು ಮನವಿ ಮಾಡಿದ್ದಾರೆ.

ಮುಂಬೈ ನಿವಾಸದಲ್ಲಿ ಶರದ್ ಕಪೂರ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮತ್ತು ತಮ್ಮ ನಾಲ್ಕು ಸಾಕು ನಾಯಿಗಳ ಜೊತೆಗಿದ್ದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಬಾಲಿವುಡ್ ತಾರೆಯರು ಅವರ ನೆರವಿಗೆ ಧಾವಿಸಿದ್ದರು.

ಜೋಶ್ ಚಿತ್ರದ ಸಹನಟ ಶಾರುಖ್ ಖಾನ್ ಸ್ವತಃ ಶರದ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಿನಗೆ ಏನು ಸರಿ ಅನಿಸುತ್ತದೋ ಅದನ್ನು ಮಾಡು, ನಿನಗೆ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಶಾರುಖ್ ಭರವಸೆ ನೀಡಿದ್ದಾಗಿ ಶರದ್ ಸ್ಮರಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಅವರನ್ನೂ ಭೇಟಿಯಾಗುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಕೂಡ ಕರೆ ಮಾಡಿ ಯಾವುದೇ ಅಗತ್ಯವಿದ್ದರೂ ಸಂಪರ್ಕಿಸುವಂತೆ ತಿಳಿಸಿದ್ದು, ನಟನಿಗೆ ಆರ್ಥಿಕ ನೆರವು ನೀಡಿರುವುದಾಗಿ ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘ ತಿಳಿಸಿದೆ. ಇನ್ನೊಂದೆಡೆ, ನಟ ಸೋನು ಸೂದ್ ಅವರು ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದಲ್ಲದೆ, ಕರ್ಜತ್‌ನಲ್ಲಿ ಗಾಯಗೊಂಡಿದ್ದ ಶರದ್ ಅವರಿಗೆ ತಜ್ಞ ವೈದ್ಯರು ಮತ್ತು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.

ಈ ನಡುವೆ, ಶರದ್ ಕಪೂರ್ ಅವರ ಸ್ನೇಹಿತೆಯಾಗಿರುವ ಹೇಮಾ ಚೌಧರಿ ಎಂಬುವವರು ಪಾಡ್‌ಕ್ಯಾಸ್ಟ್ ಒಂದರಲ್ಲಿ ಆಘಾತಕಾರಿ ಆರೋಪ ಮಾಡಿದ್ದರು. “ಶರದ್ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಅವರ ಕುಟುಂಬದ ಮೂರ್ನಾಲ್ಕು ಜನರು ಅವರ ಸಾವಿಗಾಗಿ ಕಾಯುತ್ತಿದ್ದರು ಮತ್ತು ಅವರ ಸಹೋದರ ಸರಿಯಾಗಿ ಸ್ಪಂದಿಸಲಿಲ್ಲ” ಎಂದು ಅವರು ದೂರಿದ್ದರು. ಇದಕ್ಕೂ ಮುನ್ನ 2 ವರ್ಷದಿಂದ ಹಾಸಿಗೆ ಹಿಡಿದಿದ್ದ ಅವನನ್ನು ನಾನು ಬದುಕಿಸಿದ್ದೆ ಎಂದು ಹೇಳಿದ್ದರು. ಆ ಬಳಿಕವೇ ನಟನಿಗೆ ಇಂತಹ ದುಸ್ಥಿತಿ ಬಂದಿದೆ ಎಂಬುದು ಪ್ರಂಪಂಚಕ್ಕೆ ಗೊತ್ತಾಗಿತ್ತು. ಆದರೆ, ಈ ಆರೋಪಗಳನ್ನು ಶರದ್ ಕಪೂರ್ ತಳ್ಳಿ ಹಾಕಿದ್ದಾರೆ. ತಮ್ಮ ಸಹೋದರರು ಮತ್ತು ಕುಟುಂಬ ಸದಸ್ಯರಿಗೆ ತಮ್ಮ ಪರಿಸ್ಥಿತಿಯ ಅರಿವಿತ್ತು ಹಾಗೂ ಅವರೆಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳುವ ಮೂಲಕ ಕುಟುಂಬದ ಮೇಲಿನ ಆರೋಪಗಳಿಗೆ ತೆರೆ ಎಳೆದಿದ್ದಾರೆ.

1990 ಮತ್ತು 2000ರ ದಶಕದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶರದ್ ಕಪೂರ್, ‘ಜೋಶ್’ ಚಿತ್ರದ ಪ್ರಕಾಶ್ ಪಾತ್ರದ ಮೂಲಕ ಮನೆಮಾತಾಗಿದ್ದರು. ‘ದಸ್ತಕ್’, ‘ತಮನ್ನಾ’, ‘ಖೌಫ್’, ‘ಲಕ್ಷ್ಯ’, ‘ಎಲ್‌ಒಸಿ ಕಾರ್ಗಿಲ್’, ‘ವಾಂಟೆಡ್’ ಮತ್ತು ‘ಜೈ ಹೋ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಅವರು, 2019ರಲ್ಲಿ ಬಿಡುಗಡೆಯಾದ ‘ಕ್ಯಾಬರೆ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಡ್ರೋನ್ ಹಾರಾಟ ತಾತ್ಕಾಲಿಕ ನಿಷೇಧಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತುರಾಜಕಾರಣಿಗಳು ಹೇಗಿರಬೇಕು? ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಶಾರುಖ್​ ಖಾನ್​ ಹಳೆಯ ವಿಡಿಯೋ ಮತ್ತೆ ವೈರಲ್​ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,500 ಅಂಕ ಜಿಗಿತ; ನಿಫ್ಟಿ ಬ್ಯಾಂಕ್ 64,600 ದಾಟಿ ಹೊಸ ದಾಖಲೆ‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪುಧನುಷ್ 55ನೇ ಸಿನಿಮಾ ಬಿಡುಗಡೆ ಹಬ್ಬ; ಚೆನ್ನೈನಿಂದ ಹೈದರಾಬಾದ್‌ವರೆಗೆ ಥಿಯೇಟರ್ ಮುಂದೆ ಅಭಿಮಾನಿಗಳ ಜಾತ್ರೆಸಾಮಾನ್ಯ ಸೀರೆಗಿಂತ ಭಿನ್ನವಾಗಿರುವ ಈ ಮೇಖಲಾ ಚಾದರ್ ವಿಶೇಷತೆ ಏನು? ಅಸ್ಸಾಂ ಉಡುಗೆಯಲ್ಲಿ ಗಮನ ಸೆಳೆದ ರಕುಲ್ ಪ್ರೀತ್ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು..? ಆದಾಯ ತೆರಿಗೆ ಇಲಾಖೆ ನಿಯಮಗಳೇನು..?