LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ALERT : ಅತಿಯಾದ್ರೆ ಅಮೃತವೂ ವಿಷ: ಏಕಕಾಲಕ್ಕೆ 5ಕ್ಕೂ ಹೆಚ್ಚು ಮಾತ್ರೆ ಸೇವನೆ ಪ್ರಾಣಕ್ಕೆ ಕಂಟಕ – ತಜ್ಞರ ಎಚ್ಚರಿಕೆ

ವಯಸ್ಸಾದಂತೆ ಕಾಯಿಲೆಗಳು ಬರುವುದು ಸಾಮಾನ್ಯ, ಆದರೆ ಆ ಕಾಯಿಲೆ ಗುಣಪಡಿಸಲು ಬಳಸುವ ಮೌಷಧಗಳೇ ಈಗ ಪ್ರಾಣಕ್ಕೆ ಕಂಟಕವಾಗುತ್ತಿವೆ. ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ‘ಪಾಲಿಫಾರ್ಮಸಿ’ (Polypharmacy) ಅಂದರೆ ಏಕಕಾಲಕ್ಕೆ ಹಲವಾರು ರೀತಿಯ ಔಷಧಗಳನ್ನು ಸೇವಿಸುವ ಅಭ್ಯಾಸ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮೆಡಿಕಲ್ ಕಾಲೇಜಿನ ಸಂಶೋಧನಾ ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ, ಶೇ. 64 ರಷ್ಟು ವೃದ್ಧರಲ್ಲಿ ಔಷಧಗಳ ಅಡ್ಡಪರಿಣಾಮದ (Drug Reaction) ಭೀತಿ ಇದೆ. ವೃದ್ಧರು ಸರಾಸರಿ 7.4 ರಷ್ಟು ವಿವಿಧ ಔಷಧಗಳನ್ನು ಬಳಸುತ್ತಿದ್ದು, ಶೇ. 24 ರಷ್ಟು ಮಂದಿ ದಿನಕ್ಕೆ 10ಕ್ಕೂ ಹೆಚ್ಚು ಮಾತ್ರೆಗಳನ್ನು ನುಂಗುತ್ತಿದ್ದಾರೆ.

ಅಪಾಯಕಾರಿ ಔಷಧಗಳ ಸಂಯೋಜನೆ:

ಕೆಲವು ಮಾತ್ರೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ವಿಷಕಾರಿ ಬದಲಾವಣೆಗಳಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ:

  1. ಆಸ್ಪಿರಿನ್ + ಕ್ಲೋಪಿಡೋಗ್ರೆಲ್: ಹೃದಯದ ಸಮಸ್ಯೆಗಾಗಿ ಇವೆರಡನ್ನೂ ಒಟ್ಟಿಗೆ ಬಳಸಿದರೆ ರಕ್ತಸ್ರಾವವಾಗುವ ಅಪಾಯವಿದೆ.
  2. ಇನ್ಸುಲಿನ್ + ಬೀಟಾ-ಬ್ಲಾಕರ್ಸ್: ಸಕ್ಕರೆ ಮಟ್ಟ ಕಡಿಮೆಯಾದಾಗ ದೇಹ ನೀಡುವ ಎಚ್ಚರಿಕೆಯ ಲಕ್ಷಣಗಳನ್ನು ಬೀಟಾ-ಬ್ಲಾಕರ್ಸ್ ಮರೆಮಾಚುತ್ತವೆ, ಇದರಿಂದ ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಇರುತ್ತದೆ.
  3. ಇನ್ಹಿಬಿಟರ್‌ಗಳು + ಪೊಟ್ಯಾಸಿಯಮ್: ಇವು ರಕ್ತದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸಿ ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತವೆ.

ಲಕ್ಷಣಗಳು ಮತ್ತು ಪರಿಣಾಮಗಳು:

  • ತಲೆತಿರುಗುವಿಕೆ, ತೀವ್ರ ಆಯಾಸ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ದೇಹದ ಸಮತೋಲನ ತಪ್ಪಿ ಬಿದ್ದು ಹೋಗುವ ಅಪಾಯವಿರುತ್ತದೆ.
  • ಒಂದು ಔಷಧದ ಸೈಡ್ ಎಫೆಕ್ಟ್ ಅನ್ನು ಮತ್ತೊಂದು ಕಾಯಿಲೆ ಎಂದು ತಪ್ಪಾಗಿ ಭಾವಿಸಿ, ಮತ್ತೆ ಹೊಸ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ರೋಗಿಯ ಮೇಲೆ ಆರ್ಥಿಕ ಹೊರೆಯೂ ಹೆಚ್ಚಾಗುತ್ತದೆ.

ವೈದ್ಯರ ಸಲಹೆ:

  • ಹೊಸದಾಗಿ ವೈದ್ಯರ ಬಳಿ ಹೋದಾಗ ಹಳೆಯ ಪ್ರಿಸ್ಕ್ರಿಪ್ಷನ್‌ಗಳನ್ನು ತಪ್ಪದೇ ತೋರಿಸಿ.ಅನಗತ್ಯ ಔಷಧಗಳನ್ನು ಕಡಿಮೆ ಮಾಡುವುದು ಉತ್ತಮ.ಜಾಗತಿಕ ಯುದ್ಧಗಳ ಕಾರಣದಿಂದಾಗಿ ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಕೆಲವು ಮಾತ್ರೆಗಳ ಬೆಲೆ ಹೆಚ್ಚಾಗಿರುವುದು ರೋಗಿಗಳಿಗೆ ಹೊರೆಯಾಗಿ ಪರಿಣಮಿಸಿದೆ.
Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ