LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ALERT : ರಾತ್ರಿ ವಾಹನ ಚಲಾಯಿಸುವವರೇ ಹುಷಾರ್..! 9-10 ಗಂಟೆ ಪ್ರಯಾಣಕ್ಕೆ ಅತ್ಯಂತ ಅಪಾಯಕಾರಿ ಅವಧಿ ; ವರದಿ

ಭಾರತದಲ್ಲಿ ರಾತ್ರಿ 9 ಗಂಟೆಯಿಂದ 10 ಗಂಟೆಯ ನಡುವಿನ ಸಮಯ ರಸ್ತೆ ಪ್ರಯಾಣಕ್ಕೆ ಅತ್ಯಂತ ಅಪಾಯಕಾರಿ ಅವಧಿಯಾಗಿದೆ ಎಂದು ಜುನೋ ಜನರಲ್ ಇನ್ಷೂರೆನ್ಸ್ ಪ್ರಕಟಿಸಿರುವ ಇಂಡಿಯಾ ರೋಡ್ ಸೇಫ್ಟಿ ರಿಪೋರ್ಟ್–2026 (IRSR) ತಿಳಿಸಿದೆ. ದೇಶಾದ್ಯಂತ ಚಾಲಕರ ವರ್ತನೆ ಮತ್ತು ಚಾಲನಾ ಅಭ್ಯಾಸಗಳ ಕುರಿತು ನಡೆಸಿದ ವಿಶ್ಲೇಷಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ರಾತ್ರಿ 8 ಗಂಟೆಯ ನಂತರ ಚಾಲಕರ ಸರಾಸರಿ ಡ್ರೈವಿಂಗ್ ಸ್ಕೋರ್ ಗಮನಾರ್ಹವಾಗಿ ಕುಸಿಯುವುದರಿಂದ, ಮಧ್ಯಾಹ್ನದ ಸಮಯಕ್ಕಿಂತ ರಾತ್ರಿ ಅಪಘಾತದ ಅಪಾಯ ಹೆಚ್ಚಿರುತ್ತದೆ ಎಂದು ವರದಿ ಹೇಳಿದೆ. ಮತ್ತೊಂದೆಡೆ, ಮಧ್ಯಾಹ್ನ 1 ರಿಂದ 2 ಗಂಟೆಯ ನಡುವಿನ ಸಮಯವನ್ನು ದಿನದ ಅತ್ಯಂತ ಸುರಕ್ಷಿತ ಚಾಲನಾ ಸಮಯ ಎಂದು ಗುರುತಿಸಲಾಗಿದೆ.

ಜುನೋ ಸಂಸ್ಥೆಯ ‘ಸ್ಮಾರ್ಟ್‌ಡ್ರೈವ್’ ಆ್ಯಪ್ ಮೂಲಕ ಸಂಗ್ರಹಿಸಿದ ಟೆಲಿಮೆಟ್ರಿ ಡೇಟಾವನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ದೇಶದ 17 ರಾಜ್ಯಗಳ ಸುಮಾರು 45 ಲಕ್ಷ ಪ್ರಯಾಣಗಳು ಹಾಗೂ 55 ಕೋಟಿ ಕಿಲೋಮೀಟರ್ ಚಾಲನಾ ಡೇಟಾವನ್ನು ವಿಶ್ಲೇಷಿಸಲಾಗಿದೆ. ರಸ್ತೆ ಅಪಘಾತಗಳಿಗೆ ಕೇವಲ ರಸ್ತೆಯ ಸ್ಥಿತಿ ಅಥವಾ ಜನಸಾಂದ್ರತೆಯೇ ಕಾರಣವಲ್ಲ; 80% ಕ್ಕೂ ಹೆಚ್ಚು ಅಪಘಾತಗಳು ಚಾಲಕರ ವರ್ತನೆ ಮತ್ತು ಚಾಲನಾ ಶೈಲಿಯೊಂದಿಗೆ ಸಂಬಂಧ ಹೊಂದಿವೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

ಪುರುಷರು ಮತ್ತು ಮಹಿಳೆಯರ ಚಾಲನಾ ಸಾಮರ್ಥ್ಯದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ. ಮಹಿಳಾ ಚಾಲಕರ ಸರಾಸರಿ ಡ್ರೈವಿಂಗ್ ಸ್ಕೋರ್ 92.86% ಆಗಿದ್ದರೆ, ಪುರುಷರದು 92.43% ದಾಖಲಾಗಿದೆ. ಹೀಗಾಗಿ ಮಹಿಳೆಯರು ಹೆಚ್ಚು ಅಪಾಯಕಾರಿಯಾಗಿ ವಾಹನ ಚಲಾಯಿಸುತ್ತಾರೆ ಎಂಬ ಅಭಿಪ್ರಾಯಕ್ಕೆ ಈ ವರದಿ ತಿರುಗೇಟು ನೀಡಿದೆ.

ಭಾರತೀಯ ಚಾಲಕರಲ್ಲಿ ಕಂಡುಬಂದ ಪ್ರಮುಖ ದೌರ್ಬಲ್ಯವೆಂದರೆ ಅಗತ್ಯವಿರುವ ಸಮಯದಲ್ಲಿ ಸಮಯೋಚಿತವಾಗಿ ಬ್ರೇಕ್ ಹಾಕದಿರುವುದು. ಈ ವಿಭಾಗದಲ್ಲಿ ಕೇವಲ 87 ಅಂಕಗಳು ದಾಖಲಾಗಿವೆ. ಇದರ ಜೊತೆಗೆ, ಹೆಚ್ಚಿನ ವೇಗದಲ್ಲಿ ಸಾಗುತ್ತಾ ಏಕಾಏಕಿ ಇನ್ನಷ್ಟು ವೇಗ ಹೆಚ್ಚಿಸುವ ಪ್ರವೃತ್ತಿಯೂ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಆದರೆ, ಮಳೆಗಾಲ ಅಥವಾ ಚಳಿಗಾಲದ ಮಂಜಿನಂತಹ ಹವಾಮಾನ ಬದಲಾವಣೆಗಳು ಒಟ್ಟಾರೆ ಚಾಲನಾ ಸ್ಕೋರ್ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ.ಭಾರತದಲ್ಲಿ ಪ್ರತಿ ವರ್ಷ ಸುಮಾರು 1.73 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕ ರಸ್ತೆ ಅಪಘಾತ ಸಾವುಗಳಲ್ಲಿ ಭಾರತದ ಪಾಲು 11% ಇದೆ. ಈ ಅಪಘಾತಗಳಿಂದ ದೇಶದ ಜಿಡಿಪಿಯ 3% ರಿಂದ 5% ರಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ವರದಿ ತಿಳಿಸಿದೆ. ಒಟ್ಟು ರಸ್ತೆ ಅಪಘಾತ ಸಾವುಗಳಲ್ಲಿ 44% ದ್ವಿಚಕ್ರ ವಾಹನ ಸವಾರರು ಮತ್ತು 19% ಪಾದಚಾರಿಗಳು ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ