LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ‘ಕಾಗ್ನಿಜೆಂಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ ; ಬರೋಬ್ಬರಿ 15,000 ನೌಕರರ ವಜಾಗೆ ಸಿದ್ದತೆ |Lay off

ಪ್ರಮುಖ ಐಟಿ ಸೇವಾ ಸಂಸ್ಥೆಯಾದ ಕಾಗ್ನಿಜೆಂಟ್‌ನಲ್ಲಿ (Cognizant) ಉದ್ಯೋಗ ಕಡಿತ ಪ್ರಕ್ರಿಯೆ ನಡೆಯಲಿದೆ. ವಿಶ್ವದಾದ್ಯಂತ ಸುಮಾರು 12,000 ದಿಂದ 15,000 ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.ಈ ಲೇ-ಆಫ್‌ನಿಂದಾಗಿ ಭಾರತದಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗಬಹುದು ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.

ಏಪ್ರಿಲ್ 29 ರಂದು ಕಾಗ್ನಿಜೆಂಟ್ ಹೊಸದಾಗಿ ಪರಿಚಯಿಸಿದ ‘ಪ್ರಾಜೆಕ್ಟ್ ಲೀಪ್’ ಅಡಿಯಲ್ಲಿ ಉದ್ಯೋಗಿಗಳ ವಜಾ ನಂತರ ನೀಡುವ ಪರಿಹಾರಕ್ಕಾಗಿ (Severance) 230 ಮಿಲಿಯನ್‌ನಿಂದ 320 ಮಿಲಿಯನ್ ಡಾಲರ್ ವೆಚ್ಚ ಮಾಡಲು ಯೋಜಿಸಿದೆ.ಕಾಗ್ನಿಜೆಂಟ್ ವಿಶ್ವದಾದ್ಯಂತ 3,57,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅವರ ಪೈಕಿ 2,50,000 ಕ್ಕೂ ಹೆಚ್ಚು ಮಂದಿ ಭಾರತದಲ್ಲೇ ಇದ್ದಾರೆ.

ಗ್ರಾಹಕರ ಬೇಡಿಕೆಗಳಲ್ಲಿನ ಬದಲಾವಣೆ ಮತ್ತು ಹೊಸದಾಗಿ ಸೇರುವವರಿಗೆ (Freshers) ತರಬೇತಿ ನೀಡಲು ಕ್ಲೈಂಟ್‌ಗಳು ಹಣ ನೀಡಲು ಆಸಕ್ತಿ ತೋರುತ್ತಿಲ್ಲದಿರುವುದು ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಪರಿಹಾರ ಧನ: ಭಾರತದಲ್ಲಿ ಉದ್ಯೋಗಿಗಳ ಸರಾಸರಿ ವಾರ್ಷಿಕ ವೇತನ 15 ಲಕ್ಷ ರೂಪಾಯಿಗಳಾಗಿದ್ದು, ಲೇ-ಆಫ್ ಸಮಯದಲ್ಲಿ ಸುಮಾರು 6 ತಿಂಗಳ ವೇತನ ಅಂದರೆ ಅಂದಾಜು 7.5 ಲಕ್ಷ ರೂಪಾಯಿಗಳ ಪರಿಹಾರ ಸಿಗುವ ಸಾಧ್ಯತೆಯಿದೆ. ಅಮೆರಿಕದಂತಹ ದೇಶಗಳಲ್ಲಿ ಉದ್ಯೋಗಿಗಳ ವೇತನ ಹೆಚ್ಚಿರುವುದರಿಂದ ಅಲ್ಲಿನವರಿಗೆ ಸುಮಾರು 50,000 ಡಾಲರ್‌ಗಳವರೆಗೆ ಪರಿಹಾರ ಧನ ದೊರೆಯಬಹುದು.

ಮೆಟಾ ಕಂಪನಿಯಲ್ಲೂ ಲೇ-ಆಫ್ ಸಾಧ್ಯತೆ: ಸೋಶಿಯಲ್ ಮೀಡಿಯಾ ದೈತ್ಯ ‘ಮೆಟಾ’ (Meta) ಕೂಡ ಈ ವರ್ಷ ಉದ್ಯೋಗ ಕಡಿತಕ್ಕೆ ಮುಂದಾಗುವ ವರದಿಗಳಿವೆ. ರಾಯಿಟರ್ಸ್ ಪ್ರಕಾರ, ವಿಶ್ವದಾದ್ಯಂತ ಸುಮಾರು 8,000 ಉದ್ಯೋಗಿಗಳನ್ನು ಮೆಟಾ ವಜಾಗೊಳಿಸುವ ಸಾಧ್ಯತೆಯಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗಿದ್ದರೂ, ಈ ಬಗ್ಗೆ ಕಂಪನಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ