LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : UPI ಬಳಕೆದಾರರಿಗೆ ಬಿಗ್ ಶಾಕ್ ; ಉಚಿತ UPI ಸೇವೆಗೆ ಬ್ರೇಕ್ ? ಶೀಘ್ರವೇ ವ್ಯವಹಾರಗಳಿಗೆ ಶುಲ್ಕ ಸಾಧ್ಯತೆ..!

ಯುಪಿಐ (UPI) ಮೂಲಕ ಹಣಕಾಸು ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ ಬರಬಹುದಾಗಿದೆ. ಪ್ರಸ್ತುತ ಉಚಿತವಾಗಿರುವ ಯುಪಿಐ ವ್ಯವಹಾರಗಳಿಗೆ ಮುಂದಿನ ದಿನಗಳಲ್ಲಿ ಕೆಲವು ವರ್ಗದ ವ್ಯವಹಾರಗಳಿಗೆ ಶುಲ್ಕ ವಿಧಿಸುವ ಕುರಿತು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚರ್ಚೆ ನಡೆಸುತ್ತಿವೆ.

ಈಗ ಯುಪಿಐ ಮೂಲಕ ಎಷ್ಟೇ ದೊಡ್ಡ ಮೊತ್ತದ ವ್ಯವಹಾರ ಮಾಡಿದರೂ ಯಾವುದೇ ಶುಲ್ಕ ಇರುವುದಿಲ್ಲ. ಕಳೆದ ಐದು ವರ್ಷಗಳಿಂದ ಯುಪಿಐ ವ್ಯವಹಾರಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಶೂನ್ಯವಾಗಿಯೇ ಇರಿಸಲಾಗಿದೆ. ಆದರೆ, ದೊಡ್ಡ ವ್ಯಾಪಾರ ಸಂಸ್ಥೆಗಳು ಮತ್ತು ಇ-ಕಾಮರ್ಸ್ ಕಂಪನಿಗಳ ಯುಪಿಐ ವ್ಯವಹಾರಗಳಿಗೆ ಮರ್ಚೆಂಟ್ ಶುಲ್ಕ ವಿಧಿಸುವ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿದೆ.

ಶೀಘ್ರವೇ ಕೇಂದ್ರದಿಂದ ಅಂತಿಮ ನಿರ್ಧಾರ
ಈ ಸಂಬಂಧದ ಕರಡು ಪ್ರಸ್ತಾವನೆ ಈಗ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಬಾಕಿಯಿದೆ. ಅನುಮೋದನೆ ದೊರೆತ ಬಳಿಕ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಕುರಿತು ಕೇಂದ್ರ ಸರ್ಕಾರ ಅಂತಿಮ ಹಂತದ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.ಪ್ರಸ್ತಾವನೆಯ ಪ್ರಕಾರ, ದೊಡ್ಡ ವ್ಯಾಪಾರಿಗಳು ಹಾಗೂ ಇ-ಕಾಮರ್ಸ್ ಸಂಸ್ಥೆಗಳಿಗಷ್ಟೇ ಮರ್ಚೆಂಟ್ ಶುಲ್ಕ ಅನ್ವಯವಾಗಲಿದೆ. ಇದರಿಂದ ಯುಪಿಐ ಪಾವತಿ ಸೇವೆ ನೀಡುವ ಬ್ಯಾಂಕ್ಗಳು ಹಾಗೂ ಪಾವತಿ ಆ್ಯಪ್ಗಳಿಗೆ ಹೆಚ್ಚುವರಿ ಆದಾಯ ದೊರೆಯಲಿದೆ.

ಎಷ್ಟು ಶುಲ್ಕ ವಿಧಿಸಬಹುದು?
ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು (ಟರ್ನ್ಓವರ್) ಹೊಂದಿರುವ ವ್ಯಾಪಾರಿಗಳಿಗೆ 5ರಿಂದ 7 ಬೇಸಿಸ್ ಪಾಯಿಂಟ್ಗಳವರೆಗೆ MDR ವಿಧಿಸುವ ಪ್ರಸ್ತಾವನೆ ಇದೆ. ₹10,000ಕ್ಕಿಂತ ಹೆಚ್ಚಿನ ಯುಪಿಐ ವ್ಯವಹಾರಗಳ ಮೇಲೆ ಸುಮಾರು ₹5ರಿಂದ ₹7ರವರೆಗೆ ಮರ್ಚೆಂಟ್ ಶುಲ್ಕ ವಿಧಿಸುವ ಸಾಧ್ಯತೆ ಇದೆ.

ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ಆತಂಕ ಬೇಡ
ವಾರ್ಷಿಕ ₹40 ಲಕ್ಷಕ್ಕಿಂತ ಕಡಿಮೆ ಟರ್ನ್ಓವರ್ ಹೊಂದಿರುವ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಹಾಗೆಯೇ, ಸಾಮಾನ್ಯ ಯುಪಿಐ ಬಳಕೆದಾರರು ಹಿಂದಿನಂತೆ ಉಚಿತವಾಗಿಯೇ ಹಣ ವರ್ಗಾವಣೆ ಮಾಡಬಹುದು. ಈ ಶುಲ್ಕವು ಕೇವಲ ದೊಡ್ಡ ವ್ಯಾಪಾರಿಗಳಿಂದ ಮಾತ್ರ ವಸೂಲಾಗುವ ಸಾಧ್ಯತೆ ಇದೆ.

ಈ ನಿರ್ಧಾರದ ಹಿಂದಿನ ಕಾರಣವೇನು?
ಪ್ರಸ್ತುತ ಜೀರೋ MDR ನೀತಿಯಿಂದ PhonePe, Google Pay, Paytm ಸೇರಿದಂತೆ ಯುಪಿಐ ಪಾವತಿ ಆ್ಯಪ್ಗಳಿಗೆ ವ್ಯವಹಾರಗಳಿಂದ ನೇರ ಆದಾಯ ದೊರೆಯುತ್ತಿಲ್ಲ. ಸರ್ಕಾರದಿಂದ ಸಿಗುವ ಪ್ರೋತ್ಸಾಹಧನವೂ ಯುಪಿಐ ವ್ಯವಸ್ಥೆಯ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಕಂಪನಿಗಳು ಹೇಳುತ್ತಿವೆ. ಹೀಗಾಗಿ, ಯುಪಿಐ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಪಾವತಿ ಸೇವಾ ಸಂಸ್ಥೆಗಳಿಗೆ ಸ್ಥಿರ ಆದಾಯ ಒದಗಿಸಲು ದೊಡ್ಡ ವ್ಯಾಪಾರಿಗಳಿಂದ ಮರ್ಚೆಂಟ್ ಶುಲ್ಕ ವಸೂಲು ಮಾಡುವತ್ತ ಸರ್ಕಾರ ಮುಂದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ