ಬೆಂಗಳೂರು : ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತವಾಗಿದೆ. ಹಾಲಿನ ದರ ಏರಿಕೆ ಬಗ್ಗೆ ಇಂದೇ ನಿರ್ಧಾರ ಪ್ರಕಟ ಆಗುವ ಸಾಧ್ಯತೆ ಇದ್ದು, ಇಂದು 16 ಹಾಲು ಒಕ್ಕೂಟಗಳ ಸದಸ್ಯರ ಜೊತೆಗೆ ಸಭೆ ನಡೆಯಲಿದೆ. ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಈ ಒಂದು ಸಭೆ ನಡೆಯಲಿದ್ದು, KMF ಮತ್ತು ಹಾಲು ಒಕ್ಕೂಟಗಳ ಸಭೆಯ ನಂತರ ಮುಖ್ಯಮಂತ್ರಿಗಳ ಜೊತೆಗೆ ಅಂತಿಮ ಸಭೆ ನಡೆಯಲಿದೆ.
ಅಂತಿಮ ಸಭೆಯ ಬಳಿಕ ಹಾಲಿನ ದರ ಏರಿಕೆಯ ಬಗ್ಗೆ ಅಧಿಕೃತ ಪ್ರಕಟ ಆಗುವ ಸಾಧ್ಯತೆ ಇದೆ. ಪ್ರತಿ ಲೀಟರ್ ಹಾಲಿಗೆ ನಾಲ್ಕರಿಂದ ಐದು ರೂಪಾಯಿ ಹೆಚ್ಚಳ ಬಹುತೇಕ ಖಚಿತ ಆಗಿದೆ ಲೀಟರ್ ಹಾಲಿಗೆ 8 ರೂಪಾಯಿಯಿಂದ 10 ರುಪಾಯಿಗೆ ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಮನವಿ ಮಾಡಿದ್ದವು.
ಎಲ್ಲರಿಗೂ ಅನುಕೂಲ ಆಗುವಂತೆ ಪ್ರಸ್ತಾವನೆ ಸಲ್ಲಿಕೆಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆಯ ಮೇರೆಗೆ ಇಂದು ಹಾಲು ಒಕ್ಕೂಟಗಳಿಂದ ಸಭೆ ನಡೆಯಲಿದ್ದು, ಸಭೆಯ ಬಳಿಕ ಪ್ರತಿ ಲೀಟರ್ ಹಾಲಿಗೆ 4 ರಿಂದ 5 ರುಪಾಯಿ ದರ ಏರಿಕೆ ಅಧಿಕೃತ ಘೋಷಣೆ ಆಗಲಿದೆ.