LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING: ಕೆಪಿಎಸ್‌ಸಿ ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ, ಬಸವರಾಜ್ ಕನ್ನಾಳೆಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಕಾವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಇತ್ತ ತಲೆಮರೆಸಿಕೊಂಡಿರುವ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ.

14 ದಿನಗಳ ಜೈಲು ಶಿಕ್ಷೆ:

ಅಧಿಕಾರಿಗಳ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ CID ಪೊಲೀಸರು ಆರೋಪಿಗಳನ್ನು 1 ನೇ ACJM ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. "ಪ್ರಸ್ತುತ ಇಬ್ಬರ ವಿಚಾರಣೆ ಪೂರ್ಣಗೊಂಡಿದ್ದು, ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಕಸ್ಟಡಿಗೆ ಪಡೆಯಲಾಗುವುದು" ಎಂದು ತನಿಖಾ ತಂಡ ನ್ಯಾಯಪೀಠಕ್ಕೆ ತಿಳಿಸಿತು. ವಾದ ಆಲಿಸಿದ ನ್ಯಾಯಾಧೀಶರು, ಗ್ಯಾನೇಂದ್ರ ಕುಮಾರ್ ಮತ್ತು ಬಸವರಾಜ್‌ಗೆ ಸೆಪ್ಟೆಂಬರ್ 23ರವರೆಗೆ (14 ದಿನ) ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.

KPSC ಸದಸ್ಯೆಯ ನಿವಾಸಗಳ ಮೇಲೆ CID ದಾಳಿ:

ಇನ್ನೊಂದೆಡೆ, ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ KPSC ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಸಿಐಡಿ ತೀವ್ರ ಶೋಧ ನಡೆಸುತ್ತಿದೆ. ರಾಜಧಾನಿಯ ಮತ್ತಿಕೆರೆ ಹಾಗೂ ನಾಗರಭಾವಿಯಲ್ಲಿರುವ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ಶಾಂತಾ ಹೊಸಮನಿ ಶಿಫಾರಸಿನಿಂದ ನೇಮಕಾತಿ ಪಡೆದಿದ್ದಾರೆನ್ನಲಾದ ಅಭ್ಯರ್ಥಿ ಮಮತಾ ಅವರ ಕಲಬುರಗಿಯ 'ನ್ಯೂ ಓಜಾ ಲೇಔಟ್' ಮನೆ ಮೇಲೆಯೂ ದಾಳಿ ನಡೆದಿದೆ. ಇತ್ತ ಬಂಧನದಿಂದ ತಪ್ಪಿಸಿಕೊಳ್ಳಲು ಶಾಂತಾ ಹೊಸಮನಿ ಹಾಗೂ ಮಮತಾ ಇಬ್ಬರೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಬೀದರ್‌ನ ಪ್ರಭಾವಿಗಳಿಗೆ 'ಸಿಐಡಿ' ಭಯ:

ಹಣಕಾಸು ವಹಿವಾಟಿನ ಜಾಡು ಹಿಡಿದು ಹೊರಟಿರುವ ತನಿಖಾಧಿಕಾರಿಗಳು, ಬಸವರಾಜ್ ಕನ್ನಾಳೆ ಖಾತೆಗೆ ಭಾರೀ ಪ್ರಮಾಣದ ಹಣ ವರ್ಗಾವಣೆ ಮಾಡಿರುವ ಶಂಕೆಯಡಿ ಹಲವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಕನ್ನಾಳೆ ಜತೆ ಹಣಕಾಸಿನ ನಂಟು ಹೊಂದಿರುವ ಬೀದರ್‌ನ ಪವನ್ ರೆಡ್ಡಿ, RTO ಇನ್ಸ್‌ಪೆಕ್ಟರ್ ರಾಜಶೇಖರ್ ಚಿದ್ರಿ ಹಾಗೂ ಭಾಲ್ಕಿ ಸಹಕಾರಿ ಬ್ಯಾಂಕ್ ನಿರ್ದೇಶಕ ಓಂಕಾರ್ ಸೇರಿದಂತೆ ಹಲವು ಪ್ರಭಾವಿಗಳಿಗೆ ಈಗ ಜೈಲು ಭೀತಿ ಎದುರಾಗಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆಸ್ಟಾರ್ಟ್‌ಅಪ್‌ಗಳಿಗೆ ಸುವರ್ಣಾವಕಾಶ: 'ಸರ್ಕಾರ ಮೊದಲು' ಯೋಜನೆಗೆ ಸಚಿವ ಸಂಪುಟ ಅಸ್ತು, ಪ್ರತಿ ಸಂಸ್ಥೆಗೆ ₹25 ಲಕ್ಷದವರೆಗೆ ಸಹಾಯಧನಕಲಬುರಗಿಯಲ್ಲಿ ‘LEAP ಬೆಳವಣಿಗೆ ಪ್ರಯೋಗಾಲಯ’ ಸ್ಥಾಪನೆ: ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅಸ್ತುಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲಗಳ ಸಂಚಾರBREAKING: ಕೆಪಿಎಸ್‌ಸಿ ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ, ಬಸವರಾಜ್ ಕನ್ನಾಳೆಗೆ 14 ದಿನ ನ್ಯಾಯಾಂಗ ಬಂಧನ100 ದಿನ, ನೂರಾರು ಅಭಿವೃದ್ಧಿ: ಇದು 'ಗ್ರಾಮೀಣಾಭಿವೃದ್ಧಿ'ಯಲ್ಲಿ 'ಸಚಿವ ಈಶ್ವರ ಖಂಡ್ರೆ' ಸಾಧನೆಯ ರಿಪೋರ್ಟ್ ಕಾರ್ಡ್!ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಲೇಖಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿBIG NEWS: ಸೆ.21 ರಿಂದ ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳ ಚರ್ಚೆಕ್ಲೈಮ್ಯಾಕ್ಸ್‌ ಘಟ್ಟ ತಲುಪಿದ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜೆಪಿ ನಾಯಕರುರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ನಿಯಮ ಸರಳೀಕರಣ: ಮಧ್ಯಂತರ ವರದಿಯಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಮಾಹಿತಿ