LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲಗಳ ಸಂಚಾರ

ಬೆಂಗಳೂರು: ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ನೈರುತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.

1. ರೈಲು ಸಂಖ್ಯೆ 06563/06564 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ (1 ಟ್ರಿಪ್).

ರೈಲು ಸಂಖ್ಯೆ 06563 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ಎಕ್ಸ್ಪ್ರೆಸ್ ವಿಶೇಷ ರೈಲು 11.09.2026 ರಂದು 19:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 08:25 ಗಂಟೆಗೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ (19:33/19:35 ಗಂಟೆ), ತುಮಕೂರು (20:18/20:20 ಗಂಟೆ), ಅರಸೀಕೆರೆ (22:00/22:10 ಗಂಟೆ), ಬೀರೂರು (22:45/22:46 ಗಂಟೆ), ದಾವಣಗೆರೆ (00:10/00:12 ಗಂಟೆ), ಹರಿಹರ (00:28/00:30 ಗಂಟೆ), ಎಸ್ಎಮ್ಎಮ್ ಹಾವೇರಿ (01:30/01:32 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (04:10/04:20 ಗಂಟೆ), ಧಾರವಾಡ (04:43/04:45 ಗಂಟೆ), ಅಲ್ನಾವರ (05:23/05:25 ಗಂಟೆ), ಲೊಂಡಾ (06:58/07:00 ಗಂಟೆ) ಮತ್ತು ಖಾನಾಪುರ (07:28/07:30 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06564 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು 12.09.2026 ರಂದು 17:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ 05:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಖಾನಾಪುರ (17:53/17:55 ಗಂಟೆ), ಲೊಂಡಾ (18:18/18:20 ಗಂಟೆ), ಅಲ್ನಾವರ (18:59/19:00 ಗಂಟೆ), ಧಾರವಾಡ (19:33/19:35 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:35/20:45 ಗಂಟೆ), ಎಸ್ಎಮ್ಎಮ್ ಹಾವೇರಿ (21:45/21:47 ಗಂಟೆ), ಹರಿಹರ (22:25/22:26 ಗಂಟೆ), ದಾವಣಗೆರೆ (22:38/22:40 ಗಂಟೆ), ಬೀರೂರು (23:53/23:55 ಗಂಟೆ), ಅರಸೀಕೆರೆ (00:25/00:35 ಗಂಟೆ), ತುಮಕೂರು (01:42/01:44 ಗಂಟೆ), ಮತ್ತು ಚಿಕ್ಕಬಾಣಾವರ (03:10/03:12 ಗಂಟೆ) ನಿಲ್ದಾಣಗಳಲ್ಲಿ ನಿಲ್ಲಲಿದೆ.

2. ರೈಲು ಸಂಖ್ಯೆ 06583/06584 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ (1 ಟ್ರಿಪ್).

ರೈಲು ಸಂಖ್ಯೆ 06583 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ಎಕ್ಸ್ಪ್ರೆಸ್ ವಿಶೇಷ ರೈಲು 13.09.2026 ರಂದು 19:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 08:25 ಗಂಟೆಗೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ (19:33/19:35 ಗಂಟೆ), ತುಮಕೂರು (20:18/20:20 ಗಂಟೆ), ಅರಸೀಕೆರೆ (22:00/22:10 ಗಂಟೆ), ಬೀರೂರು (22:45/22:46 ಗಂಟೆ), ದಾವಣಗೆರೆ (00:10/00:12 ಗಂಟೆ), ಹರಿಹರ (00:28/00:30 ಗಂಟೆ), ಎಸ್ಎಮ್ಎಮ್ ಹಾವೇರಿ (01:30/01:32 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (04:10/04:20 ಗಂಟೆ), ಧಾರವಾಡ (04:43/04:45 ಗಂಟೆ), ಅಲ್ನಾವರ (05:23/05:25 ಗಂಟೆ), ಲೊಂಡಾ (06:58/07:00 ಗಂಟೆ) ಮತ್ತು ಖಾನಾಪುರ (07:28/07:30 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06584 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು 14.09.2026 ರಂದು 17:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ 05:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಖಾನಾಪುರ (17:53/17:55 ಗಂಟೆ), ಲೊಂಡಾ (18:18/18:20 ಗಂಟೆ), ಅಲ್ನಾವರ (18:59/19:00 ಗಂಟೆ), ಧಾರವಾಡ (19:33/19:35 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:15/20:30 ಗಂಟೆ), ಎಸ್ಎಮ್ಎಮ್ ಹಾವೇರಿ (21:33/21:35 ಗಂಟೆ), ಹರಿಹರ (22:18/22:20 ಗಂಟೆ), ದಾವಣಗೆರೆ (22:33/22:35 ಗಂಟೆ), ಬೀರೂರು (23:57/23:59 ಗಂಟೆ), ಅರಸೀಕೆರೆ (00:30/00:40 ಗಂಟೆ), ತುಮಕೂರು (01:50/01:52 ಗಂಟೆ), ಮತ್ತು ಚಿಕ್ಕಬಾಣಾವರ (03:00/03:02 ಗಂಟೆ) ನಿಲ್ದಾಣಗಳಲ್ಲಿ ನಿಲ್ಲಲಿದೆ.
 
ಈ ವಿಶೇಷ ರೈಲುಗಳು 01 ಫಸ್ಟ್ ಕ್ಲಾಸ್ ಎಸಿ ಕೋಚ್, 01 ಎಸಿ 2-ಟೈರ್ ಕೋಚ್, 03 ಎಸಿ 3-ಟೈರ್ ಕೋಚ್ಗಳು, 09 ಸ್ಲೀಪರ್ ಕ್ಲಾಸ್ ಕೋಚ್ಗಳು, 04 ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು ಮತ್ತು 02 ಎಸ್ಎಲ್ಆರ್ಡಿ ಕೋಚ್ಗಳು ಸೇರಿದಂತೆ ಒಟ್ಟು 20 ಕೋಚ್ಗಳನ್ನು ಒಳಗೊಂಡಿರುತ್ತವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆಸ್ಟಾರ್ಟ್‌ಅಪ್‌ಗಳಿಗೆ ಸುವರ್ಣಾವಕಾಶ: 'ಸರ್ಕಾರ ಮೊದಲು' ಯೋಜನೆಗೆ ಸಚಿವ ಸಂಪುಟ ಅಸ್ತು, ಪ್ರತಿ ಸಂಸ್ಥೆಗೆ ₹25 ಲಕ್ಷದವರೆಗೆ ಸಹಾಯಧನಕಲಬುರಗಿಯಲ್ಲಿ ‘LEAP ಬೆಳವಣಿಗೆ ಪ್ರಯೋಗಾಲಯ’ ಸ್ಥಾಪನೆ: ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅಸ್ತುಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲಗಳ ಸಂಚಾರBREAKING: ಕೆಪಿಎಸ್‌ಸಿ ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ, ಬಸವರಾಜ್ ಕನ್ನಾಳೆಗೆ 14 ದಿನ ನ್ಯಾಯಾಂಗ ಬಂಧನ100 ದಿನ, ನೂರಾರು ಅಭಿವೃದ್ಧಿ: ಇದು 'ಗ್ರಾಮೀಣಾಭಿವೃದ್ಧಿ'ಯಲ್ಲಿ 'ಸಚಿವ ಈಶ್ವರ ಖಂಡ್ರೆ' ಸಾಧನೆಯ ರಿಪೋರ್ಟ್ ಕಾರ್ಡ್!ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಲೇಖಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿBIG NEWS: ಸೆ.21 ರಿಂದ ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳ ಚರ್ಚೆಕ್ಲೈಮ್ಯಾಕ್ಸ್‌ ಘಟ್ಟ ತಲುಪಿದ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜೆಪಿ ನಾಯಕರುರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ನಿಯಮ ಸರಳೀಕರಣ: ಮಧ್ಯಂತರ ವರದಿಯಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಮಾಹಿತಿ