ಬೆಂಗಳೂರು: ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ (Zilla Panchayat) ಹಾಗೂ ತಾಲೂಕು ಪಂಚಾಯಿತಿ (Taluk Panchayat) ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಸರ್ಕಾರವು ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಕೃತ ವಿಶೇಷ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಮಹತ್ವದ ಅಧಿಸೂಚನೆಗಳನ್ನು ಹೊರಡಿಸಿದೆ.
ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1,129 ಸ್ಥಾನಗಳು ಹಾಗೂ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 3,656 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗಿದೆ. ಮಹಿಳೆಯರಿಗೆ ಶೇಕಡಾ 50ಕ್ಕೂ ಹೆಚ್ಚಿನ ಸ್ಥಾನಗಳು ಮೀಸಲಾಗಿರುವುದು ಈ ಬಾರಿಯ ವಿಶೇಷತೆಯಾಗಿದೆ.
ರಾಜ್ಯದ ಜಿಲ್ಲಾ ಪಂಚಾಯಿತಿ (ZP) ಮೀಸಲಾತಿ ಪಟ್ಟಿ (31 ಜಿಲ್ಲೆಗಳು)
ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯತಿ (ZP) ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯತಿಗಳ ಒಟ್ಟು ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕೃತ ವಿಶೇಷ ರಾಜ್ಯಪತ್ರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ಈ ಮಹತ್ವದ ಆದೇಶ ನೀಡಿದ್ದು, ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ.
ಒಟ್ಟು 1,129 ಸ್ಥಾನಗಳು: ಮಹಿಳೆಯರಿಗೆ 571 ಸ್ಥಾನ ಮೀಸಲು
ರಾಜ್ಯದ 31 ಜಿಲ್ಲಾ ಪಂಚಾಯತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚು ಅಂದರೆ ಬರೋಬ್ಬರಿ 571 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ವರ್ಗವಾರು ಮೀಸಲಾತಿಯ ಪೂರ್ಣ ವಿವರ ಹೀಗಿದೆ:
-
ಅನುಸೂಚಿತ ಜಾತಿ (SC): ಒಟ್ಟು 225 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 121 ಸ್ಥಾನಗಳು)
-
ಅನುಸೂಚಿತ ಪಂಗಡ (ST): ಒಟ್ಟು 102 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 59 ಸ್ಥಾನಗಳು)
-
ಹಿಂದುಳಿದ ವರ್ಗ 'ಅ' (BC-A): ಒಟ್ಟು 183 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 98 ಸ್ಥಾನಗಳು)
-
ಹಿಂದುಳಿದ ವರ್ಗ 'ಬ' (BC-B): ಒಟ್ಟು 43 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 25 ಸ್ಥಾನಗಳು)
-
ಸಾಮಾನ್ಯ ವರ್ಗ (General): ಒಟ್ಟು 576 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 268 ಸ್ಥಾನಗಳು)
ಜಿಲ್ಲಾವಾರು ಒಟ್ಟು ಸ್ಥಾನಗಳ ವಿವರ
ಅಧಿಸೂಚನೆಯ ಪ್ರಕಾರ ರಾಜ್ಯದ ವಿವಿಧ ಜಿಲ್ಲಾ ಪಂಚಾಯತಿಗಳ ಒಟ್ಟು ಸ್ಥಾನಗಳು ಮತ್ತು ಮಹಿಳೆಯರಿಗೆ ನಿಗದಿಪಡಿಸಲಾದ ಸ್ಥಾನಗಳ ವಿವರ ಇಂತಿದೆ:
ಕರ್ನಾಟಕ ಜಿಲ್ಲಾ ಪಂಚಾಯತಿ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ಪಟ್ಟಿ
| ಕ್ರ.ಸಂ. | ಜಿಲ್ಲೆಯ ಹೆಸರು | ಒಟ್ಟು ಸ್ಥಾನಗಳು | ಅನುಸೂಚಿತ ಜಾತಿ (SC) | ಅನುಸೂಚಿತ ಪಂಗಡ (ST) | ಹಿಂದುಳಿದ ವರ್ಗ 'ಅ' | ಹಿಂದುಳಿದ ವರ್ಗ 'ಬ' | ಸಾಮಾನ್ಯ ವರ್ಗ |
| 1 | ಬೆಂಗಳೂರು ನಗರ | 28 (14) | 7 (4) | 1 (1) | 5 (3) | 1 (0) |
14 (6) |
| 2 | ಬೆಂಗಳೂರು ಗ್ರಾಮಾಂತರ | 28 (14) | 7 (4) | 2 (1) | 4 (2) | 1 (1) |
14 (6) |
| 3 | ಕೋಲಾರ | 29 (15) | 9 (5) | 2 (1) | 2 (1) | 1 (1) |
15 (7) |
| 4 | ಚಿಕ್ಕಬಳ್ಳಾಪುರ | 28 (14) | 8 (4) | 4 (2) | 2 (1) | 0 (0) |
14 (7) |
| 5 | ಬೆಂಗಳೂರು ದಕ್ಷಿಣ | 28 (14) | 6 (3) | 1 (1) | 6 (3) | 1 (1) |
14 (6) |
| 6 | ತುಮಕೂರು | 57 (29) | 12 (6) | 5 (3) | 9 (5) | 2 (1) |
29 (14) |
| 7 | ಚಿತ್ರದುರ್ಗ | 37 (19) | 9 (5) | 7 (4) | 2 (1) | 0 (0) |
19 (9) |
| 8 | ದಾವಣಗೆರೆ | 29 (15) | 7 (4) | 4 (2) | 2 (1) | 1 (1) |
15 (7) |
| 9 | ಶಿವಮೊಗ್ಗ | 39 (20) | 8 (4) | 2 (1) | 7 (4) | 2 (1) |
20 (10) |
| 10 | ಮೈಸೂರು | 46 (23) | 10 (5) | 7 (4) | 5 (3) | 1 (0) |
23 (11) |
| 11 | ಮಂಡ್ಯ | 40 (20) | 6 (3) | 1 (1) | 10 (5) | 3 (2) |
20 (9) |
| 12 | ಹಾಸನ | 38 (19) | 8 (4) | 1 (0) | 8 (4) | 2 (1) |
19 (10) |
| 13 | ಕೊಡಗು | 29 (15) | 4 (2) | 3 (2) | 6 (3) | 1 (1) |
15 (7) |
| 14 | ಚಿಕ್ಕಮಗಳೂರು | 36 (18) | 9 (5) | 2 (1) | 6 (3) | 1 (1) |
18 (8) |
| 15 | ಚಾಮರಾಜನಗರ | 28 (14) | 7 (4) | 3 (2) | 3 (2) | 1 (0) |
14 (6) |
| 16 | ದಕ್ಷಿಣ ಕನ್ನಡ | 35 (18) | 3 (2) | 2 (1) | 10 (5) | 2 (1) |
18 (9) |
| 17 | ಉಡುಪಿ | 28 (14) | 2 (1) | 1 (1) | 7 (4) | 2 (1) |
16 (7) |
| 18 | ಬೆಳಗಾವಿ | 90 (45) | 11 (6) | 7 (4) | 22 (11) | 5 (3) |
45 (21) |
| 19 | ಧಾರವಾಡ | 28 (14) | 3 (2) | 2 (1) | 7 (4) | 2 (1) |
14 (6) |
| 20 | ಗದಗ | 25 (13) | 5 (3) | 2 (1) | 4 (2) | 1 (1) |
13 (6) |
| 21 | ಹಾವೇರಿ | 34 (17) | 5 (3) | 3 (2) | 7 (4) | 2 (1) |
17 (7) |
| 22 | ವಿಜಯಪುರ | 45 (23) | 10 (5) | 1 (1) | 9 (5) | 2 (1) |
23 (11) |
| 23 | ಬಾಗಲಕೋಟೆ | 37 (19) | 7 (4) | 2 (1) | 7 (4) | 2 (1) |
19 (9) |
| 24 | ಉತ್ತರ ಕನ್ನಡ | 53 (27) | 4 (2) | 1 (1) | 14 (7) | 4 (2) |
30 (15) |
| 25 | ಕಲಬುರಗಿ | 48 (24) | 14 (7) | 1 (1) | 7 (4) | 2 (1) |
24 (11) |
| 26 | ಯಾದಗಿರಿ | 27 (14) | 7 (4) | 4 (2) | 2 (1) | 0 (0) |
14 (7) |
| 27 | ಬೀದರ್ | 34 (17) | 9 (5) | 6 (3) | 2 (1) | 0 (0) |
17 (8) |
| 28 | ರಾಯಚೂರು | 39 (20) | 9 (5) | 9 (5) | 1 (1) | 0 (0) |
20 (9) |
| 29 | ಕೊಪ್ಪಳ | 30 (15) | 6 (3) | 4 (2) | 4 (2) | 1 (1) |
15 (7) |
| 30 | ಬಳ್ಳಾರಿ | 28 (14) | 7 (4) | 6 (3) | 1 (1) | 0 (0) |
14 (6) |
| 31 | ವಿಜಯನಗರ | 28 (14) | 5 (3) | 7 (4) | 2 (1) | 0 (0) |
14 (6) |
| ಒಟ್ಟು | ರಾಜ್ಯದ ಒಟ್ಟು | 1,129 (571) | 225 (121) |



ತಾಲ್ಲೂಕು ಪಂಚಾಯಿತಿ (TP) ಜಿಲ್ಲಾವಾರು ಮೀಸಲಾತಿ ಪಟ್ಟಿ
ರಾಜ್ಯದಲ್ಲಿ ಬಹುನಿರೀಕ್ಷಿತ ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 123ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಿದೆ.
ಸರ್ಕಾರವು ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ರಾಜ್ಯದ 31 ಜಿಲ್ಲೆಗಳ ತಾಲ್ಲೂಕು ಪಂಚಾಯತಿಗಳಿಗೆ ಹೊಸದಾಗಿ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಆದೇಶ ನೀಡಿದೆ.
ಒಟ್ಟು 3,656 ಸ್ಥಾನಗಳು: ಮಹಿಳೆಯರಿಗೆ 1,905 ಸೀಟುಗಳು ಮೀಸಲು
ರಾಜ್ಯದ ಒಟ್ಟು ತಾಲ್ಲೂಕು ಪಂಚಾಯತಿಗಳಲ್ಲಿ 3,656 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ ಸಿಂಹಪಾಲು ದೊರೆತಿದೆ. ಒಟ್ಟು ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ವರ್ಗವಾರು ಮೀಸಲಾತಿಯ ವಿವರ ಹೀಗಿದೆ:
-
ಅನುಸೂಚಿತ ಜಾತಿ (SC): ಒಟ್ಟು 733 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 429 ಸ್ಥಾನಗಳು)
-
ಅನುಸೂಚಿತ ಪಂಗಡ (ST): ಒಟ್ಟು 394 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 287 ಸ್ಥಾನಗಳು)
-
ಹಿಂದುಳಿದ ವರ್ಗ 'ಅ' (BC-A): ಒಟ್ಟು 508 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 306 ಸ್ಥಾನಗಳು)
-
ಹಿಂದುಳಿದ ವರ್ಗ 'ಬ' (BC-B): ಒಟ್ಟು 111 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 64 ಸ್ಥಾನಗಳು)
-
ಸಾಮಾನ್ಯ ವರ್ಗ (General): ಒಟ್ಟು 1,910 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 819 ಸ್ಥಾನಗಳು)
ಜಿಲ್ಲಾವಾರು ಸ್ಥಾನಗಳ ವಿವರ
ಅಧಿಸೂಚನೆಯ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳ ತಾಲ್ಲೂಕು ಪಂಚಾಯತಿ ಸ್ಥಾನಗಳ ಒಟ್ಟು ವಿವರ ಇಂತಿದೆ:
-
ಬೆಳಗಾವಿ ಜಿಲ್ಲೆ: ಗರಿಷ್ಠ 301 ಸ್ಥಾನಗಳು (ಮಹಿಳೆಯರಿಗೆ 154)
-
ತುಮಕೂರು ಜಿಲ್ಲೆ: 196 ಸ್ಥಾನಗಳು (ಮಹಿಳೆಯರಿಗೆ 100)
-
ಕಲಬುರಗಿ ಜಿಲ್ಲೆ: 175 ಸ್ಥಾನಗಳು (ಮಹಿಳೆಯರಿಗೆ 90)
-
ಮೈಸೂರು ಜಿಲ್ಲೆ: 163 ಸ್ಥಾನಗಳು (ಮಹಿಳೆಯರಿಗೆ 84)
-
ವಿಜಯಪುರ ಜಿಲ್ಲೆ: 157 ಸ್ಥಾನಗಳು (ಮಹಿಳೆಯರಿಗೆ 83)
-
ಬಾಗಲಕೋಟೆ ಜಿಲ್ಲೆ: 136 ಸ್ಥಾನಗಳು (ಮಹಿಳೆಯರಿಗೆ 73)
-
ಮಂಡ್ಯ ಜಿಲ್ಲೆ: 135 ಸ್ಥಾನಗಳು (ಮಹಿಳೆಯರಿಗೆ 69)
-
ಹಾಸನ ಜಿಲ್ಲೆ: 134 ಸ್ಥಾನಗಳು (ಮಹಿಳೆಯರಿಗೆ 70)
-
ರಾಯಚೂರು ಜಿಲ್ಲೆ: 133 ಸ್ಥಾನಗಳು (ಮಹಿಳೆಯರಿಗೆ 69)
-
ದಕ್ಷಿಣ ಕನ್ನಡ ಜಿಲ್ಲೆ: 126 ಸ್ಥಾನಗಳು (ಮಹಿಳೆಯರಿಗೆ 65)
-
ಚಿತ್ರದುರ್ಗ ಜಿಲ್ಲೆ: 125 ಸ್ಥಾನಗಳು (ಮಹಿಳೆಯರಿಗೆ 65)
-
ಬೀದರ್ ಜಿಲ್ಲೆ: 123 ಸ್ಥಾನಗಳು (ಮಹಿಳೆಯರಿಗೆ 63)
-
ಹಾವೇರಿ ಜಿಲ್ಲೆ: 122 ಸ್ಥಾನಗಳು (ಮಹಿಳೆಯರಿಗೆ 63)
-
ಉತ್ತರ ಕನ್ನಡ ಜಿಲ್ಲೆ: 118 ಸ್ಥಾನಗಳು (ಮಹಿಳೆಯರಿಗೆ 65)
-
ಶಿವಮೊಗ್ಗ ಜಿಲ್ಲೆ: 113 ಸ್ಥಾನಗಳು (ಮಹಿಳೆಯರಿಗೆ 59)
-
ಕೋಲಾರ ಜಿಲ್ಲೆ: 107 ಸ್ಥಾನಗಳು (ಮಹಿಳೆಯರಿಗೆ 54)
-
ಚಿಕ್ಕಬಳ್ಳಾಪುರ ಜಿಲ್ಲೆ: 105 ಸ್ಥಾನಗಳು (ಮಹಿಳೆಯರಿಗೆ 56)
-
ಕೊಪ್ಪಳ ಜಿಲ್ಲೆ: 104 ಸ್ಥಾನಗಳು (ಮಹಿಳೆಯರಿಗೆ 55)
-
ಚಿಕ್ಕಮಗಳೂರು ಜಿಲ್ಲೆ: 100 ಸ್ಥಾನಗಳು (ಮಹಿಳೆಯರಿಗೆ 54)
-
ದಾವಣಗೆರೆ ಜಿಲ್ಲೆ: 98 ಸ್ಥಾನಗಳು (ಮಹಿಳೆಯರಿಗೆ 51)
-
ಉಡುಪಿ ಜಿಲ್ಲೆ: 95 ಸ್ಥಾನಗಳು (ಮಹಿಳೆಯರಿಗೆ 49)
-
ವಿಜಯನಗರ ಜಿಲ್ಲೆ: 93 ಸ್ಥಾನಗಳು (ಮಹಿಳೆಯರಿಗೆ 49)
-
ಯಾದಗಿರಿ ಜಿಲ್ಲೆ: 92 ಸ್ಥಾನಗಳು (ಮಹಿಳೆಯರಿಗೆ 48)
-
ಧಾರವಾಡ ಜಿಲ್ಲೆ: 89 ಸ್ಥಾನಗಳು (ಮಹಿಳೆಯರಿಗೆ 47)
-
ಚಾಮರಾಜನಗರ ಜಿಲ್ಲೆ: 83 ಸ್ಥಾನಗಳು (ಮಹಿಳೆಯರಿಗೆ 43)
-
ಬಳ್ಳಾರಿ ಜಿಲ್ಲೆ: 80 ಸ್ಥಾನಗಳು (ಮಹಿಳೆಯರಿಗೆ 42)
-
ಬೆಂಗಳೂರು ದಕ್ಷಿಣ (ರಾಮನಗರ ಭಾಗ): 77 ಸ್ಥಾನಗಳು (ಮಹಿಳೆಯರಿಗೆ 40)
-
ಬೆಂಗಳೂರು ನಗರ: 76 ಸ್ಥಾನಗಳು (ಮಹಿಳೆಯರಿಗೆ 40)
-
ಬೆಂಗಳೂರು ಗ್ರಾಮಾಂತರ: 75 ಸ್ಥಾನಗಳು (ಮಹಿಳೆಯರಿಗೆ 38)
-
ಗದಗ ಜಿಲ್ಲೆ: 77 ಸ್ಥಾನಗಳು (ಮಹಿಳೆಯರಿಗೆ 41)
-
ಕೊಡಗು ಜಿಲ್ಲೆ: 48 ಸ್ಥಾನಗಳು (ಮಹಿಳೆಯರಿಗೆ 26)
ಗ್ರಾಮೀಣ ರಾಜಕೀಯ ಚಟುವಟಿಕೆಗಳಿಗೆ ಗರಿಗೆದರಿದ ಕಣ
ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ತಾಲ್ಲೂಕು ಪಂಚಾಯತಿಗಳಿಗೆ ಅಧಿಕೃತ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಗ್ರಾಮೀಣ ಭಾಗದಲ್ಲಿ ಚುನಾವಣಾ ಕಾವು ರಂಗೇರಿದೆ. ಸರ್ಕಾರದ ಈ ಅಧಿಸೂಚನೆಯ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಶೀಘ್ರದಲ್ಲೇ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..







