LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನ್ ಮುಲ್ | ಬಿಜೆಪಿ ನಾಯಕರ ರೀತಿ ಹಳ್ಳ ಹಿಡಿಸುವ ಪ್ರಶ್ನೆಯೇ ಇಲ್ಲ: ಶಾಸಕ ಕೆ.ಎಂ.ಉದಯ್ ಕಿಡಿ

ಮಂಡ್ಯ :  ಮನ್‌ಮುಲ್‌ನ ಹಾಲಿನಪುಡಿ ಕಲಬೆರಕೆ ಪ್ರಕರಣದಲ್ಲಿ ಪಕ್ಷಾತೀತವಾಗಿ ಯಾರೇ ಶಾಮೀಲಾಗಿದ್ದರು ಅವರ ವಿರುದ್ಧ ಕಠಿಣ ಕ್ರಮವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಸ್ಪಷ್ಟಪಡಿಸಿದರು.

ಮದ್ದೂರು ತಾಲೂಕಿನ ವಳಗೆರೆಹಳ್ಳಿ, ದೇಶಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳಲ್ಲಿ ಎಸ್ಸಿಪಿ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ಹಗರಣಗಳು ನಡೆದಿವೆ. ಅವುಗಳನ್ನು ಬಿಜೆಪಿ ನಾಯಕರು ಹಳ್ಳ ಹಿಡಿಸಿದ್ದಾರೆ. ಹೀಗಾಗಿ ಈ ಹಗರಣವು ಮುಚ್ಚಿ ಹೋಗುತ್ತದೆ ಎಂಬ ಕಲ್ಪನೆ ಅವರದು ಆದರೆ, ಮನ್ ಮುಲ್ ಈ ರಾಜ್ಯದ ರೈತರ ಜೀವನಾಡಿಯಾಗಿದೆ. ರೈತರ ಸಂಸ್ಥೆಯಾಗಿರುವ ಇದರಲ್ಲಿ ಯಾರೇ ಭಾಗಿಯಾಗಿದ್ದರು. ಕಾಪಾಡುವ ಪ್ರಶ್ನೆಯೇ ಇಲ್ಲ.  ಇದರ ಸತ್ಯಾಸತ್ಯತೆ ಹೊರ ಬರಬೇಕೆಂದೇ ನಮ್ಮ ಪಕ್ಷದ ಮಾಜಿ ಅಧ್ಯಕ್ಷರನ್ನೇ ಬಂಧಿಸಲಾಗಿದೆ ಎಂದರು.

ಹಾಲಿನ ಪುಡಿ ಹಗರಣದಲ್ಲಿ ಈಗಾಗಲೇ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು, ಎಂಟು ಮಂದಿಯನ್ನು ಬಂಧಿಸಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿರುವಾಗಲೂ  ಮೈತ್ರಿ ಪಕ್ಷದವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಯಾರು ಸಹ ಪ್ರಕರಣ ಸಂಬಂಧ ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಪಕ್ಷದ ಬೆಂಬಲಿತರೇ ಅಧ್ಯಕ್ಷರಾಗಿದ್ದಾರೆ. ಈ ಹಗರಣ ಕಂಡು ಬಂದ ಹಿನ್ನೆಲೆಯಲ್ಲಿ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೋಲೀಸ್ ಅಧಿಕಾರಿಗಳು ಸಹ ನಿಷ್ಪಕ್ಷಪಾತವಾಗಿ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಹೀಗಾಗಿ ಮೈತ್ರಿ ಪಕ್ಷದವರಿಗೆ ಕೆಲಸವಿಲ್ಲದೇ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಮಾಜಿ ಉಪಾಧ್ಯಕ್ಷ ಪ್ರೀತಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಾಜೇಂದ್ರ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ಜಿಲ್ಲಾ ಉಪಾಧ್ಯಕ್ಷ ಆದೇಶ್, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಶಂಕರ್, ನಿತೀನ್, ಯೋಗರಾಜ್, ಸಿದ್ದರಾಜು, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ಸರ್ಕಾರಿ, ಅರಣ್ಯ ಜಾಗದ ಆಸ್ತಿಯನ್ನು ತೆರಿಗೆಯಿಂದ ಕೈಬಿಡುವ ಸುತ್ತೋಲೆಗೆ ತಡೆ: ಸಚಿವ ಈಶ್ವರ್ ಖಂಡ್ರೆಬಾಂಗ್ಲಾದ ಈ ಭಿಕ್ಷುಕನಿಗೆ 21 ಮಂದಿ ಪತ್ನಿಯರು ; ಹೆಸರು ನೆನಪಿಲ್ಲದೆ ನಿತ್ಯವೂ ಪರದಾಟ !ತಂದೆ-ತಾಯಿ ಮತ್ತು ಪತಿಯೊಂದಿಗೆ ಬೃಹತ್ ಆಸ್ತಿ ಖರೀದಿಸಿದ ನಟಿ ಅನುಷ್ಕಾ ; ಒಂದೇ ಮಹಡಿಯಲ್ಲಿ ಕುಟುಂಬಸ್ಥರಿಗೆ ಅಪಾರ್ಟ್‌ಮೆಂಟ್ !“ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು” : ರಾಹುಲ್ ಗಾಂಧಿ ಗುಡುಗುಮದುವೆಯಾದ ಬಳಿಕ ಮಹಿಳೆಯರು ಆಧಾರ್‌ನಲ್ಲಿ ಮನೆಯ ಹೆಸರನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಸರಳ ಪ್ರಕ್ರಿಯೆರಾಹುಲ್ ಗಾಂಧಿಯವರ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ಚುನಾವಣಾ ಆಯೋಗ ಮುತ್ತಿಗೆ ಯತ್ನHome Loan : RBI ಬಡ್ಡಿದರ ಏರಿಕೆ; 25 ವರ್ಷದ ₹50 ಲಕ್ಷ ಸಾಲಕ್ಕೆ ₹2.45 ಲಕ್ಷ ಹೆಚ್ಚುವರಿ ಹೊರೆ!ಹಿರಿಯ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿಗೆ ಮಹತ್ವದ ಹುದ್ದೆ: ಬಂಗಾಳ ಸರ್ಕಾರದ ಸಲಹೆಗಾರರಾಗಿ ನೇಮಕ, ಕ್ಯಾಬಿನೆಟ್ ದರ್ಜೆಯ ಸ್ಥಾನ‘ಇಸ್ಲಾಂ ಸ್ವೀಕರಿಸು, ಬುರ್ಖಾ ಧರಿಸು’! ₹55 ಲಕ್ಷ ಖರ್ಚು ಮಾಡಿಸಿ ಮತಾಂತರಕ್ಕೆ ಒತ್ತಡ ? ಥಾಯ್ಲೆಂಡ್ ಮಹಿಳೆ ದೂರುಯಾರೂ ಗುಳೆ ಹೋಗಬೇಡಿ, ಊರಲ್ಲೇ ಕೆಲಸ ಕೊಡುತ್ತೇವೆ: DCM ಡಾ. ಜಿ. ಪರಮೇಶ್ವರ ಭರವಸೆ