LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Gold : ನಿಮ್ಮ ಜಮೀನಿನಲ್ಲಿ ಬಂಗಾರ ಸಿಕ್ಕರೆ ಯಾರಿಗೆ ಸೇರಲಿದೆ ? ಕಾನೂನು ಏನು ಹೇಳುತ್ತದೆ ತಿಳಿಯಿರಿ

ರೈತರ ಹೊಲಗಳಲ್ಲಿ ಬಂಗಾರ ಸಿಕ್ಕಿದೆ, ಮನೆ ತೋಡುವಾಗ ಚಿನ್ನ-ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ ಎಂಬ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಹೊಲದಲ್ಲಿ ಬಂಗಾರ ಸಿಕ್ಕರೆ ಅದು ಭೂಮಿಯ ಮಾಲೀಕನದೇ ಆಗುತ್ತದೆಯೇ? ಅಥವಾ ಸರ್ಕಾರದದೇ? ಎಂಬ ಪ್ರಶ್ನೆ ಹಲವರ ಮನದಲ್ಲಿರುತ್ತದೆ.

ನಿಮ್ಮ ಹೊಲದಲ್ಲಿ ಬಂಗಾರ ಸಿಕ್ಕರೆ ಅದು ನಿಮ್ಮದೇ ಆಗುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆದರೆ ಭಾರತೀಯ ಕಾನೂನುಗಳ ಪ್ರಕಾರ ಹೊಲದಲ್ಲಿ ಪತ್ತೆಯಾಗುವ ಬಂಗಾರದ ಖನಿಜ ಅಥವಾ ಪುರಾತನ ನಿಧಿಯ ಮೇಲೆ ಭೂಮಿಯ ಮಾಲೀಕರಿಗೆ ಸಂಪೂರ್ಣ ಹಕ್ಕು ಇರುವುದಿಲ್ಲ. ಅದು ಖನಿಜವೇ ಅಥವಾ ಐತಿಹಾಸಿಕ ವಸ್ತುವೇ ಎಂಬುದರ ಆಧಾರದ ಮೇಲೆ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ. ಹಾಗಾದರೆ ಹೊಲದಲ್ಲಿ ಬಂಗಾರ ಸಿಕ್ಕರೆ ಯಾರಿಗೆ ಸೇರಲಿದೆ? ರೈತರಿಗೆ ಪರಿಹಾರ ಸಿಗುತ್ತದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾನೂನು ಏನು ಹೇಳುತ್ತದೆ?

ಭಾರತದಲ್ಲಿ ಯಾರಾದರೂ ತಮ್ಮ ಭೂಮಿಯಲ್ಲಿ ಬಂಗಾರದ ಖನಿಜ ಕಂಡುಹಿಡಿದರೆ ಅದು ಸಂಪೂರ್ಣವಾಗಿ ಭೂಮಿಯ ಮಾಲೀಕನ ಸ್ವತ್ತು ಆಗುವುದಿಲ್ಲ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಪ್ರಕಾರ ದೇಶದ ಖನಿಜ ಸಂಪತ್ತಿನ ಮೇಲೆ ಹಕ್ಕು ಸರ್ಕಾರಕ್ಕೇ ಸೇರಿದೆ.ಹೀಗಾಗಿ ಸರ್ಕಾರದ ಅನುಮತಿ ಇಲ್ಲದೆ ಬಂಗಾರವನ್ನು ತೋಡಿ ಹೊರತೆಗೆದು ಮಾರಾಟ ಮಾಡಲು ಸಾಧ್ಯವಿಲ್ಲ.

ಪುರಾತನ ನಿಧಿ ಸಿಕ್ಕರೆ ಏನು ಮಾಡಬೇಕು?

ಹೊಲದಲ್ಲಿ ಬಂಗಾರದ ನಾಣ್ಯಗಳು, ಆಭರಣಗಳು ಅಥವಾ ಐತಿಹಾಸಿಕ ಮಹತ್ವದ ವಸ್ತುಗಳು ಸಿಕ್ಕರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

  • ಜಿಲ್ಲಾಧಿಕಾರಿ ಅಥವಾ ಸಂಬಂಧಿತ ಆದಾಯ ಅಧಿಕಾರಿಗಳಿಗೆ ತಿಳಿಸಬೇಕು.
  • ಅಧಿಕಾರಿಗಳು ಆ ವಸ್ತುಗಳ ಮೌಲ್ಯ ಮತ್ತು ಐತಿಹಾಸಿಕ ಮಹತ್ವ ಪರಿಶೀಲಿಸುತ್ತಾರೆ.
  • ರಾಷ್ಟ್ರೀಯ ಪರಂಪರೆಯ ವಸ್ತುಗಳಾಗಿದ್ದರೆ ಸರ್ಕಾರ ಅವನ್ನು ಸ್ವಾಧೀನಪಡಿಸಿಕೊಳ್ಳಬಹುದು.

100 ವರ್ಷ ಹಳೆಯ ವಸ್ತುಗಳಿಗೆ ವಿಶೇಷ ನಿಯಮ

100 ವರ್ಷಕ್ಕಿಂತ ಹಳೆಯ ಐತಿಹಾಸಿಕ ವಸ್ತುಗಳು Antiquities and Art Treasures Act, 1972 ವ್ಯಾಪ್ತಿಗೆ ಬರುತ್ತವೆ.ಅವುಗಳನ್ನು ಮರೆಮಾಡುವುದು ಅಥವಾ ಅಕ್ರಮವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಬಹುದು.ನಾಣ್ಯಗಳು, ಶಿಲ್ಪಗಳು, ಶಾಸನಗಳು, ಚಿತ್ರಗಳು, ಪುರಾತನ ಕಲಾಕೃತಿಗಳು ಮುಂತಾದವುಗಳು ಈ ವರ್ಗಕ್ಕೆ ಸೇರುತ್ತವೆ.

ರೈತನಿಗೆ ಪರಿಹಾರ ಸಿಗುತ್ತದೆಯೇ?

ಸರ್ಕಾರ ಬಂಗಾರದ ಖನಿಜ ಇರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ರೈತನಿಗೆ ಪರಿಹಾರ ಅಥವಾ ಬಹುಮಾನ ಸಿಗುವ ಸಾಧ್ಯತೆ ಇರುತ್ತದೆ.ಆದರೆ ಇದು ರಾಜ್ಯ ಸರ್ಕಾರದ ನಿಯಮಗಳು ಮತ್ತು ಆ ಸಂದರ್ಭದಲ್ಲಿರುವ ಕಾನೂನುಗಳ ಮೇಲೆ ಅವಲಂಬಿತವಾಗಿರುತ್ತದೆ. ಹೊಲದಲ್ಲಿ ಬಂಗಾರ ಸಿಕ್ಕರೆ ಅದು ಎಲ್ಲಾ ಸಂದರ್ಭಗಳಲ್ಲೂ ರೈತನದೇ ಆಗುವುದಿಲ್ಲ. ಬಂಗಾರದ ಸ್ವರೂಪ, ಅದು ಖನಿಜವೇ ಅಥವಾ ಪುರಾತನ ನಿಧಿಯೇ ಎಂಬುದು, ಜೊತೆಗೆ ಸರ್ಕಾರದ ಕಾನೂನುಗಳು ಮತ್ತು ಭೂಮಿ ಹಕ್ಕುಗಳ ಆಧಾರದ ಮೇಲೆ ಅಂತಿಮ ನಿರ್ಧಾರವಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ