ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾವಧಿಯ 100 ದಿನಗಳ ಪೂರೈಕೆಯ ಸಂಭ್ರಮದಲ್ಲಿದ್ದು, ಈ ಶುಭ ಸಂದರ್ಭದಲ್ಲಿ ಸ್ವಂತ ಸೂರಿಲ್ಲದ ಬಡಜನರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈಟ್ ಇಲ್ಲದ ಅರ್ಹ ಫಲಾನುಭವಿಗಳಿಗೆ 50 ಸಾವಿರ ಉಚಿತ ನಿವೇಶನಗಳನ್ನು ವಿತರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಧಿಕೃತವಾಗಿ ಸಮ್ಮತಿ ನೀಡಲಾಗಿದೆ. ಸರ್ಕಾರವು ಇಡೀ ರಾಜ್ಯಾದ್ಯಂತ ಒಟ್ಟು 15 ಲಕ್ಷ ಉಚಿತ ನಿವೇಶನಗಳನ್ನು ಒದಗಿಸುವ ಬೃಹತ್ ಗುರಿಯನ್ನು ಹೊಂದಿದ್ದು, ಇದನ್ನು ಹಂತ-ಹಂತವಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ.
3 ಹಂತಗಳಲ್ಲಿ ಯೋಜನೆ ಅನುಷ್ಠಾನ:
ಸಂಪುಟ ನಿರ್ಧಾರದಂತೆ, ಈ ಬೃಹತ್ ಯೋಜನೆಯನ್ನು ಒಟ್ಟು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಇದರ ಭಾಗವಾಗಿ ಮೊದಲ ಹಂತದಲ್ಲೇ 5 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆಗಳು ಚಾಲನೆ ಪಡೆಯಲಿವೆ.