ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 4ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 24, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ಒಟ್ಟು ಖಾಲಿ ಹುದ್ದೆಗಳು: 1,100
-
ವೆಲ್ತ್ ಎಕ್ಸಿಕ್ಯೂಟಿವ್ (JMG/S-I) – ವೆಲ್ತ್ ಮ್ಯಾನೇಜ್‌ಮೆಂಟ್ ಸರ್ವೀಸಸ್: 1,000 ಹುದ್ದೆಗಳು
-
ಎಸ್‌ಸಿ – 150
-
ಎಸ್‌ಟಿ – 75
-
ಒಬಿಸಿ – 270
-
EWS – 100
-
ಅನ್‌ರಿಸರ್ವ್ಡ್ – 405
-
-
ಕ್ರೆಡಿಟ್ ಅನಲಿಸ್ಟ್ – C&IC (MMG/S-II) – ಕಾರ್ಪೊರೇಟ್ & ಇನ್‌ಸ್ಟಿಟ್ಯೂಷನಲ್ ಕ್ರೆಡಿಟ್: 100 ಹುದ್ದೆಗಳು
-
ಎಸ್‌ಸಿ – 15
-
ಎಸ್‌ಟಿ – 8
-
ಒಬಿಸಿ – 27
-
EWS – 10
-
ಅನ್‌ರಿಸರ್ವ್ಡ್ – 40
-
ಶೈಕ್ಷಣಿಕ ಅರ್ಹತೆ
ವೆಲ್ತ್ ಎಕ್ಸಿಕ್ಯೂಟಿವ್:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ IC 38 (Insurance Institute of India), NISM Series VA (Mutual Fund Distributors), NISM Series XXI-A (PMS Distributors) ಅಥವಾ NISM Series V-D (Mutual Fund – Specialized Investment Fund Distributors) ಪ್ರಮಾಣಪತ್ರ ಹೊಂದಿರಬೇಕು.
ಮ್ಯಾನೇಜ್‌ಮೆಂಟ್‌ನಲ್ಲಿ 2 ವರ್ಷದ ಪೂರ್ಣಾವಧಿ ಪಿಜಿ ಪದವಿ/ಡಿಪ್ಲೊಮಾ ಅಥವಾ MBA (Finance/Marketing/Banking) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಸರ್ಕಾರಿ, ಖಾಸಗಿ ಅಥವಾ ವಿದೇಶಿ ಬ್ಯಾಂಕ್‌ಗಳು, ಬ್ರೋಕಿಂಗ್ ಸಂಸ್ಥೆಗಳು, ಸೆಕ್ಯುರಿಟೀಸ್ ಸಂಸ್ಥೆಗಳು, ಆಸ್ತಿ ನಿರ್ವಹಣಾ ಕಂಪನಿಗಳು ಅಥವಾ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ವೆಲ್ತ್ ಪ್ರಾಡಕ್ಟ್‌ಗಳ ಮಾರಾಟ ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಇರಬೇಕು.
ಕ್ರೆಡಿಟ್ ಅನಲಿಸ್ಟ್:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಅಗತ್ಯ. ಕಾರ್ಪೊರೇಟ್ ಕ್ರೆಡಿಟ್ ವಿಭಾಗದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ
-
ವೆಲ್ತ್ ಎಕ್ಸಿಕ್ಯೂಟಿವ್: 22ರಿಂದ 32 ವರ್ಷ
-
ಕ್ರೆಡಿಟ್ ಅನಲಿಸ್ಟ್: 21ರಿಂದ 33 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಅರ್ಜಿ ಶುಲ್ಕ
-
ಸಾಮಾನ್ಯ/EWS/OBC ಅಭ್ಯರ್ಥಿಗಳು – ₹850
-
SC/ST/PwBD/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು – ₹175
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆಯನ್ನು ಅರ್ಜಿ ಪರಿಶೀಲನೆ, ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗ್ರೂಪ್ ಡಿಸ್ಕಷನ್/ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
ಆನ್‌ಲೈನ್ ಪರೀಕ್ಷೆಯ ಮಾದರಿ
ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು (MCQ) ಇರುತ್ತವೆ. ಒಟ್ಟು ನಾಲ್ಕು ವಿಭಾಗಗಳಿರುತ್ತವೆ:
-
ಇಂಗ್ಲಿಷ್ ಭಾಷೆ – 20 ಪ್ರಶ್ನೆಗಳು, 20 ಅಂಕ
-
ರೀಸನಿಂಗ್ ಎಬಿಲಿಟಿ & ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ – 20 ಪ್ರಶ್ನೆಗಳು, 20 ಅಂಕ
-
ಜನರಲ್/ಎಕನಾಮಿಕ್ & ಬ್ಯಾಂಕಿಂಗ್ ಅವೇರ್‌ನೆಸ್ – 20 ಪ್ರಶ್ನೆಗಳು, 20 ಅಂಕ
-
ಅರ್ಜಿ ಸಲ್ಲಿಸುವ ಹುದ್ದೆಗೆ ಸಂಬಂಧಿಸಿದ ವಿಷಯ – 20 ಪ್ರಶ್ನೆಗಳು, 20 ಅಂಕ
ಮೊದಲ ಮೂರು ವಿಭಾಗಗಳು ಕೇವಲ ಅರ್ಹತಾ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಈ ವಿಭಾಗಗಳಲ್ಲಿ ಪಡೆದ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ.
ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗಲಿದೆ.
ಪ್ರಮುಖ ದಿನಾಂಕಗಳು
-
ಅರ್ಜಿ ಆರಂಭ: ಸೆಪ್ಟೆಂಬರ್ 4, 2026
-
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 24, 2026
ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ಅನುಭವ, ವಯೋಮಿತಿ ಮತ್ತು ಇತರ ಷರತ್ತುಗಳನ್ನು ಪರಿಶೀಲಿಸುವುದು ಸೂಕ್ತ.