LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್​ಟಿ ಯುವಕನನ್ನು ಪ್ರೀತಿಸಿದ್ದಕ್ಕೆ ಕುರುಬ ಸಮಾಜದವರಿಂದಲೇ ಕುರುಬ ಕುಟುಂಬಕ್ಕೆ ಬಹಿಷ್ಕಾರ! ಮನೆಯ ಮೇಲೆ ಕಲ್ಲು ತೂರಾಟ

ಬೆಳಗಾವಿ, ಏಪ್ರಿಲ್ 29: ಆಧುನಿಕ ಕಾಲದಲ್ಲೂ ಸಾಮಾಜಿಕ ಬಹಿಷ್ಕಾರದಂತಹ (Social Boycott) ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎನ್ನುವುದಕ್ಕೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪ್ರೀತಿಯ ವಿಚಾರವನ್ನಿಟ್ಟುಕೊಂಡು ಕುರುಬ ಸಮಾಜದವರಿಂದಲೇ ಕುರುಬ ಸಮಾಜದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬಹಿಷ್ಕೃತರೊಂದಿಗೆ ಮಾತನಾಡಿದರೆ 5 ಸಾವಿರ ದಂಡ!

ಸಾಂಬ್ರೆಕರ್ ಕುಟುಂಬದ ಯುವತಿಯೊಬ್ಬಳು ಎಸ್ಟಿ (ST) ಸಮಾಜದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಕುರುಬ ಸಮಾಜದ ಮುಖಂಡರು ಈ ಕುಟುಂಬದ ಮೇಲೆ ಕೆಂಗಣ್ಣು ಬೀರಿದ್ದಾರೆ ಎನ್ನಲಾಗಿದೆ. ಸಮಾಜದ ಕಟ್ಟಪ್ಪಣೆ ಮೀರಿ ನಡೆದಿದ್ದೀರಿ ಎಂದು ಆರೋಪಿಸಿರುವ ಪಂಚರು, ಈ ಕುಟುಂಬದ ಜೊತೆ ಸಮಾಜದ ಯಾರೂ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಒಂದು ವೇಳೆ ಯಾರಾದರೂ ಮಾತನಾಡಿದರೆ ಅವರಿಗೆ 5,000 ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರ ಕಣ್ಣೀರು

ಈ ಬಹಿಷ್ಕಾರದ ಬೆನ್ನಲ್ಲೇ ಮದುವೆ, ಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಆಹ್ವಾನವಿಲ್ಲದೆ ಸಾಂಬ್ರೆಕರ್ ಕುಟುಂಬ ಒಂಟಿಯಾಗಿದೆ. ಗ್ರಾಮದ ಇತರ ಸಮಾಜದವರೊಂದಿಗೆ ಮಾತನಾಡುವ ಅವಕಾಶವಿದ್ದರೂ, ಸ್ವಜಾತಿಯವರೇ ದೂರ ಇಟ್ಟಿರುವುದು ಕುಟುಂಬವನ್ನು ಕಂಗಾಲಾಗಿಸಿದೆ. ನಮಗೂ ಗೌರವದಿಂದ ಬದುಕಲು ಅವಕಾಶ ಕೊಡಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ ಮೈಸೂರಿನಲ್ಲಿ ಸಾಮಾಜಿಕ ಬಹಿಷ್ಕಾರ: ವಿದ್ಯುತ್ ಕಂಬ ಮುಟ್ಟಿದ್ದಕ್ಕೆ ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆಗೆ ಮುಂದಾದ ಗ್ರಾಮಸ್ಥರು

ಪೊಲೀಸರ ನಿರ್ಲಕ್ಷ್ಯದ ಆರೋಪ

ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಇದೇ ನಡುವೆ, ತಡರಾತ್ರಿ ದುಷ್ಕರ್ಮಿಗಳು ಸಾಂಬ್ರೆಕರ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾಟಾಚಾರಕ್ಕೆ ಪರಿಶೀಲಿಸಿ ವಾಪಸ್ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೀವ ಭಯದಲ್ಲಿ ದಿನ ದೂಡುತ್ತಿರುವ ನಮಗೆ ರಕ್ಷಣೆ ನೀಡಿ ಎಂದು ಸಾಂಬ್ರೆಕರ್ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕಪ್ರತಿಭಟನೆ ಹೆಸರಲ್ಲಿ ಬಿಜೆಪಿಯದ್ದು ಸದಾರಮೆ ನಾಟಕ: ಆರ್.ಅಶೋಕ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿBREAKING: 'KPSC ರದ್ದು' ಮಾಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಮನವಿ: ಸಚಿವ ಈಶ್ವರ ಖಂಡ್ರೆBREAKING: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ: ಈ ನಿಯಮಗಳ ಪಾಲನೆ ಕಡ್ಡಾಯಗಣೇಶ ತುಳಸಿಗೆ ಕೊಟ್ಟ ಶಾಪದ ಕತೆ ಇದು!