LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೇಜಸ್ವಿಗೆ ಪ್ರಪೋಸ್ ಮಾಡುವ ಮುನ್ನ ಹೆತ್ತವರ ಒಪ್ಪಿಗೆ ಪಡೆದ ಕರಣ್ ಕುಂದ್ರಾ: ಟ್ರೋಲರ್ಸ್‌ಗೆ ಸಿಕ್ಕಿತು ಖಡಕ್ ತಿರುಗೇಟು

ಖ್ಯಾತ ಕಿರುತೆರೆ ನಟ ಕರಣ್ ಕುಂದ್ರಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ತೇಜಸ್ವಿ ಪ್ರಕಾಶ್ ಅವರಿಗೆ ಮದುವೆಯ ಪ್ರಸ್ತಾಪ ಇಡುವ ಮುನ್ನ ಕರಣ್ ತಮ್ಮ ಪೋಷಕರ ಅನುಮತಿ ಪಡೆದಿದ್ದರು ಎಂಬ ವಿಷಯ ಇತ್ತೀಚೆಗೆ ಮುನ್ನೆಲೆಗೆ ಬಂದಿತ್ತು. ಇದನ್ನು ಕೇಳಿ ಕೆಲ ನೆಟ್ಟಿಗರು ಕರಣ್ ಕುಂದ್ರಾ ಅವರನ್ನು ತಮಾಷೆ ಮಾಡಿದ್ದರು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಂತ ಬುದ್ಧಿ ಇಲ್ಲವೇ ಎಂದು ಕೆಲವರು ಟೀಕಿಸಿದ್ದರು. ಇದೀಗ ಈ ಎಲ್ಲಾ ಟ್ರೋಲ್‌ಗಳಿಗೆ ಕರಣ್ ಕುಂದ್ರಾ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕರಣ್ ಕುಂದ್ರಾ, ತಮ್ಮ ವೈಯಕ್ತಿಕ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಕುಟುಂಬವನ್ನು ಒಳಗೊಳ್ಳುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜೀವನದ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಪೋಷಕರು ಮತ್ತು ಒಡಹುಟ್ಟಿದವರನ್ನು ಕೇಳದಿದ್ದರೆ ಮತ್ತೆ ಯಾರನ್ನು ಕೇಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಕುಟುಂಬವನ್ನು ಗೌರವಿಸುವುದು ಎಂದರೆ ಸ್ವಾತಂತ್ರ್ಯದ ಕೊರತೆ ಎಂದಲ್ಲ ಎಂದು ಸ್ಪಷ್ಟಪಡಿಸಿದ ಕರಣ್, ಹೊಸಬರು ಜೀವನಕ್ಕೆ ಬಂದ ತಕ್ಷಣ ಹೆತ್ತವರ ಸ್ಥಾನವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ತಮ್ಮನ್ನು ಟೀಕಿಸಿದವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, ಪೋಷಕರನ್ನು ಸಂಪರ್ಕಿಸಬಾರದು ಎಂದು ಕಮೆಂಟ್ ಮಾಡುವವರು ಭಾರತದಲ್ಲಿ ಹುಟ್ಟಿದ್ದಾರೋ ಅಥವಾ ಕಾರ್ಡಶಿಯನ್ಸ್ ಮನೆಯಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ನಿರ್ಧಾರಕ್ಕೆ ತೇಜಸ್ವಿ ಪ್ರಕಾಶ್ ಅವರದ್ದೂ ಯಾವುದೇ ಆಕ್ಷೇಪವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಗ್ ಬಾಸ್‌ನಿಂದ ಶುರುವಾದ ಪ್ರೇಮಕಥೆ

ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ 2021 ರಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಸೀಸನ್ 15 ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಇವರ ನಡುವೆ ಸ್ನೇಹ ಬೆಳೆದು, ನಂತರ ಅದು ಪ್ರೀತಿಯಾಗಿ ಬದಲಾಗಿತ್ತು. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ತೇಜ್ರಾನ್ ಎಂದು ಕರೆಯುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಈ ಜೋಡಿ ಒಟ್ಟಿಗೇ ಇತ್ತು.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ದೇಸಿ ಬ್ಲಿಂಗ್ ರಿಯಾಲಿಟಿ ಶೋನಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಕಾರ್ಯಕ್ರಮದ ಮಧ್ಯೆ ಇವರ ನಡುವಿನ ಕೆಲವು ಜಗಳಗಳು ಮತ್ತು ಮನಸ್ತಾಪಗಳನ್ನು ಕಂಡು ಇವರಿಬ್ಬರು ಬ್ರೇಕಪ್ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಕರಣ್ ಕುಂದ್ರಾ ದುಬೈನಲ್ಲಿ ತೆರೆ ಎಳೆದಿದ್ದಾರೆ. ಶೋನ ಕೊನೆಯ ಸಂಚಿಕೆಯಲ್ಲಿ ಕರಣ್ ಕುಂದ್ರಾ ದುಬೈನಲ್ಲಿ ಅದ್ಧೂರಿ ಸೆಟಪ್ ಮಾಡಿ, ತೇಜಸ್ವಿ ಪ್ರಕಾಶ್ ಅವರಿಗೆ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ. ಮೊಣಕಾಲೂರಿ ವಜ್ರದ ಉಂಗುರ ತೊಡಿಸಿ ಪಂಜಾಬಿ ಶೈಲಿಯಲ್ಲಿ ಮದುವೆಯಾಗುತ್ತೀಯಾ ಎಂದು ಕೇಳಿದಾಗ ತೇಜಸ್ವಿ ಭಾವುಕರಾಗಿ ಒಪ್ಪಿಗೆ ನೀಡಿದ್ದಾರೆ. ಆದರೆ ಇವರ ಮದುವೆ ಯಾವಾಗ ನಡೆಯಲಿದೆ ಎಂಬ ಅಧಿಕೃತ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ