LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರವಾಸಕ್ಕೆ ಬಂದಿದ್ದಾಗ ದುರಂತ: ರೆಸಾರ್ಟ್ ನಲ್ಲಿ ಎತ್ತರದಿಂದ ಈಜುಕೊಳಕ್ಕೆ ತಲೆಕೆಳಗಾಗಿ ಧುಮುಕಿದ ಯುವಕ; ಸ್ಥಳದಲ್ಲೇ ಸಾವು

ಸಿಂಧುದುರ್ಗ: ಪ್ರವಸಕ್ಕೆಂದು ಸ್ನೇಹಿತರೊಂದಿಗೆ ಬಂದು ರೆಸಾರ್ಟ್ ನಲ್ಲಿ ಮೋಜು-ಮಸ್ತಿ ಮಾಡಲು ಹೋಗಿ ಯುವಕನೊಬ್ಬ ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ. ಈಜುಕೊಳದ ಆಳ ತಿಳಿಯದೆ ಎಂಟರಿಂದ ಹತ್ತು ಅಡಿ ಎತ್ತರದಿಂದ ತಲೆಕೆಳಗಾಗಿ ದುಮುಕಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್‌ನ ವಾಯರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೊಲ್ಲಾಪುರ ಜಿಲ್ಲೆಯ ಶ್ರೇಣಿಕ್ ಮಿಲಿಂದ್ ಟಾಕಳೆ (25) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ಶ್ರೇಣಿಕ್ ಮಿಲಿಂದ್ ತನ್ನ ಒಂಬತ್ತು ಜನ ಸ್ನೇಹಿತರ ತಂಡದೊಂದಿಗೆ ಮಾಲ್ವಣ್‌ನ ವಾಯರಿ ವ್ಯಾಪ್ತಿಯ ರೆಸಾರ್ಟ್‌ಗೆ ಜೂನ್ 20 ರಂದು ಪ್ರವಾಸಕ್ಕೆ ಬಂದಿದ್ದನು. ದುರಂತ ಸಂಭವಿಸುವ ಕೆಲವೇ ಕ್ಷಣಗಳ ಮುನ್ನ ಸ್ನೇಹಿತರೆಲ ಸೇರಿ ಈಜುಕೊಳದ ಪಕ್ಕದಲ್ಲಿ ಅತ್ಯಂತ ಸಡಗರದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ದೃಶ್ಯವನ್ನು ಆತನ ಸ್ನೇಹಿತರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್​ ಮಾಡುತ್ತಿದ್ದರು. ಈ ವೇಳೆ ಶ್ರೇಣಿಕ್ ಸುಮಾರು 8 ರಿಂದ 10 ಅಡಿ ಎತ್ತರದ ಗೋಡೆಯನ್ನು ಹತ್ತಿ, ಅಲ್ಲಿಂದ ನೇರವಾಗಿ ಈಜುಕೊಳಕ್ಕೆ ತಲೆಕೆಳಗಾಗಿ ಡೈವ್ ಮಾಡಿದ್ದಾನೆ.

ಶ್ರೇಣಿಕ್ ಡೈವ್ ಮಾಡಿದ ಈಜುಕೊಳದ ಆ ಭಾಗ ಕೇವಲ 4 ಅಡಿ ಮಾತ್ರ ಆಳವಿತ್ತು ಹಾಗೂ ಅದನ್ನು ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ಅತಿಯಾದ ಎತ್ತರ ಮತ್ತು ತೀವ್ರ ವೇಗದಿಂದ ದುಮುಕಿದ ಕಾರಣ ಶ್ರೇಣಿಕ್‌ನ ತಲೆ ನೇರವಾಗಿ ಈಜುಕೊಳದ ತಳಭಾಗದ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿದೆ. ತಲೆಯ ಮುಂಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಶ್ರೇಣಿಕ್ ಈಜುಕೊಳದ ನೀರಿನಲ್ಲೇ ಪ್ರಾಣಬಿಟ್ಟಿದ್ದಾನೆ. ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದ ಸ್ನೇಹಿತರು ಮಾಲ್ವಣ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮಾಲ್ವಣ್ ಪೊಲೀಸರು ಅಸ್ವಾಭಾವಿಕ ಮರಣಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಪರೀಕ್ಷೆಯ ಪ್ರಕ್ರಿಯೆ ಮುಗಿದ ಬಳಿಕ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರವಾಸಿಗರು ರೆಸಾರ್ಟ್‌ಗಳಲ್ಲಿ ಇಂತಹ ಸಾಹಸಗಳಿಗೆ ಕೈಹಾಕದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ