LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೇಗಿದ್ದ ಟೀಮ್ ಇಂಡಿಯಾ ಹೇಗಾಯ್ತು: ಐರ್ಲೆಂಡ್ ಎದುರು ಸರಣಿ ಸೋತ ಭಾರತ ಈಗ ಅಫ್ಘಾನಿಸ್ತಾನ, ಜಿಂಬಾಬ್ವೆಗೆ ಸಮ; ಅಸಹ್ಯ ಎಂದ ಅಭಿಮಾನಿಗಳು!

ನಿನ್ನೆ ( ಜೂನ್ 28 ) ಬೆಲ್ಟ್‌ಫಾಸ್ಟ್ ಕ್ರೀಡಾಂಗಣದಲ್ಲಿ ನಡೆದ ಐರ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಐರ್ಲೆಂಡ್ 1 ರನ್‌ನ ರೋಚಕ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಗೆದ್ದುಬೀಗಿ ಇತಿಹಾಸ ನಿರ್ಮಿಸಿತು.

ಮೊದಲ ಪಂದ್ಯದಲ್ಲಿ 34 ರನ್‌ಗಳಿಂದ ಭಾರತವನ್ನು ಸೋಲಿಸಿ ಅದೇ ಮೊದಲ ಬಾರಿಗೆ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಗೆದ್ದ ದಾಖಲೆ ಬರೆದಿದ್ದ ಐರ್ಲೆಂಡ್ ನಿನ್ನೆ ಎರಡನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ ವಿರುದ್ಧ ಮೊದಲ ಟಿ ಟ್ವೆಂಟಿ ಸರಣಿ ಜಯ ಸಾಧಿಸಿದ ಐತಿಹಾಸಿಕ ದಾಖಲೆಯನ್ನೂ ಬರೆಯಿತು.

ಈ ಮೂಲಕ ಐರ್ಲೆಂಡ್ ಮೂರನೇ ಫುಲ್ ಮೆಂಬರ್ಸ್ ನೇಷನ್ ( ಟೆಸ್ಟ್ ಕ್ರಿಕೆಟ್ ಆಡುವ ಹಾಗೂ ಐಸಿಸಿಯಲ್ಲಿ ಮತ ಚಲಾಯಿಸುವ ಹಕ್ಕಿರುವ ದೇಶ ) ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಗೆದ್ದ ದಾಖಲೆ ಬರೆದಿದೆ.

ಹೌದು, 2021ರಲ್ಲಿ ಜಿಂಬಾಬ್ವೆ ವಿರುದ್ಧ 3-2 ಅಂತರದಲ್ಲಿ ಟಿ ಟ್ವೆಂಟಿ ಸರಣಿಯನ್ನು ಗೆಲ್ಲುವ ಮೂಲಕ ಅದೇ ಮೊದಲ ಬಾರಿಗೆ ಫುಲ್ ಮೆಂಬರ್ ನೇಷನ್ ವಿರುದ್ಧ ಟಿ ಟ್ವೆಂಟಿ ಸರಣಿ ಗೆದ್ದು ಇತಿಹಾಸ ಬರೆದಿದ್ದ ಐರ್ಲೆಂಡ್ ಬಳಿಕ ಅಫ್ಘಾನಿಸ್ತಾನದ ವಿರುದ್ಧ 2022ರಲ್ಲಿ 3-2 ಅಂತರದಲ್ಲಿ ಸರಣಿ ಗೆದ್ದು ಎರಡನೇ ಬಾರಿಗೆ ಈ ಸಾಧನೆ ಮಾಡಿತ್ತು. ಮತ್ತೊಮ್ಮೆ 2023ರಲ್ಲಿ ಜಿಂಬಾಬ್ವೆಯನ್ನು 2-1 ಅಂತರದಲ್ಲಿ ಸೋಲಿಸಿತು.

ಹೀಗೆ ಫುಲ್ ಮೆಂಬರ್ ದೇಶಗಳ ಪೈಕಿ ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನಗಳ ವಿರುದ್ಧ ಮಾತ್ರ ಟಿ ಟ್ವೆಂಟಿ ಸರಣಿಯನ್ನು ಗೆದ್ದಿದ್ದ ಐರ್ಲೆಂಡ್ ಇದೀಗ ಭಾರತವನ್ನು ಸೋಲಿಸಿ ಸಂಖ್ಯೆಯನ್ನು ಮೂರಕ್ಕೆ ಏರಿಸಿಕೊಂಡಿದೆ.

ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶಗಳ ವಿರುದ್ಧವೂ ಟಿ ಟ್ವೆಂಟಿ ಸರಣಿ ಆಡಿರುವ ಐರ್ಲೆಂಡ್ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದು, ಭಾರತ ಸೋಲುಂಡಿರುವುದು ಸದ್ಯ ಭಾರೀ ಮುಖಭಂಗಕ್ಕೆ ಕಾರಣವಾಗಿದೆ.

ಅದರಲ್ಲೂ ಐರ್ಲೆಂಡ್ ವಿರುದ್ಧ ವೈಟ್‌ವಾಷ್ ಆದ ಮೊದಲ ತಂಡ ಎಂಬ ಕೆಟ್ಟ ದಾಖಲೆಯನ್ನೂ ಸಹ ಭಾರತ ಮೈ ಮೇಲೆ ಎಳೆದುಕೊಂಡಿದ್ದು, ಸತತ ಎರಡು ಟಿ ಟ್ವೆಂಟಿ ವಿಶ್ವಕಪ್ ಗೆದ್ದು, ಮೂರು ವರ್ಷಗಳ ಕಾಲ ಟಿ ಟ್ವೆಂಟಿ ಸರಣಿಯನ್ನೇ ಸೋಲದ ಭಾರತ ಐರ್ಲೆಂಡ್ ಎದುರು ಸೋತು ಸದ್ಯ ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನಗಳ ಸಾಲಿಗೆ ಸೇರ್ಪಡೆಯಾಗಿದ್ದು, ಹೇಗಿದ್ದ ತಂಡ ಹೇಗಾಯಿತು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಎಂತಹ ಅಸಹ್ಯ ಮಟ್ಟಕ್ಕೆ ತಂಡ ಕುಸಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ