LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ: ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ವಿಚಾರ ವಿನಿಮಯ

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡಾವಳ ಹೂಡಿಕೆ ಸೆಳೆಯುವ ಉದ್ದೇಶದೊಂದಿಗೆ ಫ್ರಾನ್ಸ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಅವರು ಮೂರನೆಯ ದಿನವಾದ ಬುಧವಾರ ಲಿಸಿ ಏರೋಸ್ಪೇಸ್, ಆಬರ್ಟ್ ಅಂಡ್ ಡುವಲ್‌ ಮತ್ತು ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಪ್ಯಾರಿಸ್ ನಿಂದ ಮಾಹಿತಿ ನೀಡಿರುವ ಅವರು, ಸಂಕೀರ್ಣ ಮೆಟಾಲಿಕ್ ಮೆಟೀರಿಯಲ್ ಕ್ಷೇತ್ರದಲ್ಲಿ ಅಗ್ರ ಕಂಪನಿಯಾಗಿರುವ ಆಬರ್ಟ್ ಅಂಡ್ ಡುವಲ್ ಕಂಪನಿಗೆ ಬೆಳಗಾವಿಯಲ್ಲಿ ಈಗಾಗಲೇ ಇರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಕಂಪನಿಯು ಬೆಳಗಾವಿಯಲ್ಲಿನ ಏಕಸ್ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ ನೆಲೆಯೂರಿದೆ. ಕಂಪನಿಯು ಮತ್ತಷ್ಟು ಹೂಡಿಕೆ ಮಾಡುವ ಕುರಿತು ಏಕಸ್ ಜತೆ ಚರ್ಚಿಸಬೇಕಾದ ಅಗತ್ಯವನ್ನು ರಾಜ್ಯ ಸರಕಾರ ಮತ್ತು ಕಂಪನಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಕಂಪನಿಯು ರಾಜ್ಯದಲ್ಲಿ  ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ ಜತೆಯಲ್ಲೂ ಸಹಭಾಗಿತ್ವ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಲಿಸಿ ಏರೋಸ್ಪೇಸ್ ಕಂಪನಿಯು ಬಿಡಿಭಾಗಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಬೆಂಗಳೂರಿನಲ್ಲಿ  ತಯಾರಿಕಾ ಘಟಕವನ್ನು ಹೊಂದಿದೆ. ಕಂಪನಿಯು ತನ್ನ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡಿದೆ. ನಾವು ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಹೇಳಿದ್ದೇವೆ ಎಂದು ಅವರು ನುಡಿದಿದ್ದಾರೆ.

ಬೆಂಗಳೂರಿನಲ್ಲಿ ತನ್ನ ತಯಾರಿಕಾ ಸ್ಥಾವರ ಹೊಂದಿರುವ ಮೆಟೀರಿಯಲ್ಸ್ ಕ್ಷೇತ್ರದ ಆರ್ಕೆಮಾ ಕಂಪನಿಯೊಂದಿಗಿನ ಮಾತುಕತೆಯೂ ಸಕಾರಾತ್ಮಕವಾಗಿ ನಡೆಯಿತು. ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಇರುವ ಸದವಕಾಶಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ಲಿಸಿ ಏರೋಸ್ಪೇಸ್ ಕಂಪನಿಯ ಉನ್ನತ ಪ್ರತಿನಿಧಿಗಳಾದ ಫ್ರಾಂಕೋಯಿಸ್ ಕ್ಸೇವಿಯರ್, ಭಾರತದ ವಿಭಾಗದ ಮುಖ್ಯಸ್ಥ ಅನಿಲ್ ಚೌಧರಿ, ಆರ್ಕೆಮಾ ಕಂಪನಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಕದ್ರಿ, ಮಾಥ್ಯೂ ಲಾರೆಂಟ್, ವರ್ಜಿನ್ ಗುರಿನ್, ಆಬರ್ಟ್ ಅಂಡ್ ಡುವನ್ ಸಿಎಫ್‌ಒ ಪ್ಯಾಟ್ರಿಕ್ ಭಾಗವಹಿಸಿದ್ದರು. 

news_1788961292_0_226.webp

ಫ್ರಾನ್ಸ್ ಕನ್ನಡ ಬಳಗದ ಭೇಟಿ 

ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ 'ಫ್ರಾನ್ಸ್ ಕನ್ನಡ ಬಳಗ'ದ ಪದಾಧಿಕಾರಿಗಳು ಸಚಿವ ಎಂ ಬಿ ಪಾಟೀಲ ಅವರನ್ನು ಬುಧವಾರ ಭೇಟಿಯಾಗಿದ್ದರು.

ಈ ಸಂದರ್ಭದಲ್ಲಿ ಬಳಗದ ಸದಸ್ಯರು ಫ್ರಾನ್ಸ್ ಮತ್ತು ಕರ್ನಾಟಕದ ಬಲವರ್ಧನೆಗೆ ಅನೇಕ ಚಿಂತನೆಗಳನ್ನು ಹಂಚಿಕೊಂಡರು. ಜತೆಗೆ ಫ್ರಾನ್ಸ್ ನಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಸಾಂಸ್ಕೃತಿಕ ವಿನಿಮಯ, ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಅವಕಾಶ ಇತ್ಯಾದಿಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆಸ್ಟಾರ್ಟ್‌ಅಪ್‌ಗಳಿಗೆ ಸುವರ್ಣಾವಕಾಶ: 'ಸರ್ಕಾರ ಮೊದಲು' ಯೋಜನೆಗೆ ಸಚಿವ ಸಂಪುಟ ಅಸ್ತು, ಪ್ರತಿ ಸಂಸ್ಥೆಗೆ ₹25 ಲಕ್ಷದವರೆಗೆ ಸಹಾಯಧನಕಲಬುರಗಿಯಲ್ಲಿ ‘LEAP ಬೆಳವಣಿಗೆ ಪ್ರಯೋಗಾಲಯ’ ಸ್ಥಾಪನೆ: ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅಸ್ತುಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲಗಳ ಸಂಚಾರBREAKING: ಕೆಪಿಎಸ್‌ಸಿ ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ, ಬಸವರಾಜ್ ಕನ್ನಾಳೆಗೆ 14 ದಿನ ನ್ಯಾಯಾಂಗ ಬಂಧನ100 ದಿನ, ನೂರಾರು ಅಭಿವೃದ್ಧಿ: ಇದು 'ಗ್ರಾಮೀಣಾಭಿವೃದ್ಧಿ'ಯಲ್ಲಿ 'ಸಚಿವ ಈಶ್ವರ ಖಂಡ್ರೆ' ಸಾಧನೆಯ ರಿಪೋರ್ಟ್ ಕಾರ್ಡ್!ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಲೇಖಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿBIG NEWS: ಸೆ.21 ರಿಂದ ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳ ಚರ್ಚೆಕ್ಲೈಮ್ಯಾಕ್ಸ್‌ ಘಟ್ಟ ತಲುಪಿದ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜೆಪಿ ನಾಯಕರುರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ನಿಯಮ ಸರಳೀಕರಣ: ಮಧ್ಯಂತರ ವರದಿಯಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಮಾಹಿತಿ