LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ತಿರುನೆಲ್ವೇಲಿ ನಡುವೆ ವಿಶೇಷ ರೈಲುಗಳ ಸಂಚಾರ

ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ನೈಋತ್ಯ ರೈಲ್ವೆಯು ಕೆಎಸ್‌ಆರ್ ಬೆಂಗಳೂರು, ತಿರುನೆಲ್ವೇಲಿ ಜಂಕ್ಷನ್ ಹಾಗೂ ಬೆಂಗಳೂರು ಕ್ಯಾಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್  ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಸೆಪ್ಟೆಂಬರ್ 11 ಮತ್ತು 12, 2026ರಂದು ತಲಾ ಒಂದು ಟ್ರಿಪ್‌ನಂತೆ ಎರಡೂ ದಿಕ್ಕುಗಳಲ್ಲಿ ಸಂಚರಿಸಲಿವೆ.

ರೈಲುಗಳ ವೇಳಾಪಟ್ಟಿ ಮತ್ತು ಸಮಯ

1). ರೈಲು ಸಂಖ್ಯೆ 06527 ಕೆಎಸ್‌ಆರ್ ಬೆಂಗಳೂರು–ತಿರುನೆಲ್ವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶುಕ್ರವಾರ, 11.09.2026ರಂದು ಒಂದು ಟ್ರಿಪ್ ಸಂಚರಿಸಲಿದ್ದು, ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 11:35 ಗಂಟೆಗೆ ಹೊರಟು, ಶನಿವಾರ ತಿರುನೆಲ್ವೇಲಿ ಜಂಕ್ಷನ್‌ಗೆ ಮಧ್ಯಾಹ್ನ 01:15 ಗಂಟೆಗೆ ತಲುಪಲಿದೆ.

2). ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06528 ತಿರುನೆಲ್ವೇಲಿ–ಬೆಂಗಳೂರು ಕ್ಯಾಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರ, 12.09.2026ರಂದು ಒಂದು ಟ್ರಿಪ್ ಸಂಚರಿಸಲಿದ್ದು, ತಿರುನೆಲ್ವೇಲಿ ಜಂಕ್ಷನ್‌ನಿಂದ ಮಧ್ಯಾಹ್ನ ೦3:45 ಗಂಟೆಗೆ ಹೊರಟು, ಭಾನುವಾರ ಬೆಂಗಳೂರು ಕ್ಯಾಂಟ್ ನಿಲ್ದಾಣಕ್ಕೆ ಮುಂಜಾನೆ 03:30 ಗಂಟೆಗೆ ತಲುಪಲಿದೆ.

ಮಾರ್ಗಮಧ್ಯೆ ನಿಲುಗಡೆಗಳು: ಬೆಂಗಳೂರು ಕ್ಯಾಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುದುನಗರ, ಸತ್ತೂರು ಮತ್ತು ಕೋವಿಲ್ಪಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರೈಲುಗಳ ಸಂಯೋಜನೆ

ಈ ವಿಶೇಷ ರೈಲುಗಳು ಒಟ್ಟು 20 ಕೋಚ್‌ಗಳನ್ನು ಹೊಂದಿದ್ದು, 01 ಎಸಿ 2-ಟೈರ್ ಕೋಚ್, 03 ಎಸಿ 3-ಟೈರ್ ಕೋಚ್‌, 10 ಸ್ಲೀಪರ್ ಕ್ಲಾಸ್ ಕೋಚ್‌, 04 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ ಹಾಗೂ 02 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರುತ್ತವೆ.

ಪ್ರಯಾಣಿಕರು ರೈಲಿನ ವೇಳಾಪಟ್ಟಿ ಹಾಗೂ ಆಸನಗಳ ಲಭ್ಯತೆಯನ್ನು NTES/IRCTC ಅಪ್ಲಿಕೇಶನ್ ಮೂಲಕ ಪರಿಶೀಲಿಸುವಂತೆ ಕೋರಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದ ಬಸರಾಳು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ: ನೀರಿಲ್ಲದೆ ಬರದ ಭೀತಿ, ಕಣ್ಣೀರಿಡುತ್ತಿರುವ ಗ್ರಾಮಸ್ಥರುಮಂಡ್ಯ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ನೇಮಕಮಂಡ್ಯದ ಕೆ.ಆರ್ ಪೇಟೆಯಲ್ಲಿ ಮೊರಾರ್ಜಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲುಮದ್ದೂರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ರೈತ ಕುಟುಂಬದಿಂದ ಉಪವಾಸ ಸತ್ಯಾಗ್ರಹಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರವ್ಯಾಪಿ ಹದಿಹರೆಯದ ಬಾಲಕಿಯರಿಗೆ ಎಚ್‌ಐವಿ ಲಸಿಕೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಹೆದ್ದಾರಿ ಇಷ್ಟೊಂದು ತಡವಾಗಿ ನಿರ್ಮಾಣವಾಗಿರುವುದಕ್ಕೆ ನನಗೆ ನಾಚಿಕೆಯಾಗ್ತಿದೆ, ಇನ್ನುಮುಂದೆ ನಾನು ಉದ್ಘಾಟನೆ ಮಾಡಲ್ಲ: ನಿತಿನ್ ಗಡ್ಕರಿಎಎಪಿ ರಾಷ್ಟ್ರೀಯ ಸಂಚಾಲಕರಾಗಿ ಮುಂದುವರೆದ ಕೇಜ್ರಿವಾಲ್‌ಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ: ಸಿಎಂ ಡಿ.ಕೆ.ಶಿವಕುಮಾರ್ಕರ್ನಾಟಕದಲ್ಲಿ ಉರ್ದು ಮಾಧ್ಯಮ ಶಿಕ್ಷಣದ ಸ್ಥಿತಿಗತಿ: ‘ಅಧ್ಯಯನ ವರದಿ-2025’ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ತಿರುನೆಲ್ವೇಲಿ ನಡುವೆ ವಿಶೇಷ ರೈಲುಗಳ ಸಂಚಾರ