ವಿಧವೆಯರು ಮನೆಯಲ್ಲಿ ದೀಪ ಹಚ್ಚಬಹುದೇ" ಮನೆಯ ಹೊಸ್ತಿಲಿಗೆ ಪೂಜೆ ಮಾಡಬಹುದೇ... ತುಳಸಿಗೆ ದೀಪ ಹಚ್ಚಬಹುದೇ??
ಈ ಪ್ರಕಾರವಾಗಿ ಹಲವಾರು ಪ್ರಶ್ನೆಗಳು ಯಾವಾಗಲೂ ನಮ್ಮ ಮುಂದೆ ಸುಳಿಯುತ್ತವೆ. ಆದರೆ ಇದಕ್ಕೆ ಉತ್ತರ "ಇದಮಿತ್ತಂ" ಹೀಗೆಯೇ ಎಂದು ಯಾರು ನಿರ್ಧರಿಸಲು ಅಶಕ್ತರಾಗಿದ್ದಾರೆ. ಒಬ್ಬೊಬ್ಬರು ಒಂದು ರೀತಿಯಲ್ಲಿ ಇದನ್ನು ವಿಮರ್ಶೆ ಮಾಡಿ ತಮಗೆ ತಿಳಿದ ಮಟ್ಟಿಗೆ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಧರ್ಮವು ಸೂಕ್ಷ್ಮವಾದ ವಿಚಾರ.
ಕೆಲವೊಮ್ಮೆ ಉಪನಿಷತ್ತುಗಳು ಪುರಾಣಗಳು ನಮಗೆ ಇದರ ಬಗ್ಗೆ ಉತ್ತರಗಳನ್ನು ನೀಡಿವೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಅವರವರ ಭಾವನೆಗಳಿಗೆ ಬಿಟ್ಟದ್ದು..
ಆದರೂ ಇದಕ್ಕೆ ಈ ಪಂಚಮವೇದ ವೆಂಬ ಪ್ರಸಿದ್ಧಿಪಡೆದ ಮಹಾಭಾರತದ ಕತೆಯ ಮೂಲಕ ಉತ್ತರ ಹೇಳಲು ಬಯಸುತ್ತೇನೆ...
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಮಹಾಭಾರತದ ಯುದ್ಧ ಮುಗಿದು ಈ ಸಂಗ್ರಾಮದಲ್ಲಿ ಅಳಿದುಹೋದವರ ಚಿತೆಗಳನ್ನು ಆಗಷ್ಟೇ ಅಗ್ನಿಯು ಬೂದಿ ಮಾಡಿಯಾಗಿತ್ತು. ಯುದ್ಧದಲ್ಲಿ ಮಡಿದವರಿಗೆ ತೃಪ್ತಿ ಕೊಡಲೆಂದು ಉಳಿದವರು ಗಂಗಾ ಪ್ರವಾಹದಲ್ಲಿ ನಿಂತು ತರ್ಪಣವನ್ನು ಬಿಡುವ ಒಂದು ಸುಸಂದರ್ಭ....
ಪಾಂಡವರು ತಮ್ಮ ಬಂಧು ದಾಯಾದಿಗಳಿಗೆ ತರ್ಪಣವನ್ನು ಬಿಡಲು ನೀರಿನಲ್ಲಿ ನಿಂತಿದ್ದಾರೆ.
ದಡದಲ್ಲಿ ನಿಂತ ತಾಯಿ ಕುಂತಿ ಮಾತೆ ಒಬ್ಬೊಬ್ಬರ ಹೆಸರನ್ನೇ ನೆನಪಿಸುತ್ತಿದ್ದಾಳೆ. ಧರ್ಮರಾಯನಿಗೆ ಈ ವಿಷಯ ತಿಳಿಯದ್ದೇನೂ ಅಲ್ಲ.
ಆದರೆ ಹಿಂದಿನ ದಿನ ನಡುರಾತ್ರಿಯಲ್ಲಿ ಯಾರೋ ಬಂದು ಅವಳ ಕಿವಿಯಲ್ಲಿ ಉಸುರಿದ ಮಾತು ಅವಳನ್ನು ಬಹಳವಾಗಿ ಕಾಡುತ್ತಿತ್ತು.
ಅಮ್ಮಾ.... ನನ್ನ ನೆನಪಿಲ್ಲವೇ...!
ನನಗಿಲ್ಲವೇ ತರ್ಪಣದಲ್ಲೊಂದು ಪಾಲು.ನನಗಿಲ್ಲವೇ ಸಂಬಂಧದಲ್ಲಿ ಒಂದು ಪಾಲು.
ಮಾತೃ ಹೃದಯವಲ್ಲವೇ ಕ್ಷಣಕಾಲ ನೆನಪಾಗಿ ಒಮ್ಮೆಗೆ
ಕುಂತಿಗೆ ಕಣ್ಣೀರು ಕಣ್ಣೊಳಗೆ ನಿಂತಿತ್ತು.
ತರ್ಪಣ ಇನ್ನೇನು ಮುಗಿಯುವ ಕಾಲದಲ್ಲಿ ಕುಂತಿ ಇನ್ನೊಂದು ಹೆಸರು ಬಿಟ್ಟಿರಲ್ಲವೇ ಎಂದು ಮಕ್ಕಳಲ್ಲಿ ಕೇಳುತ್ತಾಳೆ.
ಭೀಮಾರ್ಜುನರು ಧರ್ಮರಾಯ ನಲ್ಲಿ ಮತ್ತೆ ಎಲ್ಲ ಹೆಸರುಗಳನ್ನು ನೆನಪಿಸುತ್ತಾ ಬಂದರು. ಧರ್ಮರಾಯ ತಾಯಿಯಲ್ಲಿ ಇಂತೆಂದ... ಎಲ್ಲಾ ಹೆಸರುಗಳು ನೆನಪಿಸಿಕೊಂಡು ತರ್ಪಣವನ್ನು ನೀಡಿದ್ದೇವೆ. ಇನ್ನು ಯಾರನ್ನಾದರೂ ಮರೆತಿದ್ದರೆ ನೀನು ಹೇಳಮ್ಮ....
ಕ್ಷಣಕಾಲ ಕುಂತಿಯ ಕಂಠದಲ್ಲಿ ಸೆರೆಯಾಗಿದ್ದ ಹೆಸರು ಈಚೆ ಬರಲು ಮನಸ್ಸು ವಿಪರೀತ ಅಳುತ್ತಿತ್ತು...
‘*ಜನಕಂಜಿ ನಡೆಯದೆ ಮನಕಂಜಿ ನಡೆಯಬೇಕೆಂದು*...
ಆ ಕ್ಷಣದಲ್ಲಿ ಅವಳ ಸುಪ್ತ ಪ್ರಜ್ಞೆ ಜಾಗೃತವಾಯಿತು.
ಭೋರ್ಗರೆಯುವ ಕಣ್ಣೀರಿನ ಮಧ್ಯದಲ್ಲಿ ಕಂಠದಲ್ಲಿ ಸ್ವರವು ನಿಸ್ತೇಜವಾಗಿದ್ದರೂ ಪೂರ್ಣ ಪ್ರಯತ್ನ ಮಾಡಿ ಆ ಹೆಸರು ಬಂಧನವನ್ನು ಭೇದಿಸಿ ಪಾಂಡವರ ಕಿವಿಗಳಲ್ಲಿ ಒಮ್ಮೆಲೆ ಬಂದು ಅವರನ್ನು ದಿಗ್ಭ್ರಮೆಗೊಳಿಸಿತು. ಧರ್ಮರಾಯನ ಸಹಿತವಾಗಿ ಮತ್ತೆ ನಾಲ್ವರು ಕೂಡ ತಬ್ಬಿಬ್ಬಾದರು.
ಕರ್ಣ....... ಕರ್ಣಕಠೋರವಾಗಿ ಇರುವ ಈ ಹೆಸರು ನಮ್ಮ ಮಾತೆಯ ಬಾಯಲ್ಲಿ ಹೇಗೆ? ಏಕೆ ? ಬಂತು...!
ಕ್ಷಣಕಾಲ ಅವರೆಲ್ಲರ ಮುಖ ಗಂಗೆ ಹರಿಯುವ ನೀರಿನ ದಿಕ್ಕಿನತ್ತ ಸದ್ದಿಲ್ಲದೆ ಮುಜುಗರದಿಂದ ಪ್ರಶ್ನಾತೀತ ವಾಯಿತು. ಆ ಕ್ಷಣ... ಒಮ್ಮೆಲೇ
ಅದೋ ಬಂದ.... ಗೋವಿಂದ ಬಂದ.... ಕರೆಯದಿದ್ದರೂ ಮಾನ ರಕ್ಷಣೆಗೆ
ಕುಂತಿಗೆ ಚ್ಯುತಿ ಬರಬಾರದೆಂದು ಒಡನೆಯೇ ಓಡಿಬಂದ "ಗರುಡಧ್ವಜ".
"ಕರೆಯಲೇ ಬೇಕೆಂಬ ನಿಯಮ ಅವಗಿಲ್ಲ
ಮನದೊಳಗೆ ಮನೆ ಮಾಡಿ ಇರುವವನಲ್ಲ"
ಸೋದರತ್ತೆ ಎಂದಲ್ಲ...
*ತನ್ನ ಭಕ್ತರ ಕಣ್ಣೀರು ಧರಣಿಗೆ ತಾಕುವುದರೊಳಗೆ ಬಂದ* .... ಧರಣಿಪತಿ
ಧರ್ಮಜನನ್ನ ನೋಡಿ ಇಂತೆಂದ.....
ಯಾರ ಧ್ವನಿ ಯನ್ನು ಸತ್ಯ ಮಾಡಲು ನೀವು ಐವರು ದ್ರೌಪದಿಯನ್ನು ಪತ್ನಿಯಾಗಿ ಸ್ವೀಕರಿಸಿದಿರೋ....
ಯಾವ ಮಾತೆಯ ಆಶೀರ್ವಾದವನ್ನು ಶಿರಸಿ ನಲ್ಲಿ ಧಾರಣೆ ಮಾಡಿ ಇಂದು ಈ ಮಹಾಭಾರತ ಸಂಗ್ರಾಮವನ್ನು ಜಯಿಸಿದಿರೋ...
ಅಂತಹ ಪಾವನೆಯಾದ ಕುಂತಿಯ ಬಾಯಿಂದ ಬಂದ ಈ ಹೆಸರು ಕೇಳಿ ನಿಮ್ಮ ಮುಖಗಳು ಮುಜುಗರಗೊಂಡಿವೆಯೋ...
ಅಂತಹ ನಿಮ್ಮ ಭಾವನೆಗೆ ಧಿಕ್ಕಾರವಿರಲಿ......
ಎಂದವನೇ ತಡಮಾಡದೆ
ಅನಂತ ಕಲ್ಯಾಣ ಗುಣ ಪರಿಪೂರ್ಣ... ಪರಮ ಪಾವನ ಪರಮಾತ್ಮ ಒಡನೆಯೇ ಕುಂತಿಯ ಸೀರೆಯ ಸೆರಗಿನ ತುದಿಯನ್ನು ತನ್ನ ಕೈಯಲ್ಲಿ ಹಿಡಿದು ಲೋಕಕ್ಕೆ ತಿಳಿಯುವಂತೆ ರಮಾಪತಿ ಇಂತೆಂದ..... ಇದೋ ಪರಮಪಾವನೆ ಯಾದ ಲೋಕಕಲ್ಯಾಣಕ್ಕಾಗಿ ತನ್ನನ್ನೇ ಸಮರ್ಪಣೆ ಮಾಡಿದ ಭಗವದ್ಭಕ್ತೆ ಈ ಕುಂತಿಯ ಸೀರೆಯ ಸೆರಗಿನ ತುದಿಯನ್ನು ಕೂಡ ಕೈಯಿಂದ ಮುಟ್ಟಬೇಕಾದರೆ
ಕೋಟಿ ಕೋಟಿ ವರ್ಷಗಳ ತಪಸ್ಸು ಸಿದ್ಧಿಸಿದ ಋಷಿ ಮುನಿಗಳಿಗೂ ಕೂಡ ಅಸಾಧ್ಯ. ನಾನು ಸತ್ಯದಲ್ಲಿ ನೆಲೆಗೊಂಡಿರುವುದರಿಂದ ನನಗೆ ಆ ಯೋಗ್ಯತೆ ಪ್ರಾಪ್ತಿ ಇದೆ.
ಅಂತಹ ಪವಿತ್ರವಾದ ಭಕ್ತಿಯಿಂದ ಲೋಕದಲ್ಲಿ
ಕರ್ಮಯೋಗದಿಂದ ಮನಸ್ಸಿನಲ್ಲಿಯೇ ನಿರಂತರ ನನ್ನನ್ನು ಆರಾಧನೆ ಮಾಡಿದ ಈ ಕುಂತಿಯ ಯೋಗ್ಯತೆ
ಅನುಮಾನಿಸಿದ ಪಾಂಡವರೇ ನಿಮ್ಮ ಕೆಲವು ಪುಣ್ಯಗಳು ಇದರಿಂದ ಕ್ಷೀಣವಾಯಿತು.
ಲೋಕದ ಲಜ್ಜೆಗೆ ಹೆದರಿದ ಕನ್ಯೆಯಾದ ಕುಂತಿಗೆ ಸಾಕ್ಷಾತ್ ಸೂರ್ಯದೇವ ರಿಂದ ದುರ್ವಾಸರ ಮಂತ್ರದಿಂದ ಪ್ರಸಾದಿತ ವಾದ ಕರ್ಣನನ್ನು ಗಂಗೆಯಲ್ಲಿ ತೇಲಿಬಿಡುವಾಗ ....... ಪಾಂಡು ಚಕ್ರವರ್ತಿಯ ಮರಣದ ನಂತರ ಚಿಕ್ಕವರಾದ ನಿಮ್ಮನ್ನು ಸಾಕಿ ಸಲಹುವಲ್ಲಿ ಮಾಡಿದ ಪ್ರತಿಯೊಂದು ತ್ಯಾಗದಲ್ಲಿ..... ಪಂಚಪಾಂಡವರನ್ನು ಲೋಕದಲ್ಲಿ ಧರ್ಮಾತ್ಮರು ಎನಿಸಿಕೊಳ್ಳುವಲ್ಲಿ...... ಅರಣ್ಯ ವಾಸದಲ್ಲಿ ನೀವು ಇರುವಾಗ ವಿದುರನ ಮನೆಯಲ್ಲಿ ಏಕಾಂಗಿಯಾಗಿ ಕಳೆದ ಕ್ಷಣ.... ಹೀಗೆ ಅವಳ ಜೀವನದ ಪ್ರತಿಯೊಂದು ಕಷ್ಟದ ಕ್ಷಣಗಳು ಕೂಡ ನಿತ್ಯ ನಿರಂತರ ನನ್ನ ನಾಮಸಂಕೀರ್ತನೆಯನ್ನು ಮನದೊಳಗೆ ಮಾಡುತ್ತಾ ತನ್ನ ಕರ್ಮದಿಂದ ತನ್ನ ಬದುಕನ್ನೇ ನನಗೆ ಕೃಷ್ಣಾರ್ಪಣ ಮಾಡಿದ ಈ ತಾಯಿಯ ಯೋಗ್ಯತೆ ಮೂರು ಲೋಕದೊಳಗೆ ಯಾರು ಬಲ್ಲರು.....
ಈ ಒಂದು ಮಾತು ಸಾಕಿತ್ತು.
ಕ್ಷಣಕಾಲ ಕುಂತಿಯ ಕಣ್ಣೀರು ಪರಮಾತ್ಮನ ಪಾದಕ್ಕೆ ಪಾದ್ಯವಾಯಿತು. ಸಾರ್ಥಕವಾಯಿತು ಕುಂತಿಯ ಜೀವನ.. ಹಗಲಿರುಳು ಕೃಷ್ಣನನ್ನೇ ನೆನೆದದ್ದು ಈ ದಿನಕ್ಕೆ ಸಾರ್ಥಕವಾಯಿತು.
ಬದುಕು ಪರಿಪೂರ್ಣ ವಾಯಿತು.
ಹೌದು *ಒಮ್ಮೊಮ್ಮೆ ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಫಲ ಪರಮಾತ್ಮ ಯಾವ ರೀತಿಯಲ್ಲಿ ನಮಗೆ ಕೊಡುತ್ತಾನೆ ಎನ್ನುವುದು ತಿಳಿಯುವುದಿಲ್ಲ*.
ಕುಂತಿಗೆ ದೇವರು ಕೊಟ್ಟ ಒಂದೇ ಒಂದು ಮಾತಿನ ಪಾರಿತೋಷಕ ಅವಳ ಮಾನಸ ಪೂಜೆಯ ಪರಿಪೂರ್ಣತೆಯನ್ನು ತಂದು ಕೊಟ್ಟದ್ದರಲ್ಲಿ ಸಂದೇಹವಿಲ್ಲ.
ಆಡಂಬರದ -ತೋರಿಕೆಯ ಪೂಜೆ ಮಾತ್ರ ಪೂಜೆಯಲ್ಲ.
ಮಂತ್ರ ಅಭಿಷೇಕ ಮಂಗಳಾರತಿಗಳು ಮಾತ್ರ ಪೂಜೆಯಲ್ಲ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಕೃಷ್ಣಾಯ ವಾಸುದೇವಾಯ
ಹರಯೇ ಪರಮಾತ್ಮನೇ
ಪ್ರಣತ ಕ್ಲೇಶನಾಶಾಯ
ಗೋವಿಂದಾಯ ನಮೋ ನಮಃ
ನಾನು ವಿಧವೆ; ನಾನು ಮಹಿಳೆ ;ನನಗಾವ ಪೂಜೆ ;ನನಗೆ ಎಲ್ಲಿ ದೇವರು ನನಗೆ ಎಲ್ಲಿಯ ಸೌಭಾಗ್ಯ.... ಈ ರೀತಿಯ
ಮನಸ್ಥಿತಿಯನ್ನು ಬಿಟ್ಟುಬಿಡಿ. ಭಗವಂತನನ್ನು ಒಲಿಸಲು ಶ್ರದ್ಧೆ ; ನಿಷ್ಕಲ್ಮಶವಾದ ಭಕ್ತಿ ಮತ್ತು ಜ್ಞಾನವೇ
ಪ್ರಧಾನವಾದದ್ದು.
ಕಲ್ಪದ ಅಂತ್ಯಕಾಲದ ತನಕ ತಪಸ್ಸು ಮಾಡಿದ ಭಾಗವತೋತ್ತಮರಿಗೂ ದರ್ಶನಕ್ಕೂ ದುರ್ಲಭವಾದ - ಬಂಧನಕ್ಕೂ ಮೋಕ್ಷಕ್ಕೂ ಕಾರಣನಾದ ಪುರುಷೋತ್ತಮನ ಮುಖದಲ್ಲಿ ವಿಧವೆಯೊಬ್ಬಳ ಮಾನಸಿಕ ಅನುಷ್ಠಾನದ ಶಕ್ತಿಗೆ ಸಿಕ್ಕ ಪಾರಿತೋಷಕ ಕ್ಕೆ
ಎಣೆಯುಂಟೆ.
ಪ್ರತಿಯೊಂದು ದೇವರ ವಿಷಯದಲ್ಲಿ ಸಂಬಂಧಪಟ್ಟ ಆಚರಣೆಗಳು ಭಕ್ತಿ ಜ್ಞಾನವನ್ನು ಹೊಂದುವುದಕ್ಕೆ ಮತ್ತು ದೇವರ ಅನುಗ್ರಹ ಪಡೆಯುವುದಕ್ಕೆ ಹೊರತು ಭಯಪಟ್ಟು ಕೊಳ್ಳುವುದಕ್ಕೆ ಅಲ್ಲ
ಕೆಲವೊಮ್ಮೆ ನಮ್ಮ ಒಳಗಿನಿಂದಲೇ ಮೂಡಬಹುದಾದ ಸಚ್ಚಿಂತನೆಗಳೇ ನಮ್ಮ ಜೀವನದ ಮಾರ್ಗದರ್ಶಕ ಗಳಾಗಬಹುದು
ಪ್ರಕೃತಿಯಲ್ಲಿನ ಪ್ರತಿಯೊಂದು ಜೀವ ಜಡದಲ್ಲಿ ಚೈತನ್ಯದ ರೂಪದಲ್ಲಿ ಒಮ್ಮೊಮ್ಮೆ ನಮಗೆ ಕೆಲವು ಸೂಚನೆಗಳನ್ನು ನೀಡುತ್ತಲೇ ಇರುತ್ತವೆ.ಎಚ್ಚರದಿಂದ ಗಮನಿಸಿದರೆ ಪ್ರತಿಯೊಂದು ಕೂಡ ಪರಮಾತ್ಮನ ಮಾತುಗಳೇ ಆಗಿವೆ. ಗಮನಿಸುವ ಕಣ್ಣುಗಳನ್ನು ಮಾತ್ರ ನಾವು ತೆರೆಯಬೇಕಾಗಿದೆ.
ನ ಜಾನೇ ಕರ್ಮ ಯತ್ಕಿಂಚಿತ್ ನಾಪಿ ಲೌಕಿಕ ವೈದಿಕೇ
ನ ನಿಷೇಧ ವಿಧೀ ವಿಷ್ಣೋಃ ತವ ದಾಸೋಸ್ಮಿ ಕೇವಲಮ್ ॥
*ದೇವರಲ್ಲಿ ಪರಿಪೂರ್ಣ ಭಕ್ತಿ ಪ್ರೀತಿ ಇರುವವರಿಗೆ ವಿಧಿ ನಿಷೇಧ ಗಳು ಎಲ್ಲಿ*...??!
ಅವರ ಎಲ್ಲ ಲೌಕಿಕ ಮತ್ತು ಆಧ್ಯಾತ್ಮ ಕೆಲಸ ಕಾರ್ಯಗಳು ದೇವರ ಭಕ್ತಿಗಾಗಿ. ಅವರ ಜೀವನವೇ ಭಗವಂತನಿಗಾಗಿ...
ಮನೆಯಲ್ಲಿ ನಿತ್ಯನೈಮಿತ್ತಿಕ ದೈವಿಕ ಆರಾಧನೆಗೆ ಸಂಬಂಧಪಟ್ಟ ಜಿಜ್ಞಾಸೆ ಗಳಿದ್ದರೆ ಪ್ರಶ್ನೋತ್ತರದ ಮೂಲಕ ಪರಿಹಾರ ಕಂಡುಕೊಳ್ಳೋಣ.