ದಕ್ಷಿಣ ಕಾಶಿ ಎಂದೇ ಖ್ಯಾತವಾದ ಗೋಕರ್ಣದಲ್ಲಿ ತ್ರಿಶೂಲಧಾರಿ ಶಿವನ ದರ್ಶನಕ್ಕೂ ಮುನ್ನ ಅಗ್ರಪೂಜೆ ಸ್ವೀಕರಿಸುವ ಪರಮ ದೈವವೇ ಈ ನಮ್ಮ ಮಹಾಗಣಪತಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ರಾವಣನ ಅಹಂಕಾರವನ್ನು ಮುರಿದು, ಜಗತ್ತಿನ ಕಲ್ಯಾಣಕ್ಕಾಗಿ ಆತ್ಮಿಲಿಂಗವನ್ನು ಭೂಮಿಗೂರಿದ ಆ 'ಬಾಲಗಣಪತಿ'ಯ ಸಾಹಸಗಾಥೆ ಪ್ರತಿಯೊಬ್ಬರಿಗೂ ಭಕ್ತಿಭಾವ ಮೂಡಿಸುತ್ತದೆ. ಗಣೇಶ ಚತುರ್ಥಿಯ ಈ ಪುಣ್ಯ ಘಳಿಗೆಯಲ್ಲಿ ಗೋಕರ್ಣ ಮಹಾಗಣಪತಿಯ ದರ್ಶನ ಪಡೆಯುವುದೇ ಒಂದು ಅನನ್ಯ ಹಾಗೂ ದೈವಿಕ ಅನುಭೂತಿ.
ಗಣೇಶ ಚತುರ್ಥಿ ಎಂದರೆ ಕೇವಲ ಹಬ್ಬವಲ್ಲ, ಅದು ವಿಘ್ನನಾಶಕನನ್ನು ಮನಸಾರೆ ಆರಾಧಿಸುವ ಭಕ್ತಿಯ ಪರ್ವ. ನಾಡಿನೆಲ್ಲೆಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಈ ಶುಭ ದಿನದಂದು, ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಗೋಕರ್ಣದ ಶ್ರೀ ಮಹಾಗಣಪತಿಯ ದರ್ಶನ ಮಾಡುವುದು ಸಕಲ ಪಾಪಗಳನ್ನು ಕಳೆದು ಪುಣ್ಯ ಪ್ರಾಪ್ತಿಯಾಗುವ ದಾರಿಯಾಗಿದೆ.
ಆತ್ಮಲಿಂಗವನ್ನು ರಕ್ಷಿಸಿದ ಅಗ್ರಪೂಜಿತ
ಗೋಕರ್ಣದ ಮಹಾಗಣಪತಿಯ ಕಥೆ ಅತ್ಯಂತ ರೋಚಕ ಹಾಗೂ ದೈವಿಕ ಶಕ್ತಿಯಿಂದ ಕೂಡಿದೆ. ರಾವಣನು ಶಿವನಿಂದ ವರ ಪಡೆದು ಆತ್ಮಲಿಂಗವನ್ನು ಲಂಕೆಗೆ ಕೊಂಡೊಯ್ಯುತ್ತಿದ್ದಾಗ, ದೇವತೆಗಳ ಕೋರಿಕೆಯ ಮೇರೆಗೆ ಗಣಪತಿಯು ಎಳೆಯ ಬ್ರಾಹ್ಮಣ ಬಾಲಕನ ರೂಪದಲ್ಲಿ ಬಂದು ರಾವಣನಿಗೆ ಎದುರಾಗುತ್ತಾನೆ. ಸಂಧ್ಯಾವAದನೆ ಮಾಡಲು ತೆರಳಿದ ರಾವಣನ ಕೈಯಲ್ಲಿದ್ದ ಆತ್ಮಲಿಂಗವನ್ನು ಭೂಮಿಯ ಮೇಲಿಡುವ ಮೂಲಕ ಗಣಪತಿ ಜಗತ್ತನ್ನು ರಕ್ಷಿಸುತ್ತಾನೆ. ಕೋಪಗೊಂಡ ರಾವಣ ಬಾಲಗಣಪತಿಯ ತಲೆಗೆ ಬಲವಾಗಿ ಪ್ರಹಾರ ಮಾಡುತ್ತಾನೆ. ಇಂದಿಗೂ ಗೋಕರ್ಣದ ಮಹಾಗಣಪತಿಯ ವಿಗ್ರಹದ ತಲೆಯ ಮೇಲೆ ಆ ಪೆಟ್ಟಿನ ಕುರುಹಾಗಿ ಒಂದು ಸಣ್ಣ ಕುಳಿಯನ್ನು (ತಗ್ಗು) ಭಕ್ತರು ಭಕ್ತಿ-ಭಾವದಿಂದ ದರ್ಶನ ಮಾಡಬಹುದು.
ದ್ವಿಭುಜ ಗಣಪತಿಯ ದಿವ್ಯ ಮಂಗಳ ರೂಪ
ಸಾಮಾನ್ಯವಾಗಿ ಚತುರ್ಭುಜನಾಗಿ (ನಾಲ್ಕು ಕೈಗಳು) ದರ್ಶನ ನೀಡುವ ಗಣಪತಿ, ಗೋಕರ್ಣದಲ್ಲಿ ಮಾತ್ರ ದ್ವಿಭುಜನಾಗಿ (ಎರಡು ಕೈಗಳು), ನಿಂತ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಗಣೇಶ ಚತುರ್ಥಿಯ ಈ ಪುಣ್ಯದಿನದಂದು ಸರ್ವಾಲಂಕೃತಗೊಡು ಕಂಗೊಳಿಸುವ ಈತನನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆಮೂಲೆಗಳಿಂದ ಭಕ್ತಸಾಗರವೇ ಹರಿದುಬರುತ್ತದೆ. ಕೈಯಲ್ಲಿ ಮೋದಕ ಹಿಡಿದು ಅಭಯ ಮುದ್ರೆಯಲ್ಲಿ ನಿಂತಿರುವ ಈ ದೇವನ ದರ್ಶನ ಮಾತ್ರದಿಂದಲೇ ಭಕ್ತರ ಮನಸ್ಸಿನ ಭಾರವೆಲ್ಲ ಇಳಿದು, ಪರಮ ಶಾಂತಿ ನೆಲೆಸುತ್ತದೆ.
ವಿಘ್ನಗಳು ದೂರವಾಗಿ, ಇಷ್ಟಾರ್ಥ ಸಿದ್ಧಿಸಲಿ
ಮಹಾಬಲೇಶ್ವರನ ದರ್ಶನಕ್ಕೂ ಮುನ್ನ ಈ ಮಹಾಗಣಪತಿಯನ್ನು ಪೂಜಿಸಲೇಬೇಕು ಎಂಬುದು ಇಲ್ಲಿನ ವಾಡಿಕೆ. ಈ ಗಣೇಶ ಚತುರ್ಥಿಯಂದು ಗೋಕರ್ಣದ ಮಹಾಗಣಪತಿಯ ದಿವ್ಯ ಕೃಪಾಕಟಾಕ್ಷ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ನೀವು ಕೈಗೊಳ್ಳುವ ಪ್ರತಿಯೊಂದು ಸತ್ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಲಿ, ಆಯುರಾರೋಗ್ಯ, ಐಶ್ವರ್ಯ ಹಾಗೂ ನೆಮ್ಮದಿ ನಿಮ್ಮದಾಗಲಿ.