LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಕ್ಸ್ ಆಫೀಸ್‌ನಲ್ಲಿ ಮಂಡಿಯೂರಿದ ‘ದೈರಾ’: ಕರೀನಾ-ಪೃಥ್ವಿರಾಜ್ ಬಿಗ್ ಬಜೆಟ್ ಚಿತ್ರಕ್ಕೆ ನೀರಸ ಆರಂಭ

ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ದೈರಾ’ ಕ್ರೈಮ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ಕಳಪೆ ಆರಂಭ ಪಡೆದುಕೊಂಡಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ಮಲಾಯಾಳಂ ಚಿತ್ರರಂಗದ ಪ್ರಸಿದ್ಧ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್‌ನ ದಿಶಾ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಲಾಗಿತ್ತು.

ಚಿತ್ರ ಬಿಡುಗಡೆಗೂ ಮುನ್ನ ಹೊರಬಂದಿದ್ದ ಪ್ರಚಾರದ ಸಾಮಗ್ರಿಗಳು ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸುವಲ್ಲಿ ಸೋತಿದ್ದವು. ಅದರಂತೆ ಮೊದಲ ದಿನದ ಗಳಿಕೆಯಲ್ಲೂ ಚಿತ್ರವು ತೀವ್ರ ನಿರಾಸೆ ಮೂಡಿಸಿದೆ. ಚಿತ್ರೋದ್ಯಮದ ಶ್ರೇಷ್ಟ ವರದಿಗಳ ಪ್ರಕಾರ, ಇಬ್ಬರು ಖ್ಯಾತ ನಟರು ನಟಿಸಿದ್ದರೂ ಸಹ ಈ ಸಿನಿಮಾ ಮೊದಲ ದಿನ ಕೇವಲ ೧ ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಲಷ್ಟೇ ಶಕ್ತವಾಗಿದೆ.

ವಾರಾಂತ್ಯದಲ್ಲೂ ಈ ಸಿನಿಮಾ ಉತ್ತಮ ಗಳಿಕೆ ಕಾಣುವ ಭರವಸೆ ತೀರಾ ಕ್ಷೀಣವಾಗಿದೆ. ‘ತಲ್ವಾರ್’ ಹಾಗೂ ‘ರಾಜಿ’ಯಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಿಟ್ ಸಿನಿಮಾಗಳ ನಂತರ ನಿರ್ದೇಶಕಿ ಮೇಘನಾ ಗುಲ್ಜಾರ್ ಹಾಗೂ ಜಂಗಲ್ ಪಿಕ್ಚರ್ಸ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮೂರನೇ ಚಿತ್ರ ಇದಾಗಿದೆ. ಈ ಚಿತ್ರವನ್ನು ಪೆನ್ ಸ್ಟುಡಿಯೋಸ್ ನೆಟ್‌ವರ್ಕ್ ಮೂಲಕ ವಿತರಿಸಲಾಗಿತ್ತು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಯಾವುದೇ ಹೊಸ ನೋಟಿಸ್ ನೀಡುವಂತಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ‘ಮದ್ಯ’ ನಿಷೇಧದಿಂದ ಒಳಿತಿಗಿಂತ ಹಾನಿಯೇ ಹೆಚ್ಚು; ಸುಪ್ರೀಂಕೋರ್ಟ್‌ ಮಹತ್ವದ ಅಭಿಪ್ರಾಯಅಂತರರಾಜ್ಯ ಮಂಡಳಿ ನಿಯಮಕ್ಕೆ ತಿದ್ದುಪಡಿ: ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ದೆಹಲಿ, ಜಮ್ಮು-ಕಾಶ್ಮೀರ, ಪುದುಚೇರಿ ಎಲ್‌ಜಿಗಳಿಗೆ ಸಭೆಯಲ್ಲಿ ಅವಕಾಶಟಿಎಂಸಿ ಹೆಸರು–ಚಿಹ್ನೆ ವಿವಾದ ಸುಪ್ರೀಂ ಕೋರ್ಟ್‌ಗೆ: ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಮಮತಾ ಬಣ ಅರ್ಜಿಶಾಲೆಯ ಮೆಟ್ಟಿಲಿನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವು; ಆಘಾತಕಾರಿ ವೀಡಿಯೋ ವೈರಲ್ |WATCH VIDEOಸಿಎಂ ಆಸ್ತಿ ಕೊಟ್ಟರೆ ರಾಜ್ಯದ ರೈತರ ಸಾಲ ಮನ್ನಾ ಮಾಡಬಹುದು : ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿಕೆ!'ಕಸ್ತೂರಿ ರಂಗನ್ ವರದಿ' ಮಲೆನಾಡಿಗೆ ಮಾರಕ: ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗುಅಸ್ಸಾಂ ಸಂಗೀತ ದಿಗ್ಗಜ ಜುಬೀನ್ ಗಾರ್ಗ್ ಪ್ರಥಮ ಪುಣ್ಯಸ್ಮರಣೆ: ಮೂರು ದಿನಗಳ ಕಾಲ ಗಾಯಕನ ಸ್ಮರಣೋತ್ಸವಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ ಭರ್ಜರಿ 6 ಸಿಕ್ಸರ್‌ಗಳಿಗೆ 19 ವರ್ಷ: ಕ್ರಿಕೆಟ್ ಇತಿಹಾಸದ ಚಾರಿತ್ರಿಕ ಕ್ಷಣ₹20 ಸಾವಿರದಲ್ಲಿ ಬಿಸಿನೆಸ್ ಶುರು ಮಾಡಿ ಲಕ್ಷಾಂತರ ಹಣ ಗಳಿಸಿ; ಇಲ್ಲಿವೆ 3 ಸೂಪರ್ ಐಡಿಯಾಗಳು!