LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀನಿವಾಸ್ ರಾಜು ನಿರ್ದೇಶನದ ‘ಬೃಂದಾವಿಹಾರಿ’ ಮ್ಯೂಸಿಕ್ ಧಮಾಕಾ: ಇಂದು ಬಿಡುಗಡೆಯಾಗಲಿದೆ ಮತ್ತೊಂದು ಮೆಲೋಡಿ ಸಾಂಗ್!

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರವು ಈಗಾಗಲೇ ತನ್ನ ಮಧುರವಾದ ಹಾಡುಗಳ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿ ಚಿತ್ರದ ಮತ್ತೊಂದು ವೀಡಿಯೋ ಹಾಡು ಇಂದು ಸಂಜೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ.

ಶ್ರೀನಿವಾಸ್ ರಾಜು ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ವಿರಾಟ್ ಸಾಯಿ ಕ್ರಿಯೇಷನ್ಸ್ ಹಾಗೂ ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಅವರು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮ ನಟಿಸಿದ್ದು, ಜತೆಗೆ ಲಕ್ಷ್ಮಿ, ರಾಮ್ ಕುಮಾರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅವಿನಾಶ್, ಕುರಿ ಪ್ರತಾಪ್ ಹಾಗೂ ಮಂಜು ಪಾವಗಡ ಸೇರಿದಂತೆ ದಂಡು ತಾರಾಗಣವೇ ಅಭಿನಯಿಸಿದೆ.

ಚಿತ್ರಕ್ಕೆ ವೆಂಕಟ್ ಆರ್. ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಬೃಂದಾ ಅವರ ನೃತ್ಯ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ. ಬಿಡುಗಡೆಯಾಗುತ್ತಿರುವ ಹೊಸ ಹಾಡು ಗಣೇಶ್ ಅಭಿಮಾನಿಗಳಲ್ಲಿ ಹಾಗೂ ಸಂಗೀತ ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪನೀರ್’ ಹೆಸರಿನಲ್ಲಿ ಹಾಲು ಹೊರತಾದ ಉತ್ಪನ್ನಗಳ ಮಾರಾಟಕ್ಕೆ FSSAI ನಿಷೇಧ ಪ್ರಸ್ತಾವನೆ; ಲೇಬಲಿಂಗ್ ನಲ್ಲಿ ಬದಲಾವಣೆ ಕೋರಿಕೆಸಾಗರ ನಗರ DSS ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ ನೇಮಕ: ಸಂಘಟನೆ ಬಲವರ್ಧನೆಗೆ ಲಕ್ಷ್ಮಣ್ ಸಾಗರ್ ಕರೆBREAKING: ಸೌಜನ್ಯ ಕೊಲೆ ಕೇಸ್: ರಾಜ್ಯ ಸರ್ಕಾರದಿಂದ ಮರುತನಿಖೆಗೆ IPS ಅಧಿಕಾರಿ ಶಶಿಕುಮಾರ್ ನೇತೃತ್ವದಲ್ಲಿ SIT ರಚಿಸಿ ಆದೇಶರಾಜ್ಯದಲ್ಲಿ 'ರೈತರ ಸಾಲ ಮನ್ನಾ' ಬಗ್ಗೆ ಸದನದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ಕುಮಾರ್ ಅರೆಸ್ಟ್ಶಿವಮೊಗ್ಗದಲ್ಲಿ 1 ಲಕ್ಷ ಲಂಚ ಸ್ವೀಕರಿಸುವಾಗಲೇ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ'ಕೈಮಗ್ಗ ಕ್ಷೇತ್ರ'ವೂ ಲಾಭದಾಯಕ: 'ಚರಕ'ದ ಯಶಸ್ಸು ಬಿಚ್ಚಿಟ್ಟ 'ರಂಗಕರ್ಮಿ ಪ್ರಸನ್ನ'ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಗವಿ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆBREAKING: ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆಆರ್ಥಿಕ ಇಲಾಖೆಯ ಸಲಹೆಯನ್ನು ಸರ್ಕಾರ ದಿವಾಳಿಯಾಗಿದೆ ಎಂದು ಅರ್ಥೈಸಲಾಗದು: ಡಾ. ಜಿ. ಪರಮೇಶ್ವರ