LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಕ್ತಸಿಕ್ತ ಹಸ್ತ, ಮಾಸ್ ಶೈಲಿ: ‘ಲವ್ ಅಂಡ್ ವಾರ್’ ಫಸ್ಟ್ ಲುಕ್‌ನಿಂದ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ರಣಬೀರ್!

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಲವ್ ಅಂಡ್ ವಾರ್’ ಸಿನಿಮಾದಿಂದ ನಟ ರಣಬೀರ್ ಕಪೂರ್ ಅವರ ಮೊದಲ ನೋಟದ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪೋಸ್ಟರ್‌ನಲ್ಲಿ ನೀಲಿ ಬಣ್ಣದ ಕಾರಿನಲ್ಲಿ ಕುಳಿತಿರುವ ರಣಬೀರ್ ಕಪೂರ್ ಅವರ ರಕ್ತಸಿಕ್ತ ಹಸ್ತ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಎರಡು ಪ್ರಬಲ ಸೇನಾಧಿಕಾರಿಗಳ ಪಾತ್ರದಲ್ಲಿ ರಣಬೀರ್ ಮತ್ತು ವಿಕಿ ಕಾಣಿಸಿಕೊಳ್ಳಲಿದ್ದು, ಅವರ ನಡುವಿನ ಪ್ರೇಮ ತ್ರಿಕೋನ ಕಥಾಹಂದರವನ್ನು ಭನ್ಸಾಲಿ ತೆರೆದಿಡಲಿದ್ದಾರೆ. 2007ರಲ್ಲಿ ತೆರೆಕಂಡ ‘ಸಾವರಿಯಾ’ ಚಿತ್ರದ ಬಳಿಕ ರಣಬೀರ್ ಮತ್ತು ಭನ್ಸಾಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಸಂಜಯ್ ಲೀಲಾ ಭನ್ಸಾಲಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಲವ್ ಅಂಡ್ ವಾರ್’ ಚಿತ್ರವು 2027ರ ಜನವರಿ 21ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಪ್ರಸ್ತುತ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಯಾದ ಮೊದಲ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದರ ಹೊರತಾಗಿ ನಟ ರಣಬೀರ್ ಕಪೂರ್ ನೊಡನೆಯ ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪನೀರ್’ ಹೆಸರಿನಲ್ಲಿ ಹಾಲು ಹೊರತಾದ ಉತ್ಪನ್ನಗಳ ಮಾರಾಟಕ್ಕೆ FSSAI ನಿಷೇಧ ಪ್ರಸ್ತಾವನೆ; ಲೇಬಲಿಂಗ್ ನಲ್ಲಿ ಬದಲಾವಣೆ ಕೋರಿಕೆಸಾಗರ ನಗರ DSS ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ ನೇಮಕ: ಸಂಘಟನೆ ಬಲವರ್ಧನೆಗೆ ಲಕ್ಷ್ಮಣ್ ಸಾಗರ್ ಕರೆBREAKING: ಸೌಜನ್ಯ ಕೊಲೆ ಕೇಸ್: ರಾಜ್ಯ ಸರ್ಕಾರದಿಂದ ಮರುತನಿಖೆಗೆ IPS ಅಧಿಕಾರಿ ಶಶಿಕುಮಾರ್ ನೇತೃತ್ವದಲ್ಲಿ SIT ರಚಿಸಿ ಆದೇಶರಾಜ್ಯದಲ್ಲಿ 'ರೈತರ ಸಾಲ ಮನ್ನಾ' ಬಗ್ಗೆ ಸದನದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ಕುಮಾರ್ ಅರೆಸ್ಟ್ಶಿವಮೊಗ್ಗದಲ್ಲಿ 1 ಲಕ್ಷ ಲಂಚ ಸ್ವೀಕರಿಸುವಾಗಲೇ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ'ಕೈಮಗ್ಗ ಕ್ಷೇತ್ರ'ವೂ ಲಾಭದಾಯಕ: 'ಚರಕ'ದ ಯಶಸ್ಸು ಬಿಚ್ಚಿಟ್ಟ 'ರಂಗಕರ್ಮಿ ಪ್ರಸನ್ನ'ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಗವಿ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆBREAKING: ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆಆರ್ಥಿಕ ಇಲಾಖೆಯ ಸಲಹೆಯನ್ನು ಸರ್ಕಾರ ದಿವಾಳಿಯಾಗಿದೆ ಎಂದು ಅರ್ಥೈಸಲಾಗದು: ಡಾ. ಜಿ. ಪರಮೇಶ್ವರ