LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡದ ಶಿವಮಣಿ ಖ್ಯಾತಿಯ ಡ್ರಮ್ಮರ್ ದೇವ ವಿಧಿವಶ

ಬೆಂಗಳೂರು: ಕನ್ನಡದ ಖ್ಯಾತ ಡ್ರಮ್ಮರ್ ದೇವ(64) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ಮರ್ ದೇವ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ನಿವಾಸದಲ್ಲಿ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.

ಆರ್.ಆರ್. ನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡ್ರಮ್ಮರ್ ದೇವ ಆರ್ಸಿಬಿ ಪಂದ್ಯದ ವೇಳೆ ಲೈವ್ ಬೀಟ್ ಪ್ರದರ್ಶನ ನೀಡುತ್ತಿದ್ದರು.

‘ಕನ್ನಡದ ಶಿವಮಣಿ’ ಎಂದೇ ಖ್ಯಾತರಾಗಿದ್ದರು

ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಡ್ರಮ್ ವಾದನದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ಡ್ರಮ್ಮರ್ ದೇವ ಅವರು ನಿಧನರಾಗಿದ್ದಾರೆ. ‘ಕನ್ನಡದ ಶಿವಮಣಿ’ ಎಂದೇ ಗುರುತಿಸಿಕೊಂಡಿದ್ದರು.

ದೇವ ಅವರು ಹಲವು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಅದ್ಭುತ ಡ್ರಮ್ ವಾದನದ ಮೂಲಕ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಕನ್ನಡ ಚಿತ್ರರಂಗದ ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅವರು, ದೇಶ-ವಿದೇಶಗಳಲ್ಲಿ ಸಾವಿರಾರು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಘಟಾನುಘಟಿ ಕಲಾವಿದರೊಂದಿಗೆ ಕೆಲಸ ಮಾಡಿದ್ದರು. ಹಂಸಲೇಖ, ಸಾಧು ಕೋಕಿಲ ಸೇರಿದಂತೆ ಹಲವು ಪ್ರಮುಖ ಸಂಗೀತಗಾರರ ತಂಡಗಳೊಂದಿಗೆ ಅವರು ಕೆಲಸ ಮಾಡಿದ್ದರು. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೂ ಕೆಲಸ ಮಾಡಿದ ಅನುಭವ ದೇವ ಅವರಿಗಿತ್ತು. ಸಿನಿಮಾ ಸಂಗೀತದ ಜತೆಗೆ ನೇರ ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿಯೂ ತಮ್ಮ ಡ್ರಮ್ ವಾದನದಿಂದ ಗಮನ ಸೆಳೆದಿದ್ದರು.

ದೇವ ಅವರು ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ‘ಪ್ರೀತಿ ನೀ ಹೀಗೇಕೆ’, ‘ಜೊತೆಯಾಗಿ ಹಿತವಾಗಿ’, ‘5 ಈಡಿಯಟ್ಸ್’ ಸೇರಿದಂತೆ ಹಲವು ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದರು. ‘ಬಾನಿಂದ ಜಾರಿ’, ‘ವಿಧಿ ಆಟವಾಡಿದ’, ‘ಪ್ರೀತಿ ನೀ ಹೀಗೇಕೆ’ ಮುಂತಾದ ಹಾಡುಗಳಲ್ಲಿಯೂ ಅವರ ಸಂಗೀತದ ಕೊಡುಗೆ ದಾಖಲಾಗಿದೆ.

ಕಳೆದ ಜೂನ್‌ನಲ್ಲಿ ದೇವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕುರಿತು ವರದಿಯಾಗಿತ್ತು. ಗ್ಯಾಂಗ್ರೀನ್‌ನಿಂದಾಗಿ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಕ್ರೀಡಾಭಿಮಾನಿಗಳಿಗೂ ದೇವ ಅವರು ಪರಿಚಿತರಾಗಿದ್ದರು. ವಿಶೇಷವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ತಮ್ಮ ಡ್ರಮ್ ವಾದನದ ಮೂಲಕ ತಂಡಗಳಿಗೆ ಹಾಗೂ ಪ್ರೇಕ್ಷಕರಿಗೆ ಉತ್ಸಾಹ ತುಂಬುತ್ತಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳಲ್ಲಿಯೂ ಅವರು ಡ್ರಮ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

ತಮ್ಮ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟಿದ್ದ ದೇವ ಅವರ ನಿಧನದಿಂದ ಕನ್ನಡ ಸಂಗೀತ ಕ್ಷೇತ್ರದಲ್ಲಿ ಒಬ್ಬ ವಿಶಿಷ್ಟ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ. ದೇವ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಮನೆ ಗಜಪಡೆ ಕ್ಯಾಂಪ್‌ನಲ್ಲಿ ಹಬ್ಬದ ಕಳೆ: ಮಾವುತರು, ಕಾವಾಡಿಗಳ ಕುಟುಂಬಗಳಿಗೆ ಭರ್ಜರಿ ಗಿಫ್ಟ್!ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರಕಟ: ಎಚ್‌.ಟಿ.ರತ್ನಾಕರ್‌ಗೆ ಜೀವಮಾನ ಸಾಧನೆ ಗೌರವ; ಇಲ್ಲಿದೆ ಸಂಪೂರ್ಣ ಪಟ್ಟಿಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ KRIDL ಎಇಇ ಹೈದರಾಬಾದ್‌ನಲ್ಲಿ ಪತ್ತೆ: ಸಿಎಂ ಡಿ.ಕೆ.ಶಿವಕುಮಾರ್AI ಮೂಲಕ ಪ್ರವಾಸೋದ್ಯಮವನ್ನು ಹೆಚ್ಚು ಸಮಗ್ರ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲ ಸಚಿವ ಕೆ.ಜೆ. ಜಾರ್ಜ್  ಕರೆಅ.2ರಿಂದ 'ನೈಸ್ ರಸ್ತೆ' ವಿರುದ್ಧ ಪ್ರತಿಭಟನೆ ಆರಂಭ: ಕೇಂದ್ರ HDKಕಿತ್ತು ಬಂದ ರಸ್ತೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಸಚಿವ ಕಪಾಳಮೋಕ್ಷ | VIDEO'ಪತ್ರಕರ್ತರಿಗೆ ರೈಲ್ವೆ ಪಾಸ್' ಮರುಜಾರಿಗೊಳಿಸಲು ಕೇಂದ್ರ ಸಚಿವ ವಿ.ಸೋಮಣ್ಣಗೆ KUWJ ಮನವಿಸಾಲಮನ್ನಾ ಮಾಡಲು ಕಾಂಗ್ರೆಸ್ ಬೆಂಬಲ ಸುಳ್ಳು; ಆ ಪಾಪಿಗಳು ಸಹಕಾರ ನೀಡಲಿಲ್ಲ- HDKCRIME: ಲೈಂಗಿಕ ಕಿರುಕುಳ ನೀಡುತ್ತಿದ್ದವನ ಕತ್ತು ಹಿಸುಕಿ ಕೊಂದ ಮಹಿಳೆ, ಅರೆಸ್ಟ್!ಸಾರ್ವಜನಿಕ ಶೌಚಾಲಯದಲ್ಲಿ ವಿಷಕಾರಿ ರಾಸಾಯನಿಕ ಅನಿಲ ಉಸಿರಾಡಿ ಇಬ್ಬರು ಸಾವು