LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದುವೆಯ ನಂತರ ಮೊದಲ ಬಾರಿಗೆ ಟಿವಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನವದಂಪತಿ: ವಿಜಯ್-ರಶ್ಮಿಕಾ ಮಾತುಗಳಿಗೆ ಫ್ಯಾನ್ಸ್ ಫಿದಾ

ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ಮೊದಲ ಬಾರಿಗೆ ಕರಣ್ ಜೋಹರ್ ಅವರ ಪ್ರಸಿದ್ಧ ‘ಕಾಫಿ ವಿತ್ ಕರಣ್ ಸೀಸನ್ 9 ಟಾಕ್ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಶೋನ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಪ್ರೋಮೋದಲ್ಲಿ ಕರಣ್ ಜೋಹರ್ ಮದುವೆಯ ಪ್ರೊಪೋಸಲ್ ಕುರಿತು ಪ್ರಶ್ನಿಸಿದಾಗ, ತಾವು ವಿಜಯ್‌ಗೆ ಪ್ರಪೋಸ್ ಮಾಡಿರಲಿಲ್ಲ ಎಂದು ರಶ್ಮಿಕಾ ತಲೆ ಅಲ್ಲಾಡಿಸುತ್ತಾರೆ. ಆದರೆ ತಕ್ಷಣ ಮಧ್ಯಪ್ರವೇಶಿಸುವ ವಿಜಯ್ ದೇವರಕೊಂಡ, ರಶ್ಮಿಕಾ ತಮಗೆ ನೂರಕ್ಕೂ ಹೆಚ್ಚು ಬಾರಿ ಮದುವೆಯಾಗೋಣ ಎಂದು ಕೇಳಿದ್ದರು ಎಂದು ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ಹೌದು ನಾನು ಒಂದು ವರ್ಷ ಪೂರ್ತಿ ಅವರನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ.

ಇನ್ನು ರಾಪಿಡ್ ಫೈರ್ ಸುತ್ತಿನಲ್ಲಿ ಆಲ್ಲು ಅರ್ಜುನ್ ಮತ್ತು ರಣಬೀರ್ ಕಪೂರ್ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದಾಗ, ರಶ್ಮಿಕಾ ತಮ್ಮ ‘ಪುಷ್ಪ’ ಚಿತ್ರದ ನಟ ಆಲ್ಲು ಅರ್ಜುನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದೇ ವೇಳೆ ವಿಜಯ್ ಅವರಿಗೆ ರಶ್ಮಿಕಾ ಹೊರತುಪಡಿಸಿ ಬೇರೆ ಯಾರ ಜೊತೆ ಉತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಇದೆ ಎಂದು ಪ್ರಶ್ನಿಸಿದಾಗ, ರಶ್ಮಿಕಾ ತಕ್ಷಣ ‘ಬೇರೆ ಯಾರ ಜೊತೆಯೂ ಇಲ್ಲ’ ಎಂದು ಉತ್ತರಿಸಿದ್ದಾರೆ. ಅದಕ್ಕೆ ವಿಜಯ್, “ಸಂಸಾರದ ಮೊದಲ ನಿಯಮ: ಹೆಂಡತಿ ಹೇಳಿದ್ದಕ್ಕೆ ಹೂಂ ಅನ್ನಬೇಕು” ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಈ ವರ್ಷದ ಫೆಬ್ರವರಿ 26 ರಂದು ಉದಯಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸೈಬರ್ ಕೃತ್ಯ: ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದ ಖಾಸಗಿ ಫೋಟೋ, ವಿಡಿಯೋ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ಇಂಡಿಗೋ ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಾಹುಲ್ ದ್ರಾವಿಡ್; 24 ಲಕ್ಷ ವೀಕ್ಷಣೆ ಕಂಡ ವಿಡಿಯೋ ವೈರಲ್ಕಾಂಗ್ರೆಸ್ ಸರ್ಕಾರ ಅಂತ್ಯದ ಹತ್ತಿರದಲ್ಲಿದೆ: ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿ: ಸಿಎಂ ಡಿ ಕೆ ಶಿವಕುಮಾರ್ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ವಿದುಷಿ ವಸುಧಾ ಶರ್ಮ ಉದ್ಘಾಟನೆ, ಪುಟಾಣಿ ಗಾಯಕಿ ದಿಯಾ ಹೆಗಡೆ ಉಪಸ್ಥಿತಿ!ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ಜೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಗ್ರ್ಯಾಂಡ್ ಓಪನ್!ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರುಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆGOOD NEWS: ರಾಜ್ಯದ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್: 'ಸಕಾಲ'ದಡಿ ಸಂಬಳ, GPF, ರಜೆ ಮಂಜೂರಾತಿಗೆ ಡೆಡ್‌ಲೈನ್ ಫಿಕ್ಸ್