LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನ

ಸಾಗರ: ಅಧ್ಯಾತ್ಮ, ಸಂಸ್ಕೃತಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿರುವ ಸಾಗರದ ಶೃಂಗೇರಿ ಶಂಕರಮಠವು 25 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ನಗರ ಪ್ರವೇಶಿಸುವ ಗಾಂಧಿನಗರ ವೃತ್ತ ಹಾಗೂ ಮಠದ ಸಮೀಪದ ಗಣಪತಿ ಕೆರೆಯ ಮೇಲ್ಭಾಗದ ವೃತ್ತದಲ್ಲಿ ಭವ್ಯ ಮಹಾದ್ವಾರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಕ್ರಿಯೆಗಳು ಈಗಾಗಲೇ ಚಾಲನೆಗೊಂಡಿವೆ ಎಂದು ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ತಿಳಿಸಿದರು.

ನಗರದ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠದ ವತಿಯಿಂದ ಶಾರದಾ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವರಾತ್ರಿಯ ಧಾರ್ಮಿಕ ವೈಭವ ಮತ್ತು ಸಮಾಜಮುಖಿ ಚಿಂತನೆ

ಶ್ರೀ ಶಂಕರಮಠದಲ್ಲಿ ಪ್ರತಿವರ್ಷವೂ ನವರಾತ್ರಿಯ ಹತ್ತು ದಿನಗಳ ಕಾಲ ಲೋಕಕಲ್ಯಾಣಾರ್ಥವಾಗಿ ವಿಶೇಷ ಹೋಮ-ಹವನಗಳು, ವಿದ್ವಾಂಸರಿಂದ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ವೈಭವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಗೌರವಿಸಲಾಗುತ್ತಿದೆ. ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳಿಗೆ ಸಾರ್ವಜನಿಕರು ಹಾಗೂ ಭಕ್ತವೃಂದ ಅತ್ಯಂತ ಉತ್ಸಾಹದಿಂದ ಸಾಥ್ ನೀಡುತ್ತಿದ್ದಾರೆ ಎಂದು ಅಶ್ವಿನಿಕುಮಾರ್ ಶ್ಲಾಘಿಸಿದರು.

ಸಾಧಕರಿಗೆ ‘ಶಾರದಾ ಪ್ರಸಾದಮ್’ ಸನ್ಮಾನ

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ ಪ್ರಮುಖರಾದ ಸಾಗರ ಮಾರಿಕಾಂಬಾ ನಿಕೇತನ/ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಂ. ನಾಗರಾಜ್, ಖ್ಯಾತ ಸಾಮಾಜಿಕ ಕಾರ್ಯಕರ್ತ ಮುಕುಂದ ಬಾಪಟ್ ಹಾಗೂ ಅಡುಗೆ ಕಲಾ ಪ್ರವೀಣೆ ಭಾಗೀರಥಿ ಮುರಾರಿ ದಂಪತಿಗಳಿಗೆ ಮಠದ ವತಿಯಿಂದ 'ಶಾರದಾ ಪ್ರಸಾದಮ್' ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪ್ರಮುಖರಾದ ಪ್ರೊ. ಕೆ.ಆರ್. ಕೃಷ್ಣಯ್ಯ, ಮಾ.ಸ. ನಂಜುಂಡಸ್ವಾಮಿ, ಎಚ್.ಜಿ. ಸುಬ್ರಹ್ಮಣ್ಯ ಭಟ್, ರಾಜಶ್ರೀ ಅಶ್ವಿನಿಕುಮಾರ್, ಪ್ರಭಾವತಿ ಎಸ್.ಕೆ., ಸವಿತಾ ನಾರಾಯಣಮೂರ್ತಿ ಕಾನುಗೋಡು ಸೇರಿದಂತೆ ಮಠದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸೈಬರ್ ಕೃತ್ಯ: ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದ ಖಾಸಗಿ ಫೋಟೋ, ವಿಡಿಯೋ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ಇಂಡಿಗೋ ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಾಹುಲ್ ದ್ರಾವಿಡ್; 24 ಲಕ್ಷ ವೀಕ್ಷಣೆ ಕಂಡ ವಿಡಿಯೋ ವೈರಲ್ಕಾಂಗ್ರೆಸ್ ಸರ್ಕಾರ ಅಂತ್ಯದ ಹತ್ತಿರದಲ್ಲಿದೆ: ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿ: ಸಿಎಂ ಡಿ ಕೆ ಶಿವಕುಮಾರ್ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ವಿದುಷಿ ವಸುಧಾ ಶರ್ಮ ಉದ್ಘಾಟನೆ, ಪುಟಾಣಿ ಗಾಯಕಿ ದಿಯಾ ಹೆಗಡೆ ಉಪಸ್ಥಿತಿ!ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ಜೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಗ್ರ್ಯಾಂಡ್ ಓಪನ್!ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರುಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆGOOD NEWS: ರಾಜ್ಯದ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್: 'ಸಕಾಲ'ದಡಿ ಸಂಬಳ, GPF, ರಜೆ ಮಂಜೂರಾತಿಗೆ ಡೆಡ್‌ಲೈನ್ ಫಿಕ್ಸ್