LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ: "ತಾಯಿ ಶ್ರೀ ಮಾರಿಕಾಂಬೆಯ ಸನ್ನಿಧಿಯಲ್ಲಿ ನಾನು ವೈಯಕ್ತಿಕವಾಗಿಯಾಗಲಿ ಅಥವಾ ನನ್ನ ಕುಟುಂಬದ ಹಿತಕ್ಕಾಗಿಯಾಗಲಿ ಏನನ್ನೂ ಬೇಡಿಕೊಳ್ಳುವುದಿಲ್ಲ. ರಾಜ್ಯ ಹಾಗೂ ನಮ್ಮ ಸಾಗರ-ಹೊಸನಗರ ವ್ಯಾಪ್ತಿಯಲ್ಲಿ ಆವರಿಸಿರುವ ಭೀಕರ ಬರಗಾಲ ದೂರವಾಗಿ, ಉತ್ತಮ ಮಳೆಯಾಗಿ ಜನತೆ ಸುಖ-ಶಾಂತಿಯಿಂದ ಬಾಳುವಂತಾಗಲಿ ಎಂಬುದೇ ನನ್ನ ಪ್ರಾರ್ಥನೆ" ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಂದು ಸಾಗರ ನಗರದ ಐತಿಹಾಸಿಕ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವತಿಯಿಂದ ದುರ್ಗಾಷ್ಟಮಿಯ ಅಂಗವಾಗಿ ಆಯೋಜಿಸಲಾಗಿದ್ದ ದುರ್ಗಾಹೋಮ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

news_1792332350_3_176.webp

ಬರಪೀಡಿತ ತಾಲೂಕು ಘೋಷಣೆ: ರೈತರ ನೆರವಿಗೆ ಸರ್ಕಾರ ಬದ್ಧ

ಕ್ಷೇತ್ರದಲ್ಲಿ ಮಳೆ ಕೊರತೆಯಿಂದಾಗಿ ಅನ್ನದಾತರು ಹಾಗೂ ಸಾರ್ವಜನಿಕರು ತೀವ್ರ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ, ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಸಾಗರ ಮತ್ತು ಹೊಸನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಈಗಾಗಲೇ ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಾಡಿನ ಜನತೆಗೆ ಒಳಿತಾಗಲಿ ಎಂದು ಸಾಗರದ ಶಕ್ತಿ ದೇವತೆ ಮಾರಿಕಾಂಬೆಯ ಪಾದಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿದೆ ಎಂದು ಬೇಳೂರು ವಿವರಿಸಿದರು.

ಕನಸಿನಲ್ಲಿ ಬಂದು ಪ್ರೇರೇಪಿಸಿದ ದೇವಿ: ಅನ್ನದಾನಕ್ಕೆ ₹1 ಲಕ್ಷ ಸಮರ್ಪಣೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಕ್ಷ್ಮೀ ಜ್ಯುವೆಲರ್ಸ್ ಮಾಲೀಕ ಅರುಣ್‌ಕುಮಾರ್, "ಮುಂಜಾನೆ ಸುಮಾರು 4 ರಿಂದ 4:30ರ ಸಮಯದಲ್ಲಿ ಶ್ರೀ ಮಾರಿಕಾಂಬಾ ದೇವಿಯು ನನ್ನ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ, ಭಕ್ತರ ಅನ್ನಸಂತರ್ಪಣಾ ಸೇವೆಗೆ ಕೈಜೋಡಿಸುವಂತೆ ಪ್ರೇರಣೆ ನೀಡಿದಳು. ತಾಯಿಯ ಆದೇಶದಂತೆ ಅನ್ನದಾನ ಸೇವೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಭಕ್ತಿಯಿಂದ ಸಮರ್ಪಿಸಿದ್ದೇನೆ. ದೇಗುಲದ ಆವರಣದಲ್ಲಿ ಧಾರ್ಮಿಕ ಮತ್ತು ಸಮಾಜಮುಖಿ ಚಟುವಟಿಕೆಗಳು ಸದಾ ನಿರಂತರವಾಗಿ ಸಾಗಲಿ" ಎಂದು ಆಶಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಂ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ. ಆನಂದ್, ಪ್ರಮುಖರಾದ ಶ್ರೀನಿವಾಸ ಮೇಸ್ತ್ರಿ, ರಾಮಣ್ಣ, ಡಿಶ್ ಗುರು, ಶ್ರೀನಾಥ್, ಪುರುಷೋತ್ತಮ, ನಾಗೇಂದ್ರ ಕೆ.ಎನ್., ನಾಗೇಂದ್ರ ಕುಮಟಾ, ವಿ. ಶಂಕರ್, ದಿನಕರ, ಎಲ್. ಚಂದ್ರಪ್ಪ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸೈಬರ್ ಕೃತ್ಯ: ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದ ಖಾಸಗಿ ಫೋಟೋ, ವಿಡಿಯೋ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ಇಂಡಿಗೋ ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಾಹುಲ್ ದ್ರಾವಿಡ್; 24 ಲಕ್ಷ ವೀಕ್ಷಣೆ ಕಂಡ ವಿಡಿಯೋ ವೈರಲ್ಕಾಂಗ್ರೆಸ್ ಸರ್ಕಾರ ಅಂತ್ಯದ ಹತ್ತಿರದಲ್ಲಿದೆ: ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿ: ಸಿಎಂ ಡಿ ಕೆ ಶಿವಕುಮಾರ್ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ವಿದುಷಿ ವಸುಧಾ ಶರ್ಮ ಉದ್ಘಾಟನೆ, ಪುಟಾಣಿ ಗಾಯಕಿ ದಿಯಾ ಹೆಗಡೆ ಉಪಸ್ಥಿತಿ!ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ಜೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಗ್ರ್ಯಾಂಡ್ ಓಪನ್!ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರುಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆGOOD NEWS: ರಾಜ್ಯದ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್: 'ಸಕಾಲ'ದಡಿ ಸಂಬಳ, GPF, ರಜೆ ಮಂಜೂರಾತಿಗೆ ಡೆಡ್‌ಲೈನ್ ಫಿಕ್ಸ್