LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆ

ಸಾಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಶ್ರೀ ಚೌಡೇಶ್ವರಿ ಅಮ್ಮನವರ ಸನ್ನಿಧಿಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಸ್ ನಿಲ್ದಾಣದಿಂದ ದೇವಾಲಯಕ್ಕೆ ಬರುವ ವೃದ್ಧರು, ಅಂಗವಿಕಲರು ಹಾಗೂ ಮಹಿಳೆಯರು ಸೇರಿದಂತೆ ಸಾರ್ವಜನಿಕ ಭಕ್ತರು ಬಸ್ ನಿಲ್ದಾಣ ಮತ್ತು ದೇವಸ್ಥಾನದ ನಡುವೆ ಸುಲಭವಾಗಿ ಓಡಾಡಲು ಈ ನೂತನ ಎಲೆಕ್ಟ್ರಿಕ್ ವಾಹನ ನೆರವಾಗಲಿದೆ. ಶನಿವಾರ ಕ್ಷೇತ್ರದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕ್ ಬಸ್ಸನ್ನು ದೇವಸ್ಥಾನದ ಪ್ರಧಾನ ಧರ್ಮದರ್ಶಿಗಳಾದ ಡಾ. ರಾಮಪ್ಪ ಸಿಗಂದೂರು ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

news_1792332350_0_628.webp

ಭಕ್ತರ ಸೇವೆಗೆ ಸದಾ ಮುಂದು: ಧರ್ಮದರ್ಶಿ ಡಾ. ರಾಮಪ್ಪ

ವಾಹನ ಸ್ವೀಕರಿಸಿ ಮಾತನಾಡಿದ ಧರ್ಮದರ್ಶಿ ಡಾ. ರಾಮಪ್ಪ ಅವರು, "ಸಿಗಂದೂರು ಕ್ಷೇತ್ರಕ್ಕೆ ನಿತ್ಯವೂ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ವೃದ್ಧರು ಹಾಗೂ ವಿಶೇಷ ಚೇತನರು ಮುಖ್ಯ ರಸ್ತೆ ಹಾಗೂ ಬಸ್ ನಿಲ್ದಾಣದಿಂದ ದೇವಾಲಯದ ಆವರಣದವರೆಗೆ ನಡೆದುಕೊಂಡು ಬರಲು ಪ್ರಯಾಸಪಡುತ್ತಿದ್ದರು. ಭಕ್ತರ ಈ ಕಷ್ಟವನ್ನು ಅರಿತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಎಲೆಕ್ಟ್ರಿಕ್ ಬಸ್ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ಇದು ಮಾಲಿನ್ಯ ರಹಿತವಾಗಿದ್ದು, ಭಕ್ತರ ಸುಗಮ ದರ್ಶನಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ಸಂಸ್ಥೆಯ ಈ ಸಮಾಜಮುಖಿ ಸೇವಾ ಕಾರ್ಯಕ್ಕೆ ಕ್ಷೇತ್ರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ತಿಳಿಸಿದರು.

ಮಾನವ ಸೇವೆಯೇ ಮಾಧವ ಸೇವೆ: ಸಾಯಿ ಶಿವಪ್ರಸಾದ್

ಸಾಯಿ ಸಂಸ್ಥೆಯ ಮುಖಂಡರಾದ ಸಾಯಿ ಶಿವಪ್ರಸಾದ್ ಅವರು ಮಾತನಾಡಿ, "ಮಾನವ ಸೇವೆಯೇ ಮಾಧವ ಸೇವೆ ಎಂಬ ಧ್ಯೇಯದೊಂದಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥೆಯು ನಿರಂತರವಾಗಿ ಜನಪರ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಲಕ್ಷಾಂತರ ಭಕ್ತರು ಶ್ರದ್ಧಾ-ಭಕ್ತಿಯಿಂದ ಬರುವ ಪವಿತ್ರ ಸಿಗಂದೂರು ಕ್ಷೇತ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಅಶಕ್ತರಿಗೆ ಸಂಚಾರದ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಈ ಎಲೆಕ್ಟ್ರಿಕ್ ಬಸ್ಸನ್ನು ಸಮರ್ಪಿಸಲಾಗಿದೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಆಶಿಸಿದರು.

news_1792332350_1_736.webp

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಭರತ್ ನಾಡಿಗ್, ಸಾಯಿ ಧ್ರುವ, ಸಾಯಿ ಪ್ರಮೋದ್, ಸಿಗಂದೂರು ಚೌಡೇಶ್ವರಿ ಪ್ರತಿಷ್ಠಾನದ ಕಾರ್ಯದರ್ಶಿ ರವಿಕುಮಾರ್, ಪ್ರಕಾಶ್ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸೈಬರ್ ಕೃತ್ಯ: ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದ ಖಾಸಗಿ ಫೋಟೋ, ವಿಡಿಯೋ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ಇಂಡಿಗೋ ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಾಹುಲ್ ದ್ರಾವಿಡ್; 24 ಲಕ್ಷ ವೀಕ್ಷಣೆ ಕಂಡ ವಿಡಿಯೋ ವೈರಲ್ಕಾಂಗ್ರೆಸ್ ಸರ್ಕಾರ ಅಂತ್ಯದ ಹತ್ತಿರದಲ್ಲಿದೆ: ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿ: ಸಿಎಂ ಡಿ ಕೆ ಶಿವಕುಮಾರ್ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ವಿದುಷಿ ವಸುಧಾ ಶರ್ಮ ಉದ್ಘಾಟನೆ, ಪುಟಾಣಿ ಗಾಯಕಿ ದಿಯಾ ಹೆಗಡೆ ಉಪಸ್ಥಿತಿ!ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ಜೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಗ್ರ್ಯಾಂಡ್ ಓಪನ್!ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರುಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆGOOD NEWS: ರಾಜ್ಯದ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್: 'ಸಕಾಲ'ದಡಿ ಸಂಬಳ, GPF, ರಜೆ ಮಂಜೂರಾತಿಗೆ ಡೆಡ್‌ಲೈನ್ ಫಿಕ್ಸ್