LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಢಾಕಾದಲ್ಲಿ ಮುಗಿಯದ ಆಕ್ರೋಶ: ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಫುಟ್‌ಬಾಲ್ ತಂಡದ ಮೇಲೆ ಬಾಟಲಿ ದಾಳಿ

ಬಾಂಗ್ಲಾದೇಶದ ರಾಜಧಾನಿ ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2026ರ ಸ್ಯಾಫ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯ ವೇಳೆ ಕ್ರೀಡಾಂಗಣದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಭಾರತೀಯ ಆಟಗಾರರು ಗೆಲುವಿನ ಖುಷಿಯಲ್ಲಿದ್ದಾಗ ಗ್ಯಾಲರಿಯಲ್ಲಿದ್ದ ಕೆಲವು ಪ್ರೇಕ್ಷಕರು ಮೈದಾನದತ್ತ ಬಾಟಲಿಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಭಾರತ ತಂಡವು 2-1 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿ ದಾಖಲೆಯ 10ನೇ ಬಾರಿಗೆ ಸ್ಯಾಫ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಪಂದ್ಯ ಮುಗಿದ ಬಳಿಕ ಭಾರತದ ಆಟಗಾರರು ಮೈದಾನದಲ್ಲಿ ಸಂಭ್ರಮಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಪಾಕಿಸ್ತಾನದ ಅಲಂಗೀರ್ ಘಾಜಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ದ್ವಿತೀಯಾರ್ಧದ 59ನೇ ನಿಮಿಷದಲ್ಲಿ ವಿಎಆರ್ ಪರಿಶೀಲನೆಯ ನಂತರ ಪಾಕಿಸ್ತಾನದ ಜುನೈದ್ ಶಾ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಎದುರಾಳಿ ತಂಡ ಹತ್ತು ಆಟಗಾರರಿಗೆ ಸೀಮಿತವಾದ ಲಾಭ ಪಡೆದ ಭಾರತ, 60ನೇ ನಿಮಿಷದಲ್ಲಿ ಸುಹೈಲ್ ಅಹ್ಮದ್ ಭಟ್ ಮೂಲಕ ಸಮಬಲ ಸಾಧಿಸಿತು. ಪಂದ್ಯ ಮುಗಿಯಲು ಕೇವಲ ಎರಡು ನಿಮಿಷ ಬಾಕಿ ಇರುವಾಗ ಸಂದೀಪ್ ಮಂಡಿ ಬಾರಿಸಿದ ನಿರ್ಣಾಯಕ ಗೋಲು ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತು.

ಒಂದೆಡೆ ಪ್ರೇಕ್ಷಕರ ವರ್ತನೆ ಟೀಕೆಗೆ ಗುರಿಯಾಗಿದ್ದರೆ, ಮತ್ತೊಂದೆಡೆ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ತೋರಿದ ಕ್ರೀಡಾಸ್ಫೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸೋಲಿನಿಂದ ನಿರಾಸೆಗೊಂಡಿದ್ದ ಪಾಕಿಸ್ತಾನದ ಆಟಗಾರರನ್ನು ಭಾರತದ ಆಟಗಾರರು ಸಂತೈಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ತಂಡದವರು ಭಾರತೀಯ ಆಟಗಾರರಿಗೆ ಗಾರ್ಡ್ ಆಫ್ ಆನರ್ ನೀಡುವ ಮೂಲಕ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಸದ್ಯ ಬಾಟಲಿ ಎಸೆದಿರುವ ಆರೋಪದ ಕುರಿತು ಆಯೋಜಕರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯೂಜಿಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ದಂಡದ ಬಿಸಿ: ಆಟಗಾರರ ಸಂಭಾವನೆಯ ಶೇ.35 ಕಡಿತಕ್ಕೆ ಆದೇಶನ. 30 ರವರೆಗೆ ಸೌದಿ ಅರೇಬಿಯಾಕ್ಕೆ ಎಲ್ಲಾ ವಿಮಾನಯಾನ ರದ್ದುಗೊಳಿಸಿದ ಇಂಡಿಗೋಮರೀನಾ ಬೀಚ್ ಆಗಸದಲ್ಲಿ ಥಲಾ ವೈಭವ: ಅದ್ಧೂರಿ ಡ್ರೋನ್ ಶೋ ಮೂಲಕ ಧೋನಿಗೆ ಭಾವನಾತ್ಮಕ ಗೌರವ ಸಲ್ಲಿಸಿದ ಸಿಎಸ್‌ಕೆಸ್ಯಾಂಡ್‌ಪೇಪರ್ ವಿವಾದಕ್ಕೆ ಹೊಸ ತಿರುವು: ಕ್ರಿಕೆಟ್ ಆಸ್ಟ್ರೇಲಿಯಾದ ಗೌಪ್ಯ ವಿಚಾರಣೆಗೆ ಮಾಜಿ ಆಟಗಾರರ ತೀವ್ರ ವಿರೋಧಢಾಕಾದಲ್ಲಿ ಮುಗಿಯದ ಆಕ್ರೋಶ: ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಫುಟ್‌ಬಾಲ್ ತಂಡದ ಮೇಲೆ ಬಾಟಲಿ ದಾಳಿ”ಅಪ್ಪಾ, ನಾವು ಸಾಯುತ್ತೇವೆ…” ಎಂದು ಅಂಗಲಾಚಿದರೂ ಕರುಣೆ ತೋರದ ತಂದೆ; ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಪಾಪಿ!ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತಾ ? ಆಭರಣ ಪ್ರಿಯರು ತಿಳಿಯಲೇಬೇಕಾದ ಮಾಹಿತಿಆನ್‌ಲೈನ್‌ನಲ್ಲಿ ಸ್ಫೋಟಕ ವಸ್ತುಗಳ ಜಾಹೀರಾತು: ExportersIndiaಗೆ ಬಿತ್ತು ₹20 ಲಕ್ಷ ದಂಡಡೆಲ್ಲಿ ಕ್ಯಾಪಿಟಲ್ಸ್‌ನಿಂದ ರಿಲೀಸ್ ಆದ ಬೆನ್ನಲ್ಲೇ ಸಿಡಿದೆದ್ದ ಅಭಿಷೇಕ್ ಪೊರೆಲ್, ಜಾರ್ಖಂಡ್ ವಿರುದ್ಧ ಬಂಗಾಳಕ್ಕೆ ಭರ್ಜರಿ ಜಯ!400 ಕ್ಯಾರೆಟ್ ಪಚ್ಚೆ ಆಭರಣಗಳಲ್ಲಿ ಮಿಂಚಿದ ಸೋನಮ್ ಕಪೂರ್: 1936ರ ಪೇಂಟಿಂಗ್‌ಗೆ ಫ್ಯಾಷನ್ ರೂಪ!