LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

PF ಖಾತೆದಾರರಿಗೆ ಬ್ಯಾಡ್ ನ್ಯೂಸ್ ; ಜು.1ರಿಂದ ಹೊಸ ನಿಯಮ, ಇನ್ಮುಂದೆ ಸಂಪೂರ್ಣ ಹಣ ವಿತ್‌ಡ್ರಾ ಮಾಡಲು ಆಗಲ್ಲ..!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತೊಂದು ಮಹತ್ವದ ನಿರ್ಧಾರ ಜಾರಿಗೆ ತರಲು ಸಿದ್ಧವಾಗಿದೆ. PF ಖಾತೆಯಲ್ಲಿರುವ ಹಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಮುಂದೆ PF ಖಾತೆಯಲ್ಲಿ ಕನಿಷ್ಠ 25% ಬ್ಯಾಲೆನ್ಸ್ ಕಡ್ಡಾಯವಾಗಿ ಉಳಿಸಬೇಕು. ಬ್ಯಾಂಕ್ ಖಾತೆಗಳಲ್ಲಿ ಇರುವ ಕನಿಷ್ಠ ಬ್ಯಾಲೆನ್ಸ್ ನಿಯಮದ ಮಾದರಿಯಲ್ಲೇ EPFO ಕೂಡ ಈ ನಿಯಮವನ್ನು ಜಾರಿಗೆ ತರುತ್ತಿದೆ.

25% ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ

ಉದ್ಯೋಗಿಗಳು ತಮ್ಮ PF ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವುದರಿಂದ ನಿವೃತ್ತಿಯ ಸಮಯದಲ್ಲಿ ಯಾವುದೇ ಉಳಿತಾಯ ಉಳಿಯುವುದಿಲ್ಲ. ಇದರಿಂದ ಆರ್ಥಿಕ ಭದ್ರತೆ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ EPFO ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.

ಇನ್ನು ಮುಂದೆ PF ಹಣವನ್ನು ವಿತ್‌ಡ್ರಾ ಮಾಡುವಾಗ ಖಾತೆಯಲ್ಲಿ ಕನಿಷ್ಠ 25% ಮೊತ್ತವನ್ನು ಉಳಿಸಿ, ಉಳಿದ ಹಣವನ್ನು ಮಾತ್ರ ಹಿಂಪಡೆಯಲು ಅವಕಾಶ ಇರುತ್ತದೆ. ಇದುವರೆಗೆ ಇಂತಹ ಕನಿಷ್ಠ ಬ್ಯಾಲೆನ್ಸ್ ನಿಯಮ ಇರಲಿಲ್ಲ. ಈ ಹೊಸ ನಿಯಮಕ್ಕೆ ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಅನುಮೋದನೆ ನೀಡಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ನಿವೃತ್ತಿ ನಂತರ ಆರ್ಥಿಕ ಭದ್ರತೆ

ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆ ಜೊತೆಗೆ ಬಡ್ಡಿ ಸೇರಿ PF ಬ್ಯಾಲೆನ್ಸ್ ರೂಪುಗೊಳ್ಳುತ್ತದೆ. ಹೊಸ ನಿಯಮದಿಂದ ನಿವೃತ್ತಿಯ ನಂತರವೂ ಖಾತೆಯಲ್ಲಿ ಕೆಲವು ಹಣ ಉಳಿದು, ಅಗತ್ಯ ಸಂದರ್ಭದಲ್ಲಿ ಆರ್ಥಿಕ ನೆರವಾಗಲಿದೆ ಎಂದು EPFO ಹೇಳಿದೆ.

ಜುಲೈ 1ರಿಂದ ಎರಡು ಹೊಸ ಯೋಜನೆಗಳು

ಕೇಂದ್ರ ಸರ್ಕಾರ EPFOಗೆ ಸಂಬಂಧಿಸಿದಂತೆ EPF-1952 ಮತ್ತು EPS-1995 ಯೋಜನೆಗಳ ಬದಲಿಗೆ EPF-2026 ಹಾಗೂ EPS-2026 ಯೋಜನೆಗಳನ್ನು ಪರಿಚಯಿಸಲು ಯೋಜಿಸಿದೆ.

ಈ ಯೋಜನೆಗಳ ಭಾಗವಾಗಿ:

  • ಹೊಸ EPFO ಪೋರ್ಟಲ್ ಆರಂಭವಾಗಲಿದೆ.
  • PF ಕ್ಲೇಮ್‌ಗಳ ಆಟೋ ಸೆಟಲ್‌ಮೆಂಟ್ ವ್ಯವಸ್ಥೆ ಜಾರಿಯಾಗಲಿದೆ.
  • ಐಟಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಪ್‌ಗ್ರೇಡ್ ಮಾಡಲಾಗುತ್ತದೆ.
  • ಇದರಿಂದ PF ಕ್ಲೇಮ್‌ಗಳ ಪ್ರಕ್ರಿಯೆ ಇನ್ನಷ್ಟು ವೇಗವಾಗಲಿದೆ.

ಈ ಐಟಿ ಅಪ್‌ಡೇಟ್ ಹಿನ್ನೆಲೆಯಲ್ಲಿ ಜೂನ್ 30ರವರೆಗೆ EPFO ವೆಬ್‌ಸೈಟ್ ಹಾಗೂ UMANG ಆ್ಯಪ್‌ನಲ್ಲಿ ಕೆಲವು PF ಆನ್‌ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜುಲೈ ತಿಂಗಳಿಂದ ಸೇವೆಗಳು ಮತ್ತೆ ಲಭ್ಯವಾಗಲಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ