LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಯ್ಯೋ.. ‘AI’ ಮಾಡಿದ ಎಡವಟ್ಟು : ಸಣ್ಣ ತಪ್ಪು, ಕಂಪನಿಗೆ ಬರೋಬ್ಬರಿ 4,800 ಕೋಟಿ ರೂ. ನಷ್ಟ!

ಎಐ (AI) ಅಳವಡಿಕೆಯಿಂದ ಕೆಲಸಗಳು ವೇಗವಾಗಿ ಆಗುತ್ತಿವೆಯಾದರೂ, ಸಣ್ಣ ನಿರ್ಲಕ್ಷ್ಯ ವಹಿಸಿದರೂ ಕಂಪನಿಗಳ ಬ್ಯಾಂಕ್ ಖಾತೆ ಖಾಲಿಯಾಗುತ್ತವೆ ಎಂಬುದನ್ನು ತಂತ್ರಜ್ಞಾನ ಲೋಕ ಊಹಿಸಿರಲಿಲ್ಲ. ‘ಕ್ಲಾಡ್’ (Claude) ಎಐ ಪ್ಲಾಟ್‌ಫಾರ್ಮ್ ಬಳಸುತ್ತಿದ್ದ ಕಂಪನಿಯೊಂದು, ತಮ್ಮ ಉದ್ಯೋಗಿಗಳ ಬಳಕೆಗೆ ಮಿತಿ (Limit) ಹಾಕುವುದನ್ನು ಮರೆತಿದೆ. ಅಷ್ಟೇ.. ಕೇವಲ ಒಂದೇ ತಿಂಗಳಲ್ಲಿ ಆ ಕಂಪನಿ ಸಾವಿರಾರು ಕೋಟಿ ರೂಪಾಯಿಗಳನ್ನು ಕಟ್ಟಬೇಕಾಗಿ ಬಂದಿದೆ.

500 ಮಿಲಿಯನ್ ಡಾಲರ್ ಬಿಲ್‌ನ ಹಿಂದಿನ ಅಸಲಿ ಕಥೆ: ಕೃತಕ ಬುದ್ಧಿಮತ್ತೆಯ (AI) ಬಳಕೆ ಹೆಚ್ಚಾದ ನಂತರ ಕಂಪನಿಗಳ ಕೆಲಸ ಸುಲಭವಾಗಿದೆ. ಆದರೆ, ಸರಿಯಾದ ಯೋಜನೆ ಮತ್ತು ನಿಗಾ ಇಲ್ಲದೆ ಎಐ ಬಳಸಿದರೆ ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಖ್ಯಾತ ಸಂಸ್ಥೆ ‘ಆಂಥ್ರೋಪಿಕ್’ನ (Anthropic) ಕ್ಲಾಡ್ ಪ್ಲಾಟ್‌ಫಾರ್ಮ್‌ಗೆ ತಮ್ಮ ಉದ್ಯೋಗಿಗಳ ಪ್ರವೇಶದ ಮೇಲೆ ಯಾವುದೇ ನಿರ್ಬಂಧ ವಿಧಿಸದ ಕಾರಣ, ಆ ಕಂಪನಿ ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ 500 ಮಿಲಿಯನ್ ಡಾಲರ್ (ಸುಮಾರು 4,800 ಕೋಟಿ ರೂಪಾಯಿ) ಬಿಲ್ ಪಾವತಿಸಿದೆ. ತಂತ್ರಜ್ಞಾನ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ಐಟಿ ವೈಫಲ್ಯಗಳಲ್ಲಿ ಒಂದೆಂದು ಎಐ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.

ವರದಿಯ ಪ್ರಕಾರ, ಕಂಪನಿಯು ತನ್ನ ಉದ್ಯೋಗಿಗಳಿಗೆ ಕ್ಲಾಡ್ ಎಐ ಅನ್ನು ಯಾವುದೇ ನಿರ್ಬಂಧವಿಲ್ಲದೆ ಬಳಸಲು ಅವಕಾಶ ನೀಡಿತ್ತು. ಎಷ್ಟು ಖರ್ಚಾಗುತ್ತಿದೆ? ಯಾರು ಎಷ್ಟು ಬಳಸುತ್ತಿದ್ದಾರೆ? ಎಂಬುದನ್ನು ಲೈವ್ ಆಗಿ ನೋಡಲು ಯಾವುದೇ ಡ್ಯಾಶ್‌ಬೋರ್ಡ್‌ಗಳಾಗಲಿ ಅಥವಾ ಬಜೆಟ್ ಎಚ್ಚರಿಕೆಗಳಾಗಲಿ (Alerts) ಇರಲಿಲ್ಲ. ಪೂರ್ಣ ಸ್ವಾತಂತ್ರ್ಯ ಸಿಕ್ಕಿದ್ದರಿಂದ, ಉದ್ಯೋಗಿಗಳು ಮಾನವ ಹಸ್ತಕ್ಷೇಪವಿಲ್ಲದೆ ತಾವೇ ಕೆಲಸ ಮಾಡುವ ಎಐ ಕೋಡಿಂಗ್ ಏಜೆಂಟ್‌ಗಳನ್ನು ರಚಿಸಿದರು. ಇವು ಹಿನ್ನೆಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ, ಲಕ್ಷಾಂತರ ಪುಟಗಳ ಟೆಕ್ಸ್ಟ್ ಅನ್ನು ಪ್ರೊಸೆಸ್ ಮಾಡಿದವು.

ಟೋಕನ್ ಅಂದರೆ ಏನು? ಖರ್ಚು ಹೇಗೆ ಹೆಚ್ಚಾಯಿತು? ಎಐ ಪ್ಲಾಟ್‌ಫಾರ್ಮ್‌ಗಳು ‘ಟೋಕನ್’ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ನಾವು ಕೇಳುವ ಪ್ರತಿಯೊಂದು ಪ್ರಶ್ನೆ ಮತ್ತು ಎಐ ನೀಡುವ ಪ್ರತಿ ಉತ್ತರದ ಹಿಂದೆ ನಿರ್ದಿಷ್ಟ ಸಂಖ್ಯೆಯ ಟೋಕನ್‌ಗಳು ಖರ್ಚಾಗುತ್ತವೆ. ಉದ್ಯೋಗಿಗಳು ಸೃಷ್ಟಿಸಿದ ಲೂಪ್ ಪ್ರಕ್ರಿಯೆಯಿಂದಾಗಿ ಟೋಕನ್ ಬಳಕೆ ಅನಿರೀಕ್ಷಿತ ಮಟ್ಟಕ್ಕೆ ಏರಿ, ಕಂಪನಿಗೆ 4,800 ಕೋಟಿ ರೂಪಾಯಿಗಳ ಬೃಹತ್ ಬಿಲ್ ಬಂತು.

ಮೈಕ್ರೋಸಾಫ್ಟ್ ಮತ್ತು ಉಬರ್ ಕೂಡ ಕಂಗಾಲು : ಸರಿಯಾದ ಯೋಜನೆ ಇಲ್ಲದೆ ಎಐ ಸಾಧನಗಳನ್ನು ಬಳಸುತ್ತಿರುವುದರಿಂದ ದಿಗ್ಗಜ ಕಂಪನಿಗಳು ಕೂಡ ತೊಂದರೆ ಅನುಭವಿಸುತ್ತಿವೆ:

  • ಮೈಕ್ರೋಸಾಫ್ಟ್: ಪ್ರತಿ ಎಂಜಿನಿಯರ್ ಎಐ ಕೋಡಿಂಗ್‌ಗಾಗಿ ತಿಂಗಳಿಗೆ 500 ರಿಂದ 2,000 ಡಾಲರ್ (ರೂ. 40 ಸಾವಿರದಿಂದ 1.6 ಲಕ್ಷ) ವರೆಗೆ ಖರ್ಚು ಮಾಡುತ್ತಿರುವುದನ್ನು ಗಮನಿಸಿ, ಇತ್ತೀಚೆಗೆ ತನ್ನ ಆಂತರಿಕ ಕ್ಲಾಡ್ ಕೋಡ್ ಪರವಾನಗಿಗಳನ್ನು ರದ್ದುಗೊಳಿಸಲು ಪ್ರಾರಂಭಿಸಿದೆ ಎಂದು ‘ದಿ ವೆರ್ಜ್’ ವರದಿ ಮಾಡಿದೆ.
  • ಉಬರ್: ಉಬರ್ ಕಂಪನಿ ತನ್ನ 2026ರ ಎಐ ಬಜೆಟ್ ಅನ್ನು ಏಪ್ರಿಲ್ ವೇಳೆಗೆ ಪೂರ್ತಿ ಖಾಲಿ ಮಾಡಿದೆ. ಎಐ ವೆಚ್ಚಗಳನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಕಂಪನಿಯ ಸಿಒಒ ಸ್ವತಃ ಒಪ್ಪಿಕೊಂಡಿದ್ದಾರೆ.

ಅಮೆಜಾನ್‌ಗೆ ತಪ್ಪದ ‘ಟೋಕನ್ ಮ್ಯಾಕ್ಸಿಂಗ್’ ತಲೆನೋವು: ಅಮೆಜಾನ್ ಸಂಸ್ಥೆ ‘ಕಿರೋರಾಂಕ್’ (KiroRank) ಎಂಬ ಎಐ ಲೀಡರ್‌ಬೋರ್ಡ್ ಆರಂಭಿಸಿತ್ತು. ಹೆಚ್ಚು ಟೋಕನ್ ಬಳಸುವವರಿಗೆ ಉತ್ತಮ ಪರ್ಫಾರ್ಮೆನ್ಸ್ ರೇಟಿಂಗ್ ಸಿಗುತ್ತದೆ ಎಂಬ ಭಯ ಉದ್ಯೋಗಿಗಳಲ್ಲಿ ಶುರುವಾಯಿತು. ರೇಟಿಂಗ್‌ಗಾಗಿ ಉದ್ಯೋಗಿಗಳು ಅರ್ಥವಿಲ್ಲದ ಕೆಲಸಗಳನ್ನು ಎಐ ಏಜೆಂಟ್‌ಗಳಿಗೆ ಒಪ್ಪಿಸಲು ಪ್ರಾರಂಭಿಸಿದರು. ಇದನ್ನು ತಂತ್ರಜ್ಞಾನ ಲೋಕದಲ್ಲಿ ‘ಟೋಕನ್ ಮ್ಯಾಕ್ಸಿಂಗ್’ (Token-maxing) ಎಂದು ಕರೆಯಲಾಗುತ್ತದೆ. ಈ ಎಡವಟ್ಟಿನಿಂದಾಗಿ ಅಮೆಜಾನ್ ಆ ಲೀಡರ್‌ಬೋರ್ಡ್ ಅನ್ನು ಮುಚ್ಚಬೇಕಾಯಿತು.

ಈ ಘಟನೆಗಳ ನಂತರ ಜಾಗತಿಕ ಕಂಪನಿಗಳು ಈಗ ಎಚ್ಚೆತ್ತುಕೊಂಡಿವೆ. ಎಐ ಬಳಕೆಯನ್ನು ಟ್ರ್ಯಾಕ್ ಮಾಡಲು ಮತ್ತು ಖರ್ಚಿನ ಬಗ್ಗೆ ಎಚ್ಚರಿಸಲು ವಿಶೇಷ ಡ್ಯಾಶ್‌ಬೋರ್ಡ್‌ಗಳನ್ನು ಅಳವಡಿಸಿಕೊಳ್ಳುತ್ತಿವೆ. ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆದರೂ, ಸೂಕ್ತ ಐಟಿ ನಿಯಂತ್ರಣ (IT Governance) ಇಲ್ಲದಿದ್ದರೆ ಕಂಪನಿಗಳು ದಿವಾಳಿಯಾಗುವುದು ಖಚಿತ ಎಂಬುದನ್ನು ಈ 4,800 ಕೋಟಿ ರೂಪಾಯಿಗಳ ಎಡವಟ್ಟು ಸಾಬೀತುಪಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ