LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Gold Loan : ‘ಬ್ಯಾಂಕ್‌’ನಿಂದ ಗೋಲ್ಡ್ ಲೋನ್ ಪಡೆಯುತ್ತಿದ್ದೀರಾ..? ನಿಮಗೊಂದು ಗುಡ್ ನ್ಯೂಸ್..!

ಚಿನ್ನದ ಸಾಲ ಪಡೆಯಲು ಬಯಸುವವರಿಗೆ ಸಿಹಿ ಸುದ್ದಿ. ಬ್ಯಾಂಕ್ ಆಫ್ ಬರೋಡಾ (Bank of Baroda) ಕಡಿಮೆ ಬಡ್ಡಿದರದಲ್ಲಿ ‘ಅಗ್ರಿ ಗೋಲ್ಡ್ ಲೋನ್’ (ಕೃಷಿ ಚಿನ್ನದ ಸಾಲ) ನೀಡುತ್ತಿದೆ. ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆಯಲು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಸಾಲವನ್ನು ಒಂದು ವರ್ಷದೊಳಗೆ ಮರುಪಾವತಿಸಬೇಕಾಗುತ್ತದೆ. ಜೊತೆಗೆ, ಈ ಸಾಲಕ್ಕೆ ಯಾವುದೇ ಪ್ರಕ್ರಿಯೆ ಶುಲ್ಕ (Processing Fee) ಇರುವುದಿಲ್ಲ.

  • ಸಾಲದ ಮೊತ್ತ: ಗರಿಷ್ಠ 50 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು.
  • ಅರ್ಹತೆ: ಭಾರತೀಯ ಪ್ರಜೆಯಾಗಿರಬೇಕು ಮತ್ತು ಚಿನ್ನಾಭರಣಗಳ ಒಡೆತನ ಹೊಂದಿರಬೇಕು.
  • ಚಿನ್ನದ ಗುಣಮಟ್ಟ: 18 ಕ್ಯಾರೆಟ್ ಚಿನ್ನವನ್ನೂ ಅಡಮಾನವಿಟ್ಟು ಸಾಲ ಪಡೆಯಬಹುದು.
  • ಸಾಲದ ಮಿತಿ: ನೀವು ಅಡಮಾನವಿಡುವ ಚಿನ್ನದ ಮೌಲ್ಯದ ಶೇ. 80ರಷ್ಟು ಸಾಲ ಪಡೆಯಬಹುದು.
  • ಬಳಕೆ: ಈ ಸಾಲವನ್ನು ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು.

ದಂಡವಿಲ್ಲದ ಮುಂಗಡ ಮರುಪಾವತಿ

ನೀವು ಸಾಲವನ್ನು ಅವಧಿಗೂ ಮುನ್ನವೇ ಮರುಪಾವತಿಸಿದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. 3 ಲಕ್ಷ ರೂಪಾಯಿವರೆಗಿನ ಸಾಲವನ್ನು ಮುಂಗಡವಾಗಿ ಪಾವತಿಸಿದರೆ ಶುಲ್ಕಗಳಿಂದ ವಿನಾಯಿತಿ ನೀಡಲಾಗುತ್ತದೆ. ರೈತರಿಗೆ ಬೆಳೆ ಕೈಗೆ ಬಂದಾಗ ಪಾವತಿಸುವಂತೆ ಸೌಲಭ್ಯ ಕಲ್ಪಿಸಲಾಗಿದೆ. ಅಸಲು ಅಥವಾ ಬಡ್ಡಿ, ಯಾವುದನ್ನಾದರೂ ಪಾವತಿಸಬಹುದು.

ಪ್ರಕ್ರಿಯೆ ಶುಲ್ಕ (Processing Fee) ಇಲ್ಲ

ಸಾಮಾನ್ಯವಾಗಿ ಸಾಲ ಪಡೆಯುವಾಗ ಬ್ಯಾಂಕ್‌ಗಳು ಡಾಕ್ಯುಮೆಂಟೇಶನ್ ಮತ್ತು ಪ್ರಕ್ರಿಯೆಗಾಗಿ ಶುಲ್ಕವನ್ನು ವಿಧಿಸುತ್ತವೆ. ಆದರೆ, ಅಗ್ರಿ ಗೋಲ್ಡ್ ಲೋನ್ ಪಡೆಯುವ ರೈತರಿಗೆ ಬ್ಯಾಂಕ್ ಆಫ್ ಬರೋಡಾ ವಿನಾಯಿತಿ ನೀಡಿದೆ. 3 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಪ್ರಕ್ರಿಯೆ ಶುಲ್ಕ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಪ್ರಕ್ರಿಯೆ ಶುಲ್ಕ ಮತ್ತು ಜಿಎಸ್‌ಟಿ (GST) ಅನ್ವಯವಾಗುತ್ತದೆ. 3 ಲಕ್ಷದೊಳಗಿನ ಸಾಲಕ್ಕೆ ಒಂದು ವರ್ಷದ MCLR ಬಡ್ಡಿದರವನ್ನು ವಿಧಿಸಲಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ